ಸ್ತ್ರೀ ಕೇಂದ್ರಿತ, ಗಟ್ಟಿ ಹಿನ್ನೆಲೆಯುಳ್ಳ ಪಾತ್ರಗಳು ಬೇಕು: ಪೂಜಾ ಗಾಂಧಿ

ದಂಡುಪಾಳ್ಯ ಸರಣಿಯ ಎಲ್ಲಾ ಚಿತ್ರಗಳಲ್ಲಿ ತಾನೇ ನಾಯಕಿಯಾಗಿರುವುದು ನಟಿ ಪೂಜಾಗಾಂಧಿ ಅವರಿಗೆ ಹೆಮ್ಮೆಯ ವಿಚಾರವೆನಿಸಿದೆ.
ಪೂಜಾ ಗಾಂಧಿ
ಪೂಜಾ ಗಾಂಧಿ
Updated on
ಬೆಂಗಳೂರು: ದಂಡುಪಾಳ್ಯ ಸರಣಿಯ ಎಲ್ಲಾ ಚಿತ್ರಗಳಲ್ಲಿ ತಾನೇ ನಾಯಕಿಯಾಗಿರುವುದು ನಟಿ ಪೂಜಾಗಾಂಧಿ ಅವರಿಗೆ ಹೆಮ್ಮೆಯ ವಿಚಾರವೆನಿಸಿದೆ. ದಂಡುಪಾಳ್ಯ 3 ಈ ವಾರ ತೆರೆಕಾಣಲಿರುವ ಹಿನ್ನೆಲೆಯಲ್ಲಿ ಎಕ್ಸ್ ಪ್ರೆಸ್ ಪೂಜಾಗ್ಂಆಧಿ ಅವರನ್ನು ಮಾತಿಗೆ ಆಹ್ವಾನಿಸಿತ್ತು.
ದಂಡುಪಾಳ್ಯ ಸರಣಿಯ ಚಿತ್ರಗಳು ನಿಮಗೆಷ್ಟು ಮುಖ್ಯ ಎಂದು ಕೇಳಲಾದ ಪ್ರಶ್ನೆಗೆ ಪೂಜಾ "ನಾನು 15 ವರ್ಷಗಳಿಂದ ಚಿತ್ರೋದ್ಯಮದಲಿ ತೊಡಗಿಸಿಕೊಂಡಿದ್ದೇನೆ. ಈ ಮೂರು ಚಿತ್ರಗಳು ನನ್ನ ಜೀವನದಲ್ಲಿ ಸಾಕಷ್ಟು ನೆನಪಿನಲ್ಲಿ ಉಳಿಯುವಂತಹಾ ಘಟನೆಗಳನ್ನು ಹೊಂದಿದೆ" ಎಂದಿದ್ದಾರೆ.
ದಂಡುಪಾಳ್ಯ ಚಿತ್ರದಲ್ಲಿ ಅಪರಾಧಗಳನ್ನು ವೈಭವೀಕರಿಸುವುದೇ ಮುಖ್ಯವಾಗಿಲ್ಲ ಎನ್ನುವ ನಟಿ "ದಂಡುಪಾಳ್ಯ ಚಿತ್ರ ಅಪರಾಧವನ್ನೇ ವೈಭವೀಕರಿಸುತ್ತದೆ ಎಂಡು ಜನ ಭಾವಿಸಿದರೆ ಅದು ಅವರ ಕಲ್ಪನೆ ಮಾತ್ರ. ಈ ಹಿಂದೆ ತೆರೆಗೆ ಬಂದ ’ಕಿಲ್ಲಿಂಗ್ ವೀರಪ್ಪನ್’, ’ಗಾಂಧಿ’ ಈ ಚಿತ್ರಗಳಲ್ಲಿಯೂ ಕೊಲೆಯನ್ನೇ ತೋರಿಸಲಾಗಿದೆ. ಜನರು ಇಂತಹಾ ಚಿತ್ರಗಳನ್ನು ಕಂಡು ಕೊಲೆಯಂತಹಾ ಅಪರಾಧ ಕೃತ್ಯಗಳಿಂದಾಗುವ ಅನಾಹುತದ ಬಗೆಗೆ ಅರಿಯಬೇಕು" ಎನ್ನುತ್ತಾರೆ.
