ಹಸೆಮಣೆ ಏರಲು ಸಿದ್ದವಾದ”ಬಿಗ್ ಬಾಸ್’ ಗೌತಮಿ ಗೌಡ
ಸಿನಿಮಾ ಸುದ್ದಿ
ಹಸೆಮಣೆ ಏರಲು ಸಿದ್ದವಾದ”ಬಿಗ್ ಬಾಸ್’ ಗೌತಮಿ ಗೌಡ
ರಿಯಾಲಿಟಿ ಶೋ ಬಿಗ್ ಬಾಸ್ 3ನೇ ಆವೃತ್ತಿಯ ಸ್ಪರ್ಧಿ ಗೌತಮಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಬೆಂಗಳೂರು: ರಿಯಾಲಿಟಿ ಶೋ ಬಿಗ್ ಬಾಸ್ 3ನೇ ಆವೃತ್ತಿಯ ಸ್ಪರ್ಧಿ ಗೌತಮಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಝೀ ಕನ್ನಡದ ಚಿ ಸೌ ಸಾವಿತ್ರಿ ಧಾರಾವಾಹಿಯ ಮೂಲಕ ಪ್ರಸಿದ್ದರಾದ ನಟಿ ಗೌತಮಿ ಜನಪ್ರಿಯ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದರು.
ಬಹುಕಾಲದ ಗೆಳೆಯ ಜಾರ್ಜ್ ಕ್ರಿಸ್ಟಿ ಅವರೊಡನೆ ನಿಶ್ಚಿತಾರ್ಥ ಮಾಡಿಕೊಂಡಿರುವ ಗೌತಮಿ ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. "ಪ್ರೀತಿಪಾತ್ರರಾದವರು ಸಿಗುವುದು ಅದೃಷ್ಟ. ಅವರನ್ನೇ ವರಿಸುವುದು ನನ್ನ ಸೌಭಾಗ್ಯ. ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದು ವಿವಾಹದ ದಿನವನ್ನು ಶೀಘ್ರದಲ್ಲಿ ತಿಳಿಸುವೆನು. ನಿಮ್ಮೆಲ್ಲರ ಪ್ರೀತಿಯ ಹಾರೈಕೆ ಇರಲಿ" ಎಂದು ಬರೆದುಕೊಂಡಿದ್ದಾರೆ.
ಅಂತರ್ ಧರ್ಮೀಯರಾದ ಇವರ ವಿವಾಹಕ್ಕೆ ಇಬ್ಬರ ಕುಟುಂಬವೂ ಒಪ್ಪಿಗೆ ಸೂಚಿಸಿದೆ. ಮದುವೆ ದಿನ ಇನ್ನೂ ನಿಗದಿಯಾಗದಿದ್ದರೂ ಇದೇ ವರ್ಷ ಗೌತಮಿ ದಾಂಪತ್ಯ ಜೀವನ ಪ್ರಾರಂಭಿಸಲಿದ್ದಾರೆ ಎನ್ನುವುದು ಖಚಿತವಾಗಿದೆ.
ಗೌತಮಿ ಗೌಡ ತಮ್ಮ ನಿಶ್ಚಿತಾರ್ಥದ ಚಿತ್ರಗಲನ್ನು ಫೇಸ್‌ಬುಕ್, ಇನ್ಸ್ ಸ್ಟಾಗ್ರಾಂಗಲಲ್ಲಿ ಹಂಚಿಕೊಂಡಿದ್ದಾರೆ.
ಚಿ ಸೌ ಸಾವಿತ್ರಿ, ಮುತ್ತಿನ ಪಲ್ಲಕ್ಕಿ ಧಾರಾವಾಹಿಗಳು, ಪೂರ್ಣ ಸತ್ಯ, ಶಾದಿ ಭಾಗ್ಯ ಎನ್ನುವ ಚಲನಚಿತ್ರಗಳಲ್ಲಿ ಗೌತಮಿ ಗೌಡ ಅಭಿನಯಿಸಿದ್ದಾರೆ. ಇಂಜಿನಿಯರಿಂಗ್ ಶಿಕ್ಷಣ, ಪಡೆದಿರುವ ಈಕೆ ಶಾಸ್ತ್ರೀಯ ನೃತ್ಯದಲ್ಲಿ ಸಹ ಪಾರಂಗತರಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