ಚಿತ್ರೋದ್ಯಮಕ್ಕೆ ನಾವಿನ್ನೂ ಹೆಚ್ಚಿನದನ್ನು ನೀಡಬಹುದೆಂದು ನಾನು ಭಾವಿಸುತ್ತೇನೆ: ಪ್ರಿಯಾಂಕಾ ಉಪೇಂದ್ರ

ರಾಜಕೀಯ ಕ್ಷೇತ್ರದಿಂದ ಮತ್ತೆ ಚಿತ್ರರಂಗಕ್ಕೆ ಹಿಂತಿರುಗಿರುವ ರಿಯಲ್ ಸ್ಟಾರ್ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ತಾವು ಸಹ ಮತ್ತೆ ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಉತ್ಸುಕರಾಗಿದ್ದಾರೆ.
ಪ್ರಿಯಾಂಕಾ ಉಪೇಂದ್ರ
ಪ್ರಿಯಾಂಕಾ ಉಪೇಂದ್ರ
ಬೆಂಗಳೂರು: ರಾಜಕೀಯ ಕ್ಷೇತ್ರದಿಂದ ಮತ್ತೆ ಚಿತ್ರರಂಗಕ್ಕೆ ಹಿಂತಿರುಗಿರುವ ರಿಯಲ್ ಸ್ಟಾರ್ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ತಾವು ಸಹ ಮತ್ತೆ ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಅವರು ಇದಾಗಲೇ ಆ ದಿಕ್ಕಿನಲ್ಲಿ ಮುನ್ನಡೆಯುತ್ತಿದ್ದು ಕೆಲವೊಂದು ಸ್ಕ್ರಿಪ್ಟ್ ಗಳ ಓದುವಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಪ್ರಿಯಾಂಕಾ ಅವರ ಭವಿಷ್ಯದ ಯೋಜನೆಗಳು, ಮಹಿಳಾ ಕೇಂದ್ರಿತ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಬಯಕೆ, ತಮ್ಮ ಪತಿ ಉಪೇಂದ್ರ ಅವರ ರಾಜಕೀಯ ವೃತ್ತಿಜೀವನ ಹೀಗೆ ನಾನಾ ವಿಚಾರಗಳ ಕುರಿತಂತೆ ಎಕ್ಸ್ ಪ್ರೆಸ್ ನೊಡನೆ ಮನಬಿಚ್ಚಿ ಮಾತನಾಡಿದ್ದಾರೆ.
ಇದಾಗಲೇ ಪ್ರಿಯಾಂಕಾ ಅವರ ಎರಡು ಚಿತ್ರಗಳು ಪೂರ್ಣಗೊಂಡು ಬಿಡುಗಡೆಗೆ ಸಿದ್ದವಾಗಿದೆ. ಅದರಲ್ಲಿ ’2 ಹಾಫ್ ಬಿಡುಗಡೆ ದಿನಾಂಕಕ್ಕಾಗಿ ಕಾಯುತ್ತಿದ್ದರೆ ಎಚ್ ಲೋಹಿತ್ ನಿರ್ದೇಶನದ ಹೌರಾ ಬ್ರಿಡ್ಜ್ ಸಹ ಪೂರ್ಣಗೊಂಡಿದೆ. ಇನ್ನು ಜೂನ್ ಉತ್ತರಾರ್ಧದ ವೇಳೆಗೆ ಪ್ರಿಯಾಂಕಾ ’ಮಮ್ಮಿ-2’ ಚಿತ್ರೀಕರಣದಲ್ಲಿ ತೊಡಗಲಿದ್ದಾರೆ.
"ನಾನು ಚಿತ್ರ ನಿರ್ಮಾನಾಕ್ಕೆ ಸಿದ್ದಳಿದ್ದೇನೆ. ಉಪೇಂದ್ರ ಸಧ್ಯ ರಾಜಕೀಯ ವೃತ್ತಿಜೀವನ ಪ್ರಾರಂಭಿಸಿದ್ದು ನಾವು ಮುಂಬರುವ ಚುನಾವಣೆಯತ್ತ ಸಹ ಗಮನಿಸಬೇಕಿದೆ. ಆದರೆ ಅವರೀಗ ಪೂರ್ಣಾವಧಿ ನಟನೆಗೆ ಮರಳಿದ್ದಾರೆ.ನಾನು ಸಹ ನಿಧಾನವಾಗಿ ಚಿತ್ರರಂಗದಲ್ಲಿ ಸಕ್ರಿಯವಾಗಲು ನೋಡುತ್ತಿದ್ದೇನೆ" ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ.
