ಅಚ್ಚರಿ ವಿಚಾರ ಏನೆಂದರೆ, ಈ ಚಿತ್ರದಲ್ಲಿ ಸುನೀಲ್ ಬಣ್ಣ ಹಚ್ಚಲಿರುವುದು ಮುಖ್ಯ ಖಳನಾಯಕನ ಪಾತ್ರಕ್ಕೆ. ಒಬ್ಬ ಕ್ರೂರ ರಾಜನಾಗಿ ಅವರು ಕಾಣಿಸಿಕೊಳ್ಳಲಿದ್ದು, ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಪಾತ್ರ ನಿಭಾಯಿಸಲಿದ್ದಾರೆ. ಬೆಳ್ಳಿಪರದೆಯಲ್ಲಿ ಸುನೀಲ್ ಮತ್ತು ವಿಜಯ್ ಮುಖಾಮುಖಿ ಆಗಲಿರುವ ಹಲವು ದೃಶ್ಯಗಳು ಬರಲಿವೆ. ಅವನ್ನೆಲ್ಲ ರಾಜಸ್ಥಾನದ ಮರುಭೂಮಿಯಲ್ಲಿ ಸೆರೆಹಿಡಿಯಬೇಕು ಎಂಬುದು ‘ಪಿರಂಗಿಪುರ’ ಬಳಗದ ಆಲೋಚನೆಯಾಗಿದೆ.