ವಿರೋಧ ಹಿನ್ನೆಲೆ ಪುತ್ರ ತೈಮೂರು ಹೆಸರು ಬದಲಿಸಲು ಸೈಫ್ ನಿರ್ಧರಿಸಿದ್ದರು: ನಟಿ ಕರೀನಾ

ಪುತ್ರನಿಗೆ ತೈಮೂರ್ ಅಲಿಖಾನ್ ಎಂದು ಹೆಸರಿಟಿದ್ದಕ್ಕೆ ದೇಶದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದ್ದ ಹಿನ್ನಲೆಯಲ್ಲಿ ಹೆಸರು ಬದಲಿಸಲು ಸೈಫ್ ಅಲಿಖಾನ್ ನಿರ್ಧರಿಸಿದ್ದರು ಎಂದು ನಟಿ ಕರೀನಾ ಕಪೂರ್ ಅವರು ಶನಿವಾರ ಹೇಳಿದ್ದಾರೆ...
ನಟಿ ಕರೀನಾ ಕಪೂರ್ ಹಾಗೂ ಅವರ ಪುತ್ರ ತೈಮೂರ್
ನಟಿ ಕರೀನಾ ಕಪೂರ್ ಹಾಗೂ ಅವರ ಪುತ್ರ ತೈಮೂರ್
Updated on
ನವದೆಹಲಿ: ಪುತ್ರನಿಗೆ ತೈಮೂರ್ ಅಲಿಖಾನ್ ಎಂದು ಹೆಸರಿಟಿದ್ದಕ್ಕೆ ದೇಶದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದ್ದ ಹಿನ್ನಲೆಯಲ್ಲಿ ಹೆಸರು ಬದಲಿಸಲು ಸೈಫ್ ಅಲಿಖಾನ್ ನಿರ್ಧರಿಸಿದ್ದರು ಎಂದು ನಟಿ ಕರೀನಾ ಕಪೂರ್ ಅವರು ಶನಿವಾರ ಹೇಳಿದ್ದಾರೆ. 
ಖಾಸಗಿ ವಾಹನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಭಾರತದ ಮೇಲೆ ದಾಳಿ ನಡೆಸಿದ್ದ ಮಂಗೋಲಿಯನ್ನರ ದೊರೆ ತೈಮೂರ್ ಹೆಸರನ್ನು ಪುತ್ರನಿಗೆ ಇಟ್ಟಿದ್ದಕ್ಕೆ ಸಾರ್ವಜನಿಕರಿಂದ ಆಕ್ಷೇಪಗಳು ವ್ಯಕ್ತವಾಗಿದ್ದವು. ಈ ಹಿನ್ನಲೆಯಲ್ಲಿ ಹೆಸಲು ಬದಲಾವಣೆಗೆ ಸೈಫ್ ನಿರ್ಧರಿಸಿದ್ದರು ಎಂದು ಹೇಳಿದ್ದಾರೆ. 
ಪುತ್ರನ ಹೆಸರು ಕುರಿತಂತೆ ವಿವಾದ ಉಂಟಾದ ಹಿನ್ನಲೆಯಲ್ಲಿ ಪುತ್ರನ ಹೆಸರು ತೈಮೂರ್ ಬದಲಾಗಿ ಫೈಯಾಜ್ ಎಂದು ಬದಲಿಸಲು ಸೈಫ್ ಮುಂದಾಗಿದ್ದರು. ಆದರೆ, ಅದಕ್ಕೆ ನಾನೇ ತಡೆ ಒಡ್ಡಿದ್ದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com