ಜನರು ಅಪರಾಧಕ್ಕೆ ಸಂಬಂಧಿಸಿರುವ ನಾಲ್ಕು ಅಥವಾ ಐದು ಕಾರ್ಯಕ್ರಮಗಳನ್ನು ನಿತ್ಯವೂ ವೀಕ್ಷಿಸುತ್ತಾರೆ. ದಿನಪ್ತ್ರಿಕೆಗಳಲ್ಲಿ ಒಂದಾದರೂ ಅಪರಾಧ ಸುದ್ದಿ ಇಲ್ಲದೆ ಇರುವ ದಿನಗಳಿಲ್ಲ. ಹೀಗಿರುವಾಗ ಚಲನಚಿತ್ರಗಳನ್ನಷ್ಟೇ ಏಕೆ ಪರಾಧ ವೈಭವೀಕರಣ ಎಂದು ದೂರುತ್ತಾರೆ? ಎಂದು ಪ್ರಶ್ನಿಸುವ ಪೂಜಾ ದಂಡುಪಾಳ್ಯದಲ್ಲಿ ಕೇವಲ ಕೊಲೆಯಷ್ಟೇ ಇಲ್ಲ, ಸಂದೇಶವೂ ಇದೆ. ’ನಿಮ್ಮ ಸನಿಹದಲ್ಲೇ ದುಷ್ಟರಿದ್ದಾರೆ, ಯಾವ ಕ್ಷಣದಲ್ಲಿಯೂ ಅಪಾಯ ಸಂಭವಿಸಬಹುದು, ಎಚ್ಚರವಾಗಿಇರಿ’ ಎನ್ನುವ ಸಂದೇಶವೂ ಇದೆ. ಇನ್ನು ಚಿತ್ರವನ್ನು ಒಂದು ಮನರಂಜನೆ ಸಾಧನವಾಗಿ ನೋಡಿರಿ ಎಂದು ನಟಿ ಹೇಳುತ್ತಾರೆ.
"ನಾನು ಕ್ರೈಂ ಕಥೆಗಳಲ್ಲದೆ ಬೇರೆ ಕಥೆಗಳನ್ನೂ ಆಯ್ಕೆ ಮಾಡಿಕೊಳ್ಳುತ್ತೇನೆ. ನಾನೊಬ್ಬ ಮಹಿಳೆಯಾಗಿ, ಮಹಿಳೆ ಎಷ್ಟು ಗಟ್ಟಿಯಾಗಿದ್ದಾಳೆ ಎಂದು ತೋರಿಸಬಲ್ಲ ಪಾತ್ರಗಳನ್ನು ಆಯ್ದುಕೊಳ್ಳುತ್ತೇನೆ. ದಂಡುಪಾಳ್ಯದ ಲಕ್ಷ್ಮಿ ಪಾತ್ರವು ಚಿತ್ರದ ಕೇಂದ್ರ ಪಾತ್ರ ಹಾಗೂ ಬಲವಾದ ಹಿನ್ನೆಲೆ ಇರುವ ಪಾತ್ರವಾಗಿದೆ. ದಂಡುಪಾಳ್ಯ ನೊಡಿದ್ದ ತೆಲುಗಿನ ಕೆಲ ನಿರ್ಮಾಪಕರಿಂದ ನನಗೆ ಆಫರ್ ಗಳು ಬಂದಿದ್ದೆ ಹೌದು. ಆದರೆ ನಾನು ಮಹಿಳಾ ಪ್ರಧಾನ ಚಿತ್ರಗಳಲ್ಲಿ ಹೆಚ್ಚು ಕಾಣಿಸಲು ಬಯಸಿದ್ದು ಸಧ್ಯ ನಾನು ತೆಲುಗು ಚಿತ್ರಗಳನ್ನು ಒಪ್ಪಿಕೊಂಡಿಲ್ಲ" ನಟಿ ಹೇಳುತ್ತಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೀಡಿರುವ ತಾತ್ಕಾಲಿಕ ಒಪ್ಪಿಗೆಯ ಕಾರಣ ಈ ವಾರ ಕೆಲ ಚಿತ್ರಗಳು ತೆರೆ ಕಾಣುತ್ತಿದೆ. ಇದರಲ್ಲಿ ಶ್ರೀನಿವಾಸ ರಾಜು ನಿರ್ದೇಶನದ ದಂಡುಪಾಳ್ಯ 3 ಸಹ ಒಂದು. ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಚಿತ್ರ ತೆರೆ ಕಾಣುತ್ತಿದ್ದು ಕನ್ನಡದಲ್ಲಿ 320 ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಮತ್ತು ತೆಲುಗಿನಲ್ಲಿ 600 ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com