ಬಾಲಿವುಡ್ ಗೆ ಹೊರಟ ಕನ್ನಡದ ಬೆಡಗಿ ಸೋನಾಲ್ ಮೊಂಟೆರಿಯೋ

’ಡೆಮೋ ಪೀಸ್’ ಚಿತ್ರದ 20 ದಿನಗಳ ಚಿತ್ರೀಕರಣಕ್ಕೆ ಹಾಗೂ ಯೋಗರಾಜ್ ಭಟ್ ಅವರ ಪಂಚತಂತ್ರ ಚಿತ್ರದ ಹಾಡಿನ ಚಿತ್ರೀಕರಣವನ್ನು ಮುಗಿಸಿ ಮುಂಬೈಗೆ ತೆರಳಲ್ಲಿದ್ದೇನೆ.
ಸೋನಾಲ್ ಮೊಂಟೆರಿಯೋ
ಸೋನಾಲ್ ಮೊಂಟೆರಿಯೋ
ಬೆಂಗಳೂರು: ’ಡೆಮೋ ಪೀಸ್’ ಚಿತ್ರದ 20 ದಿನಗಳ ಚಿತ್ರೀಕರಣಕ್ಕೆ ಹಾಗೂ ಯೋಗರಾಜ್ ಭಟ್ ಅವರ ಪಂಚತಂತ್ರ ಚಿತ್ರದ ಹಾಡಿನ ಚಿತ್ರೀಕರಣವನ್ನು ಮುಗಿಸಿ ಮುಂಬೈಗೆ ತೆರಳಲ್ಲಿದ್ದೇನೆ. ಅಲ್ಲಿ ನಾನು ಹಿಂದಿ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದೇನೆ" ಎನ್ಎನ್ ಸಿದ್ದಿಕಿ ನಿರ್ದೇಶನ, ಮನ್ಸೂರ್ ಸಿದ್ದಿಕ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ’ ಸಾಜನ್ ಚಲೇ ಸಸುರಾಲ್’ ಚಿತ್ರದ ನಾಯಕಿ ಸೋನಾಲ್ ಹೇಳಿದರು.
ಚಿತ್ರದ ಪ್ರಿ ಪ್ರೊಡಕ್ಷನ್ ಕಾರ್ಯ ನಡೆದಿದೆ ಎಂದು ಸೋನಾಲ್ ಜತೆಗೆ ತೆರೆ ಹಂಚಿಕೊಂಡಿರುವ ನಟ ಗೋವಿಂದ ಹೇಳಿದ್ದಾರೆ.
"ಅವರು ಇನ್ನೂ ನಾಯಕನ ಪಾತ್ರವನ್ನು ಅಂತಿಮಗೊಳಿಸಿಲ್ಲ. ಹಾಗಾಗಿ ನಾನು ಯಾರ ಜತೆ ನಟಿಸಬೇಕಾಗಿದೆ ಎನ್ನುವುದನ್ನು ಇನ್ನೂ ತಿಳಿಯಬೇಕಿದೆ" ಸೋನಾಲ್ ಹೇಳಿದರು. ಬಾಲಿವುಡ್ ನಟನೆ ಕುರಿತಂತೆ ಕನಸು ಕಾಣುತ್ತಿರುವ ಸೋನಾಲ್ ಸ್ಯಾಂಡಲ್ ವುಡ್ ಹಾಗೂ ಬಾಲಿವುಡ್ ಎರಡರಲ್ಲಿಯೂ ನಟಿಸಲು ಮನ ಹೊಂದಿದ್ದಾರೆ. ಉತ್ತಮ ಪಾತ್ರಗಳು ದೊರೆತಲ್ಲಿ ಕನ್ನಡ ಚಿತ್ರಗಳಲ್ಲಿ ನಟಿಸುವುದಕ್ಕೆ ಅಭ್ಯಂತರವಿಲ್ಲ ಎಂದು ಅವರು ಹೇಳಿದ್ದಾರೆ.
"ಇದು ಬಾಲಿವುಡ್ ನಲ್ಲಿ ನನ್ನ ಚೊಚ್ಚಲ ಪ್ರಯತ್ನವಾದ ಕಾರಣ ಅದಕ್ಕಾಗಿ ನಾನು ಸ್ವಲ್ಪ ಸಮಯ ನೀಡಬೇಕಿದೆ.ಆದರೂ ಕನ್ನಡ ಚಿತ್ರಗಳನ್ನೂ ಮಾಡಲು ನನ್ನ ಸಮಯವನ್ನು ನಾನು ನಿಗದಿಗೊಳಿಸಿಕೊಳ್ಳುವೆ. ಹಿಂದಿ ಚಿತ್ರಗಳಿಗೆ ವೇಳಾಪಟ್ಟಿಯನ್ನು ಹೇಗೆ ಹೊಂದಿಸಲಾಗುವುದು ಎನ್ನುವುದು ನನಗೆ ಗೊತ್ತಿದೆ.ನಾನು ಎರಡೂ ಭಾಷೆಗಳ ನಟನೆಗೆ ಸಹ ಆದ್ಯತೆ ನೀಡುತ್ತೇನೆ" ಮಾಡಲಿಂಗ್ ನಿಂದ ನಟನಾ ಕ್ಷೇತ್ರಕ್ಕೆ ಬಂದಿರುವ ಸೋನಾಲ್ ಹೇಳಿದ್ದಾರೆ.
ಕೊಂಕಣಿ, ಮಾತೃಭಾಷೆಯ ಸಂಗೀತದ ಆಲ್ಬಂ ನೊಡನೆ ಪ್ರಾರಂಭವಾದ ಈ ನಟಿಯ ವೃತ್ತಿಜೀವನ  ತುಳು ಚಲನಚಿತ್ರಗಳಾದ ಎಕ್ಕ ಸಕ್ಕ, ಪಿಲಿಬೆಲ್ ಯಮುನಕ್ಕ, ಜೈ ತುಳುನಾಡು ಚಿತ್ರಗಳಲ್ಲಿ ಪಾತ್ರವಹಿಸುವ ಮೂಲಕ ಮುನ್ನೆಲೆಗೆ ಬಂದಿತು.
ಎಮ್ಎಲ್ಎ ಚಿತ್ರದ ನಾಯಕಿಯಾದ ಸೋನಾಲ್ ಹೇಳುವಂತೆ "ನನ್ನ ಚಿತ್ರಜೀವನ ಪ್ರಾರಂಭವಾದ ಬಗೆ ನನಗೆ ಖುಷಿ ನೀಡಿದೆ.ನಾನದನ್ನು ಮರೆಯಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಬಾಲಿವುಡ್ ಪ್ರವೇಶಿಸಿದ ನಟ ನಟಿಯರು ಮತೆ ಸ್ಥಳೀಯ ಭಾಷೆಗಳ ಚಿತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ನನಗೆ ಹಾಗಲ್ಲ, ಉತ್ತಮ ಪಾತ್ರಗಳು ದೊರೆತರೆ ನಾನು ಕನ್ನಡ ಚಿತ್ರಗಳಲ್ಲಿ ಸಹ ಅಭಿನಯ ಮುಂದುವರಿಸುವೆ."
ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ನಡುವೆ ಭಾಷೆಯ ಹೊರತು ಬೇರೇ ಯಾವ ವ್ಯತ್ಯಾಸಗಳಿಲ್ಲ ಎನ್ನುವ ಸೋನಾಲ್ "ಹಿಂದಿ ಚಿತ್ರೋದ್ಯಮದಲ್ಲಿ ಜನರ ಸಂಖ್ಯೆ ಹೆಚ್ಚಾಗಿರಬಹುದು ಆದರೆ ವೃತ್ತಿಪರತೆ ವಿಚಾರಕ್ಕೆ ಬಂದರೆ ಎರಡೂ ಒಂದೇ ಆಗಿದೆ" ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com