ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್ ಅಭಿನಯದ `ಟಗರು’ ಸಿನಿಮಾ ನೂರು ದಿನ ಪೂರೈಸಿದೆ. ಕೆಪಿ ಶ್ರೀಕಾಂತ್ ಮೊದಲ ಬಾರಿಗೆ ನಿರ್ಮಾಣ ಮಾಡಿರುವ ಸಿನಿಮಾ ಇದಾಗಿದೆ. .2018ರ ವರ್ಷದಲ್ಲಿ ಶತ ದಿನ ಪೂರೈಸಿದ ಮೊದಲನೇ ಸಿನಿಮಾ ಟಗರು ಆಗಿದೆ. .ನಿರ್ದೇಶಕ ಸೂರಿ ಸಂತೋಷ್ ಚಿತ್ರಮಂದಿರದಲ್ಲಿ ಹಮ್ಮಿಕೊಂಡಿದ್ದ ಆಚರಣೆಯವಲ್ಲಿ ಭಾಗವಹಿಸಿದ್ದರು.ಟಗರು ಕಟೌಟ್‍ಗೆ ಹೂವಿನಹಾರ ಹಾಕಿ ಪಟಾಕಿ ಸಿಡಿಸಿದ ಅಭಿಮಾನಿಗಳು ಚಿತ್ರತಂಡವನ್ನ ಸಂತೋಷ್ ಚಿತ್ರಮಂದಿರಕ್ಕೆ ಬರಮಾಡಿಕೊಂಡರು..ನಟ ಶಿವರಾಜ್ ಕುಮಾರ್. ಡಾಲಿ ಧನಂಜಯ್, ಮಾನ್ವಿತಾ, ನಿರ್ದೇಶಕ ಸೂರಿ, ನಿರ್ಮಾಪಕ ಶಶಾಂಕ್ ಸೇರಿದಂತೆ ಇಡೀ ಟಗರು ಟೀಂ `ಟಗರು ಸೆಂಚುರಿ’ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು..Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos