ಜಾನಿ ಮೇರಾ ನಾಮ್ ಸಿನಿಮಾಗೆ ರಚಿತಾ ರಾಮ್ ಡಬ್ಬಿಂಗ್

ಜಾನಿ ಜಾನಿ ಎಸ್ ಪಾಪ ಸಿನಿಮಾದಲ್ಲಿನ ಪ್ರಿಯಾ ಪಾತ್ರದಲ್ಲಿ ರಚಿತಾ ರಾಮ್ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಕಾಮಿಡಿ ಸಿನಿಮಾದಲ್ಲಿ ನಟಿಸುತ್ತಿರುವ ....
ರಚಿತಾ ರಾಮ್
ರಚಿತಾ ರಾಮ್
ಬೆಂಗಳೂರು: ಜಾನಿ ಜಾನಿ ಎಸ್ ಪಾಪ  ಸಿನಿಮಾದಲ್ಲಿನ ಪ್ರಿಯಾ ಪಾತ್ರದಲ್ಲಿ  ರಚಿತಾ ರಾಮ್ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಕಾಮಿಡಿ ಸಿನಿಮಾದಲ್ಲಿ ನಟಿಸುತ್ತಿರುವ ರಚಿತಾ ರಾಮ್ ಗೆ ತುಂಬಾ ಖುಷಿಯಾಗಿದೆಯಂತೆ. 
ಪ್ರೀತಂ ಗುಬ್ಬಿ ನಿರ್ದೇಶನದ  ಜಾನಿ ಮೇರಾ ನಾಮ್  ಎರಡನೆಯ ಭಾಗ ಜಾನಿ ಜಾನಿ ಎಸ್ ಪಾಪ ಸಿನಿಮಾದಲ್ಲಿ ದುನಿಯಾ ವಿಜಯ್  ಗೆ ನಾಯಕಿಯಾಗಿ ನಟಿಸಿದ್ದಾರೆ. 
ಇದೇ ಮೊದಲ ಬಾರಿಗೆ ಹಾಸ್ಯ ಪಾತ್ರದಲ್ಲಿ ನಟಿಸಿದ್ದು, ಸೆಟ್ ನಲ್ಲಿ ತುಂಬಾ ಹಾಸ್ಯ ನಗು ಇತ್ತು, ನಾನು ಈ ಟೀಮ್ ಅನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಇಷ್ಟು ದಿನಗಳ ಕಾಲ ರಚಿತಾ ಪಾತ್ರಗಳಿಗೆ ಬೇರೆಯವರು ಡಬ್ಬಿಂಗ್ ಹೇಳುತ್ತಿದ್ದರು, ಈಗ ಅವರದೇ ಪಾತ್ರಕ್ಕೇ ಅವರದೇ ಧ್ವನಿ ಇರುವ ಕಾರಣ ಇದನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಕಾತುರ ಅವರಿಗೂ ಇದೆಯಂತೆ. 'ಡಬ್ಬಿಂಗ್ ಹೇಳುವ ಚಾನ್ಸ್ ಇದುವರೆಗೆ ಸಿಕ್ಕಿರಲಿಲ್ಲ. ಈ ಚಿತ್ರದ ಮೂಲಕ ಆ ಅವಕಾಶ ಸಿಕ್ಕಿದೆ. ಚಿತ್ರದಲ್ಲಿ ತಮ್ಮದು ತುಂಬಾ ಗ್ಲಾಮರಸ್ ಪಾತ್ರ. ಡಬ್ಬಿಂಗ್ ಹೇಳಿರುವುದಕ್ಕೆ ಹೆಮ್ಮೆ ಅನ್ನಿಸುತ್ತಿದೆ' ಎಂದಿದ್ದಾರೆ ರಚಿತಾ ರಾಮ್.
ನಟಿ ರಮ್ಯಾ ಸಹ 'ಜಾನಿ ಮೇರಾ ನಾಮ್' ಚಿತ್ರದ ಮೂಲಕ ಡಬ್ಬಿಂಗ್ ಹೇಳಿದ್ದರು. ಇದೀಗ ರಚಿತಾ ರಾಮ್ ಸಹ ಅದೇ ಸರಣಿಯ ಚಿತ್ರದ ಮೂಲಕ ಡಬ್ಬಿಂಗ್ ಹೇಳಿರುವುದು ವಿಶೇಷ. ಈ ಚಿತ್ರದಲ್ಲಿ ಪ್ರಿಯಾ ಪಾತ್ರಕ್ಕೆ ರಚಿತಾ ಜೀವ ನೀಡಿದ್ದಾರೆ. ಈ ಸಿನಿಮಾದಲ್ಲಿ ಎನ್ ಆರ್ ಐ ಪಾತ್ರದಲ್ಲಿ ರಚಿತಾ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com