ಐ ಲವ್ ಯು: ಉಪೇಂದ್ರ-ಚಂದ್ರು ಜೋಡಿಯ ಡಿಫರೆಂಟ್ ಪ್ರೇಮ್ ಕಹಾನಿ

ಚಂದ್ರು ಮತ್ತು ಉಪೇಂದ್ರ ಜೋಡಿಯ ಚಿತ್ರಗಳೆಂದರೆ ಕನ್ನಡ ಚಿತ್ರಪ್ರೇಮಿಗಳಿಗೆ ಅದೇನೋ ಕುತೂಹಲ. ಅವರ ಜೋಡಿಯು ಉತ್ತಮ ಚಿತ್ರಗಳನ್ನು ನೀಡುತ್ತದೆನ್ನುವ ಭರವಸೆ.
ಐ ಲವ್ ಯು: ಉಪೇಂದ್ರ-ಚಂದ್ರು ಜೋಡಿಯ ಡಿಫರೆಂಟ್ ಪ್ರೇಮ್ ಕಹಾನಿ
ಐ ಲವ್ ಯು: ಉಪೇಂದ್ರ-ಚಂದ್ರು ಜೋಡಿಯ ಡಿಫರೆಂಟ್ ಪ್ರೇಮ್ ಕಹಾನಿ
Updated on
ಬೆಂಗಳೂರು: ಚಂದ್ರು ಮತ್ತು ಉಪೇಂದ್ರ ಜೋಡಿಯ ಚಿತ್ರಗಳೆಂದರೆ ಕನ್ನಡ ಚಿತ್ರಪ್ರೇಮಿಗಳಿಗೆ ಅದೇನೋ ಕುತೂಹಲ. ಅವರ ಜೋಡಿಯು ಉತ್ತಮ ಚಿತ್ರಗಳನ್ನು ನೀಡುತ್ತದೆನ್ನುವ ಭರವಸೆ. ಇನ್ನು ಉಪೇಂದ್ರ ಸೂಪರ್ ಚಿತ್ರ ತೆಗೆದುಕೊಂಡರೆ ಅದರ ಶೀರ್ಷಿಕೆ ಚಿಹ್ನೆಯಾಗಿದ್ದಂತೆ ಅವರ ಮುಂದಿನ ಚಿತ್ರ ’ಐ ಲವ್ ಯು’ ಸಹ ಸಂಕೇತವೊಂದನ್ನು ಒಳಗೊಂಡ ಟೈಟಲ್ ಹೊಂದಿದೆ.
ಒಂದು ಹೃದಯದ ಆಕಾರದ ಲೋಗೋದೊಡನೆ ಹುಡುಗ ಹಾಗೂ ಹುಡುಗಿ ಸಿಮುತ್ತೊಂದನ್ನು ಹಂಚಿಕೊಳ್ಳಲು ತೊಡಗುವಾಗ ಎದುರಾಗುವ ಎಮೋಷನ್ ಒಳಗೊಂಡ ಚಿತ್ರದ ಶಿರ್ಷಿಕೆಯನ್ನು ಚಿತ್ರತಂಡ ರಚಿಸಿದೆ.
ಭಾವನಾತ್ಮಕ ಚಿತ್ರಕಥೆಯ ಕುರಿತಂತೆ ಒಅಲವಿರುವ ನಿರ್ದೇಶಕರು ಇದನ್ನು ವಿವಿಧ ರೀತಿಯಲ್ಲಿ ತೋರಿಸಲು ಬಯಸುತ್ತಾರೆ.ಉಪೇಂದ್ರ ಮತ್ತು ಚಂದ್ರು ಮಾತ್ರ ಇಂತಹಾ ಸೃಜನಶೀಲತೆಯುಳ್ಳ ಚಿತ್ರ ನಿರ್ಮಿಸಬಲ್ಲರೆಂದು ಕಾಣುತ್ತದೆ.
"ನಮ್ಮ ಬ್ರಹ್ಮ ಚಿತ್ರ ಮಾಸ್ ಹಿಟ್ ಆಗಿತ್ತು. ಇದೇ ರೀತಿಯಲ್ಲಿ ಜನರ ಇಷ್ಟದಂತೆ ಎ ಮತ್ತು ಉಪೇಂದ್ರ ಮುಂತಾದ ಚಿತ್ರಗಳ ಪ್ರವೃತ್ತಿಯನ್ನು ಮರಳಿ ತರಲು ನಾನು ಬಯಸುತ್ತೇನೆ" ಅವರು ಹೇಳಿದರು.
"ಐ ಲವ್ ಯು ಚಿತ್ರವು ಕಾಲೇಜ್ ಲವ್ ಸ್ಟೋರಿಯನ್ನು ಹೊಂದಿದ್ದು ಉಪ್ಪಿ (ಉಪೇಂದ್ರ) ಅವರ ಲವ್ ಫಿಲಾಸಫಿಯನ್ನು ಈ ಚಿತ್ರದಲ್ಲಿ ಅಳವಡಿಸಿದ್ದೇವೆ" ಚಂದ್ರು ಹೇಳಿದರು.
ಉಪೇಂದ್ರ ಮೂರು ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಐ ಲವ್ ಯು ಚಿತ್ರಕ್ಕೆ ’ನಿನ್ನೇ ಪ್ರೀತಿಸ್ತೀನಿ’ ಎನ್ನುವ ಟ್ಯಾಗ್ ಲೈನ್ ಕೊಡಲಾಗಿದೆ."ಸಧ್ಯ ನಾವು ಒಂದು ಶೇಡ್ ನಲ್ಲಿ ಮಾತ್ರ ಉಪ್ಪಿ ಲುಕ್ ಟೆಸ್ಟ್ ಮಾಡಿದ್ದೇವೆ. ಇನ್ನೆರಡು ಶೇಡ್ ನ ಟೆಸ್ಟ್ ಗಳು ಮಹೂರ್ತಕ್ಕೆ ಮುನ್ನ ನಡೆಯಲಿದೆ" ಚಂದ್ರು ನುಡಿದರು.
ಪ್ರಸ್ತುತ ಚಂದ್ರು ಚಿತ್ರಕ್ಕಾಗಿ ನಟರು ಮತ್ತು ತಂತ್ರಜ್ಞರನ್ನು ಅಂತಿಮಗೊಳಿಸುವುದರಲ್ಲಿದ್ದಾರೆ. ಚಂದ್ರು-ಉಪ್ಪಿ ಜೋಡಿಯ ಈ ಚಿತ್ರ ಹೊಸಬಗೆಯ ಅಚ್ಚರಿಯನ್ನು ಒಳಗೊಂಡಿದೆ ಎನ್ನುವುದನ್ನು ಮಾತ್ರ ನಾವೀಗ ಹೇಳಬಹುದಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com