ಅಭಿಷೇಕ್ ಚೊಚ್ಚಲ ಸಿನಿಮಾಗೆ ನಾಗಶೇಖರ್ ನಿರ್ದೇಶನ? 'ಅಮರ್' ಚಿತ್ರದ ಟೈಟಲ್?

ಅಂಬರೀಷ್ ಪುತ್ರ ಅಭಿಷೇಕ್ ಗೌಡ ಚೊಚ್ಚಲ ಸಿನಿಮಾಗೆ ಸ್ವಲ್ಪ ಬದಲಾವಣೆಯಾಗಿದೆ. ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಹೊಸ ....
ಪೋಷಕರೊಂದಿಗೆ ಅಭಿಷೇಕ್ ಗೌಡ
ಪೋಷಕರೊಂದಿಗೆ ಅಭಿಷೇಕ್ ಗೌಡ
Updated on: 
ಬೆಂಗಳೂರು: ಅಂಬರೀಷ್ ಪುತ್ರ ಅಭಿಷೇಕ್ ಗೌಡ ಚೊಚ್ಚಲ ಸಿನಿಮಾಗೆ ಸ್ವಲ್ಪ ಬದಲಾವಣೆಯಾಗಿದೆ. ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಹೊಸ ವಿಷಯವೆಂದರೇ ಸಂದೇಶ್ ಪ್ರೊಡಕ್ಷನ್ ನಲ್ಲಿ ಬರುತ್ತಿರುವ ಅಭಿಷೇಕ್ ಹೊಸ ಸಿನಿಮಾಗೆ ನಾಗಶೇಖರ್ ನಿರ್ದೇಶನ ಮಾಡಲಿದ್ದಾರಂತೆ.
ಪವನ್ ಒಡೆಯರ್, ಚೇತನ್  ಕುಮಾರ್ ನಿರ್ದೇಶನದಿಂದ ಹೊರ ಬಂದ ನಂತರ ಪ್ರಾಜೆಕ್ಟ್ ಗೆ ನಾಗಶೇಖರ್ ನಿರ್ದೇಶನ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಆದರೆ ಈ ವಿಷಯದ ಬಗ್ಗೆ ಮಾಹಿತಿ ನೀಡಲು ನಿರ್ದೇಶಕ, ನಿರ್ಮಾಪಕರು ಹಾಗೂ ಕಲಾವಿದರು ಸೇರಿದಂತೆ ನಿರಾಕರಿಸಿದ್ದಾರೆ. 
ಎಲ್ಲವೂ ಅಂದುಕೊಂಡಂತೆ ನಡೆಯುವವರೆಗೂ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ, ಅಧಿಕೃತವಾಗಿ ಘೋಷಿಸಲಾಗುವುದು ಎಂದು ಹೇಳಿದ್ದಾರೆ.
ಅಂಬರೀಷ್-ಸುಮಲತಾ ತಾರಾ ದಂಪತಿ ಪುತ್ರ ಅಭಿಷೇಕ್ ಚೊಚ್ಚಲ ಸಿನಿಮಾ ಎಲ್ಲರಲ್ಲೂ ಅತೀವ ಕುತೂಹಲ ಮೂಡಿಸಿದೆ. ಸಂಜು ಮತ್ತು ಗೀತಾ, ಮೈನಾಹಾಗೂ ಮಾಸ್ತಿಗುಡಿ ಸಿನಿಮಾ ನಿರ್ದೇಶಕ ನಾಗಶೇಖರ್ ಹೆಸರು ಅಭಿಷೇಕ್ ಸಿನಿಮಾ ಸುತ್ತ ಸುತ್ತುತ್ತಿದೆ.
ಸಂದೇಶ್ ಪ್ರೊಡಕ್ಷನ್ ನ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಅಭಿಷೇಕ್ ಸಿನಿಮಾಗೆ ಅಮರ್ ಎಂಬ ಟೈಟಲ್ ಇಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ,
ನಾಗಶೇಖರ್ ತಮ್ಮದೇ ಕಥೆ ಅಥವಾ ತೆಲುಗಿನ ಬರಹಗಾರರಿಂದ ಕಥೆ ಪೆದು ನಿರ್ದೇಶಿಸುತ್ತಾರೆಯೇ ಎಂಬುದು ಇನ್ನೂ ರಹಸ್ಯವಾಗಿದೆ, ತಮ್ಮ ತಂದೆ ಮತ್ತು ತಾಯಿಯ ಹಾದಿಯನ್ನೇ ಅಭಿಷೇಕ್ ಹಿಡಿಯುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com