ಪ್ರಿಯಾಂಕಾ ಅನೇಕ ದೊಡ್ಡ ಯೋಜನೆಗಳನ್ನು ಹಾಕಿಕೊಂಡಿದ್ದು ಅವರ ಹೋಮ್ ಬ್ಯಾನರ್ ಅಡಿಯಲ್ಲಿ ಚಲನಚಿತ್ರ ನಿರ್ಮಾಣ ಮಾಡುವುದು ಅದರಲ್ಲಿ ಒಂದಾಗಿದೆ."ಅದೆಲ್ಲವೂ ಉಪ್ಪಿ (ಉಪೇಂದ್ರ) ಅವರ ಚಿಂತನೆಗೆ ಬಿಟ್ಟಿದೆ. ನಾನು ಮಮ್ಮಿ ಉತ್ತರ ಭಾಗವನ್ನು ಪೂರ್ಣಗೊಳಿಸಿದ ಬಳಿಕ ಇಬ್ಬರೂ ಸೇರಿ ಯಾವ ಕಥೆ ಸಿದ್ದಪಡಿಸಬೇಕೆಂದು ನಿರ್ಧರಿಸಲಿದ್ದೇವೆ.
ಇದೇ ವೇಳೆ ಪ್ರಿಯಾಂಕಾ ತನ್ನ ಪತಿ ಉಪೇಂದ್ರ ಮತ್ತೆ ನಿರ್ದೇಶಕರಾಗಿ ಮುಂದುವರಿಯಬೇಕೆಂದು ಬಯಸುತ್ತಾರೆ. "ಚಿತ್ರಕಥೆಯನ್ನು ಪೂರ್ಣಗೊಳಿಸಲು ಸ್ವಲ್ಪ ಸಮಯ ಹಿಡಿಯುತ್ತದೆ. ಉತ್ತಮ ಕಥೆಗಳನ್ನು ಹೊಂದಿರುವ ಒಂದಿಬ್ಬರು ನಿರ್ದೇಶಕರು ನಮ್ಮ ಬಳಿ ಇದ್ದಾರೆ. ನಮ್ಮ ಪ್ರೊಡಕ್ಷನ್ ಹೌಸ್ ಉತ್ತಮ ಗುಣಮಟ್ಟದ ಚಲನಚಿತ್ರಗಳಿಗೆ ಮಾದರಿಯಾಗಿರಬೇಕೆನ್ನುವುದು ನಮ್ಮ ಬಯಕೆ. ಈಗ ನಿರಂಜನ್ (ಉಪೇಂದ್ರ ಅವರ ಸೋದರಳಿಯ ಮತ್ತು 2 ಹಾಫ್ ಚಿತ್ರದ ನಿರ್ದೇಶಕ) ಉಪ್ಪಿ ಹಾದಿಯನ್ನೇ ಅನುಸರಿಸುತ್ತಿದ್ದಾನೆ. ನಾನು ಅವನಲ್ಲಿ ಒಳ್ಳೆಯ ಪ್ರತಿಭೆ ಇರುವುದನ್ನು ಗುರುತಿಸಬಲ್ಲೆ. ನಮ್ಮ ಬ್ಯಾನರ್ ಅಡಿಯಲ್ಲಿ ನಾವು ಯಾವುದಾದರೂ ವಿಭಿನ್ನ ಕೆಲಸ ಮಾಡಲು ಇದು ಸೂಕ್ತ ಸಮಯವೆನ್ನುವುದು ನನ್ನ ಭಾವನೆ.ಕೆಲವು ಚಿತ್ರಗಳ ನಿರ್ಮಾಣ ಮಾಡುವುದರ ಹೊರತಾಗಿ ಚಿತ್ರೋದ್ಯಮಕ್ಕೆ ಹೆಚ್ಚಿನದೇನನ್ನಾದರೂ ನೀಡಬೇಕೆಂದು ನಾವು ಬಯಸಿದ್ದೇವೆ.
"ನಾನು ಚಿಕ್ಕ ಹಾಗೂ ಹಿಸ ನಮೂನೆಯ ಚಿತ್ರಗಲನ್ನು ನಮ್ಮ ಬ್ಯಾನರ್ ಅಡಿಯಲಿ ತಯಾರಿಸಬೇಕೆಂದು ಬಯಸಿದ್ದೇನೆ. ಇದರೊಡನೆ ಟಿವಿ ಕಾರ್ಯಕ್ರಮಗಳ ನಿರ್ಮಾಪಕಿಯಾಗಿ ಕಾಣಿಸಿಕೊಳ್ಳುವುದಕ್ಕೆ ಸಹ ನನ್ನ ಮನ ತುಡಿಯುತ್ತಿದೆ.ನಾನಿನ್ನೂ ಮಾಡ್ಬೇಕಾದದ್ದು ಬಹಳಷ್ಟಿದೆ. ಸಾಕಷ್ಟು ಯೋಜನೆಗಳಿದೆ" ಅವರು ಹೇಳಿದರು.
