'ವಿಕ್ಟರಿ ಮುಂದುವರೆದ ಭಾಗ' ದಲ್ಲಿ ಶರಣ್ ಗೆ ಅಪೂರ್ವ ಜೋಡಿ

ಹರಿ ಸಂತೋಷ್ ಅವರ ನಿರ್ದೇಶನದಲ್ಲಿ ವಿಕ್ಟರಿ ಮುಂದುವರೆದ ಭಾಗ ತೆರೆ ಮೇಲೆ ಬರುತ್ತಿದ್ದು, ಶರಣ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಹಿಂದಿನ ವಿಕ್ಟರಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಅಸ್ಮಿತ ಸೂದ್ ಮತ್ತೊಮ್ಮೆ ಶರಣ್ ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.
ಶರಣ್
ಶರಣ್
Updated on
ಹರಿ ಸಂತೋಷ್ ಅವರ  ನಿರ್ದೇಶನದಲ್ಲಿ ವಿಕ್ಟರಿ ಮುಂದುವರೆದ ಭಾಗ ತೆರೆ ಮೇಲೆ ಬರುತ್ತಿದ್ದು,  ಶರಣ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಹಿಂದಿನ ವಿಕ್ಟರಿ ಚಿತ್ರದಲ್ಲಿ  ನಾಯಕಿಯಾಗಿ ನಟಿಸಿದ್ದ ಅಸ್ಮಿತ ಸೂದ್ ಮತ್ತೊಮ್ಮೆ ಶರಣ್ ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಎರಡು ನಾಯಕಿಯರು - ಅಪೂರ್ವ ಮತ್ತು ಅಸ್ಮಿತಾ ಸೂದ್ - ಇಬ್ಬರೂ ಶರಣ್ ಜೊತೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ.
ಅಪೂರ್ವ ಅವರನ್ನು ಸಿನಿಮಾ ಪ್ರಪಂಚಕ್ಕೆ ರವಿಚಂದ್ರನ್ ಪರಿಚಯಿಸಿದ್ದರು.  ಆಕೆ ಹೆಸರಿನಲ್ಲಿಯೇ ರವಿಚಂದ್ರನ್  ಚಿತ್ರ ನಿರ್ದೇಶಿಸಿ ಅವರೇ ನಾಯಕರಾಗಿಯೂ ಅಭಿನಯಿಸಿದ್ದರು. ನಂತರ ಅಪೂರ್ವ ಒಂದು ವರ್ಷಗಳ ನಂತರ ವಿಶ್ರಾಂತಿ ತೆಗೆದುಕೊಂಡು ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದಾರೆ.
"ನನ್ನ ಚೊಚ್ಚಲ ಚಿತ್ರದ ನಂತರ,  ನನ್ನಗೆ ಹೊಂದಾಣಿಕೆ ಬಯಸುವ ರೀತಿಯ ಚಲನಚಿತ್ರಗಳಲ್ಲಿ ಅಭಿನಯಿಸಲು  ಬಯಸುತ್ತೇನೆ. ಅದಕ್ಕಾಗಿ ಸಮಯವನ್ನು ತೆಗೆದುಕೊಂಡಿದೆ. ನನ್ನ ವಿರಾಮದ ಸಮಯದಲ್ಲಿ, ನಾನೊಬ್ಬ ನಟಿಯಾಗಿ  ಗುರುತಿಸಿಕೊಳ್ಳಲು ಈ ಚಿತ್ರಆಯ್ಕೆ ಮಾಡಿಕೊಂಡೆ "ಎಂದು ಅವರು ಹೇಳುತ್ತಾರೆ.
"ಇದು ನನ್ನ ಮೊದಲ  ಕಮರ್ಷಿಯಲ್ ಚಿತ್ರ  .ಎರಡನೆಯ ಚಿತ್ರದ ಬಗ್ಗೆ ನಾನು ಅಂತಿಮವಾಗಿ ಮಾತನಾಡಬಹುದಾದ ಒಂದು ಪರಿಹಾರ" ಎಂದು ಅವಳು ಹೇಳುತ್ತಾಳೆ.  ಶರಣ್ ಅವರೊಂದಿಗೆ ನಿರ್ದೇಶಕ ತರುಣ್ ಸುಧೀರ್ ಚಿತ್ರದ ಭಾಗವಾಗಿರುವುದರಿಂದ ಅವರು ಹೆಚ್ಚಿನ ಬೆಂಬಲ ನೀಡಿದ್ದಾರೆ ಎಂದು ಅವರು ಹೇಳುತ್ತಾರೆ.
 ನಿರ್ಮಾಪಕ  ತರುಣ್ ಶಿವಪ್ಪ ಮಾತನಾಡಿ, ನಿರ್ದೇಶಕ ಹರಿ ಸಂತೋಷ್  ಚಿತ್ರವನ್ನು ಚೆನ್ನಾಗಿ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ. ಅಪೂರ್ವ ನಾಯಕಿಯಾಗಿದ್ದು,  ಹಾಸ್ಯ, ರೋಮಾಂಚಿಕ್ ಚಿತ್ರವಾಗಿದ್ದು, ಶರಣ್ ಸುತ್ತ ಸಾಗುತ್ತದೆ .  ರವಿಶಂಕರ್ , ನಾಸಿರ್  ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ಎಲ್ಲರೂ ಹಾಸ್ಯ ರಸದೌತಣ ಉಣಬಡಿಸಲಿದ್ದಾರೆ ಎಂದರು. 
ಈ ಚಿತ್ರಕ್ಕೆ ಅರ್ಜನ್ ಜನ್ಯಾ ಸಂಗೀತ ಸಂಯೋಜಿಸಲಿದ್ದು,  ಗುರು ಪ್ರಶಾಂತ್ ರೈ ಕ್ಯಾಮರಾ ಅವರ  ಕೆಲಸವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com