ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಬಾಸ್ ಯಾರು ಎನ್ನುವ ಚರ್ಚೆ ಶುರುವಾದ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ತಮ್ಮ ಕಾರಿಗೆ BOSS ಎನ್ನುವ ನಂಬರ್ ಪಡೆದಿದ್ದಾರೆ.
ಯಶ್ ತಮ್ಮ ಹೊಸ ಬೆಂಜ್ ಕಾರಿಗೆ KA 05 MY 8055 ನಂಬರ್ ಅನ್ನು ಪಡೆದಿದ್ದಾರೆ. ಇದಕ್ಕಾಗಿ ಯಶ್ ಬರೋಬ್ಬರಿ 78 ಸಾವಿರ ರುಪಾಯಿ ನೀಡಿದ್ದಾರೆ. ಇತ್ತೀಚೆಗಷ್ಟೆ ನಡೆದ ಹರಾಜಿನಲ್ಲಿ ಯಶ್ ಪರವಾಗಿ ರಾಕೇಶ್ ಎಂಬುವರು ಹರಾಜಿನಲ್ಲಿ ಪಾಲ್ಗೊಂಡಿದ್ದರು.
ಈ ನಂಬರ್ ಇಷ್ಟಪಟ್ಟಿದ್ದ ಯಶ್ ಅವರು ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ ಅದನ್ನು ಖರೀದಿಸಲು ಸೂಚಿಸಿದ್ದಾಗಿ ರಾಕೇಶ್ ಹೇಳಿದ್ದಾರೆ. ಇನ್ನು ಹರಾಜಿನಲ್ಲಿ ಯಾರೂ ಬಿಡ್ ಮಾಡದ ಹಿನ್ನೆಲೆಯಲ್ಲಿ ಕಡಿಮೆ ಮೊತ್ತಕ್ಕೆ ಯಶ್ ಗೆ ಬಾಸ್ ನಂಬರ್ ಸಿಕ್ಕಿದೆ.