ಕುರಿಗಾಹಿ ಹನುಮಂತಪ್ಪನ ರಾಗಕ್ಕೆ ಮನಸೋತ ಕರ್ನಾಟಕ!

ಕುರಿ ಕಾಯುತ್ತಿರುವಾಗ ಕುರಿಗಾಹಿಯೊಬ್ಬ ಹಾಗೆ ಸುಮ್ಮನೆ ಹಾಡಿದ ಹಾಡೊಂದು ಈಗ ಕರ್ನಾಟಕದ ಜನತೆಯ ಮನಸ್ಸು ತಟ್ಟಿದೆ!
ಕುರಿಗಾಹಿ ಹನುಮಂತಪ್ಪನ ರಾಗಕ್ಕೆ ಮನಸೋತ ಕರ್ನಾಟಕ!
ಕುರಿಗಾಹಿ ಹನುಮಂತಪ್ಪನ ರಾಗಕ್ಕೆ ಮನಸೋತ ಕರ್ನಾಟಕ!
ಗದಗ: ಕುರಿ ಕಾಯುತ್ತಿರುವಾಗ ಕುರಿಗಾಹಿಯೊಬ್ಬ ಹಾಗೆ ಸುಮ್ಮನೆ ಹಾಡಿದ ಹಾಡೊಂದು ಈಗ ಕರ್ನಾಟಕದ ಜನತೆಯ ಮನಸ್ಸು ತಟ್ಟಿದೆ! 
ಗದಗ ಜಿಲ್ಲೆ ಶಿರಹಟ್ಟಿಯ ಕುರಿಗಾಹಿ ಹನುಮಂತ ಬಟ್ಟೂರ ಅವರ ಹಾಡೀಗ ವಾಟ್ಸ್​ಆ್ಯಪ್, ಫೇಸ್‌ಬುಕ್‌ ಸೇರಿ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಹೌದು, ಶಿವರಾಜ್‌ಕುಮಾರ್  ಅಭಿನಯದ ಗಲಾಟೆ ಅಳಿಯಂದ್ರು ಚಿತ್ರದ ಸಾಗರಿಯೇ ಸಾಗರಿಯೇ ಹಾಡು ಹಾಡುತ್ತಾ ತನ್ನ ಮೊಬೈಲ್ ಸೆಲ್ಫಿಯಲ್ಲಿ ರೆಕಾರ್ಡ್‌ ಮಾಡಿ ಫೇಸ್‌ಬುಕ್‌ಗೆ ಹಾಕಿದ್ದ ಹನುಮಂತಪ್ಪ ಹಾಡೀಗ ಎಲ್ಲರ ಮನಗೆದ್ದಿದೆ.
ಈತನ ಹಾಡನ್ನು ಕೇಳಿ ಮೆಚ್ಚಿದ ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ಮತ್ತಿತರೆ ಖ್ಯಾತ ಗಾಯಕರು ಸಹ ಅವರಿಗೆ ಶಹಬಾಸ್ ಎಂದಿದ್ದಾರೆ.
ಹನುಮಂತ ಹೈಸ್ಕೂಲ್‌ವರೆಗೂ ಮಾತ್ರ ಶಿಕ್ಷಣ ಪಡೆದಿದ್ದು, ಬದುಕಿನ ಅನಿವಾರ್ಯತೆಯಿಂದ ಕುರಿ ಕಾಯುವ ಕುಲವೃತ್ತಿ  ಆಯ್ದುಕೊಂಡಿದ್ದಾರೆ. ಚಿಕ್ಕಂದಿನಿಂದ ಸಿನಿಮಾ ನೋಡುವ ಗೀಳು.ಹೊಂದಿದ್ದ ಇವರಿಗೆ ರಾಜ್‌ಕುಮಾರ್ ಎಂದರೆ ಬಹು ಪ್ರೀತಿ. ಹಾಗೆಯೇ ಕನ್ನಡದ ಸಂಗೀತ ಪ್ರಧಾನ ರಿಯಾಲಿಟಿ ಶೋಗಳನ್ನು ನೋಡುವುದೆಂದರೆ ಇವರಿಗೆ ಅಚ್ಚು ಮೆಚ್ಚು.
ಇನ್ನು ಸಾಮಾನ್ಯವಾಗಿ ಎಲ್ಲ ಕುರಿಗಾಹಿಗಳು ಕಲಾವಿದರೆ ಆಗಿರುತ್ತಾರೆ. ಅವರು  ಕುರಿಗಳನ್ನು ಕಾಯುತ್ತಾ ಬೇಸರವಾದಾಗ ಹಾಡುತ್ತಾ ದಿನಪೂರ್ತಿ ಅಡವಿಯಲ್ಲಿ ಮೈಮರೆಯುತ್ತಾರೆ. ಆದರೆ ಹನುಮಂತಪ್ಪ ಮಾತ್ರ ತಾನು ಹಾಡಿದ ಹಾಡನ್ನು ಮೊಬೈಲ್ ರೆಕಾರ್ಡ್ ಮಾಡಿ ಫೇಸ್ ಬುಕ್ ನಲ್ಲಿ ಹಾಇದ್ದ ಕಾರಣ ರಾತ್ರೋ ರಾತ್ರಿ ಫೇಮಸ್ ಆಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com