ನಟಿಯಾಗಿ ಪ್ರಿಯಾಂಕಾ ಮಹಿಳಾ ಕೇಂದ್ರಿತ ಚಿತ್ರಗಳಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದಾರೆ" ನಾನು ಯುವತಿಯಾಗಿದ್ದಾಗ ನನಗೆ ಇಂತಹಾ ಪಾತ್ರಗಳು ಸಿಕ್ಕಿರಲಿಲ್ಲ. ಆದರೆ ಇತ್ತೀಚೆಗೆ ಸಾಕಷ್ಟು ಮಹಿಳಾ ಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗಿದೆ. ಇದು ಇತ್ತೀಚೆಗೆ ಹುಟ್ಟಿಕೊಂಡ ಟ್ರೆಂಡ್ ಆಗಿದೆಯೆ? ಅಥವಾ ನನಗೆ ಒಪ್ಪಿಗೆಯಾಗುವ ಪಾತ್ರವೆ ಎನ್ನುವುದು ನನಗೆ ತಿಳಿದಿಲ್ಲ"
"ನಾನು ನಟಿಯಾಗಿ ನನಗೆ ಸೂಕ್ತವಾದ ಪಾತ್ರಗಳಲ್ಲಿಯೇ ಕಾಣಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಇದು ನನ್ನ ಅದೃಷ್ಟವೋ ಏನೋ, ನನ್ನ ಪಾತ್ರಗಳು ನನಗೆ ಅಭಿನಯಿಸಲು ಸಾಕಷ್ಟು ಆಸಕ್ತಿ ಕೆರಳಿಸುವಂತಿರುತ್ತದೆ, ಜತೆಗೆ ಪ್ರೇಕ್ಷಕರಿಗೆ ಒಂದು ಸಂದೇಶವನ್ನು ನೀಡಬಲ್ಲವಾಗಿರುತ್ತದೆ"
ಮಮ್ಮಿ 2 ಬಗ್ಗೆ ಸಹ ಪ್ರಿಯಾಂಕಾ ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿದಾರೆ.ಅಲ್ಲದೆ ಲೋಹಿತ್ ನಿರ್ದೇಶನದ ಹೌರಾ ಬ್ರಿಡ್ಜ್ ಸಹ ಉತ್ತಮ ಚಿತ್ರಕಥೆ ಹೊಂದಿದೆ ಎನ್ನುತ್ತಾರೆ. ಪ್ರಿಯಾಂಕಾ ಅವರ ಮಮ್ಮಿ ಸೇವ್ ಮಿ ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಗೊಂಡಿರುವಂತೆಯೇ ಹೌರಾ ಬಿಡ್ಜ್ ಸಹ ತಮಿಳಿನಲ್ಲಿ ಸಹ ತಯಾರಾಗುತ್ತಿದೆ. ನನ್ನ ಅಭಿಮಾನಿಗಳು ಹೆಚ್ಚು ವಾಸ್ತವಿಕ ಪಾತ್ರಗಳು ಮತ್ತು ಥ್ರಿಲ್ಲರ್ ಚಲನಚಿತ್ರಗಳನ್ನು ಬಯಸುತ್ತಾರೆ. ನಾನು ಅಂತಹುಗಳನ್ನೇ ಹೆಚ್ಚಾಗಿ ಆರಿಸಿಕೊಳ್ಳುತ್ತಿದ್ದೇನೆ"
ಚಲನಚಿತ್ರ ಹಾಗೂ ರಾಜಕೀಯಾನ್ನು ಹೋಲಿಕೆ ಮಾಡಬಾರದು
ಉಪೇಂದ್ರ ಅವರ ದೀರ್ಘಕಾಲದ ಕನಸಿಗೆ ಪ್ರಿಯಾಂಕಾ ಬೆಂಬಲ ಸೂಚಿಸಿದ್ದಾರೆ."ವಾಸ್ತವವಾಗಿ, ಅವರು (ಉಪೇಂದ್ರ) ದೀರ್ಘಕಾಲದವರೆಗೆ, ರಾಜಕೀಯದಲ್ಲಿ ಇರಬೇಕೆಂದು ಬಯಸಿದ್ದರು ಅವರು ರಾಜಕೀಯದಲ್ಲಿ ಯಶಸ್ಸು ಕಾಣುತ್ತಾರೆ ಎನ್ನುವುದು ನನಗೆ ಖಾತ್ರಿಯಿದೆ. ಆದರೆ ಈ ಮಧ್ಯೆ ಅವರು ತಮ್ಮ ಚಿತ್ರಗಳಿಂದಲೇ ಅಭಿಮಾನಿಗಳನ್ನು, ಜನಪ್ರಿಯತೆಯನ್ನು ಪಡೆದಿದ್ದಾರೆಂದು ನಾವು ಒಪ್ಪಿಕೊಳ್ಳಬೇಕು. ಅದು ಪ್ರಾಥಮಿಕ ಹಿತಾಸಕ್ತಿಯಾಗಿದೆ. ಚಿತ್ರ ಜೀವನ ಹಾಗೂ ರಾಜಕೀಯ ಎರಡೂ ಬೇರೆ ಬೇರೆ. ರಾಜಕೀಯವು ಕುಟುಂಬಕ್ಕೆ ಸಂಬಂಧಿಸಿಲ್ಲ. ಅವರೀಗ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಅಂತಿಮವಾಗಿ ಅವರೊಂದು ಸ್ಥಾನಕ್ಕೆ ಬರುತ್ತಾರೆ ಎಂದು ಪ್ರಿಯಾಂಕಾ ಭರವಸೆಯಿಂದ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com