ಅನಿಮೇಟೆಡ್ 'ರ್ಯಾಂಬೋ 2'ಗೆ ಗೋಲ್ಡನ್ ಸ್ಟಾರ್ ಗಣೇಶ್ ಧ್ವನಿ

ಹಲವು ವಿಶೇಷಗಳನ್ನೊಳಗೊಂಡಿರುವ ನಟ ಶರಣ್ ನಟಿಸಿರುವ ಅನಿಮೇಟೆಡ್ 'ರ್ಯಾಂಬೋ 2' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ಧ್ವನಿ ನೀಡಿದ್ದಾರೆ...
ಅನಿಮೇಟೆಡ್ 'ರ್ಯಾಂಬೋ 2'ಗೆ ಗೋಲ್ಡನ್ ಸ್ಟಾರ್ ಗಣೇಶ್ ಧ್ವನಿ
ಅನಿಮೇಟೆಡ್ 'ರ್ಯಾಂಬೋ 2'ಗೆ ಗೋಲ್ಡನ್ ಸ್ಟಾರ್ ಗಣೇಶ್ ಧ್ವನಿ
ಹಲವು ವಿಶೇಷಗಳನ್ನೊಳಗೊಂಡಿರುವ ನಟ ಶರಣ್ ನಟಿಸಿರುವ ಅನಿಮೇಟೆಡ್ 'ರ್ಯಾಂಬೋ 2' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ಧ್ವನಿ ನೀಡಿದ್ದಾರೆ. 
ರ್ಯಾಂಬೋ ಚಿತ್ರದ ಮೂಲಕ ಶರಣ್ ಅವರು ನಿರ್ಮಾಪಕ, ನಟರಾಗಿ ಬಡ್ತಿಪಡೆದಿದ್ದರು. ರ್ಯಾಂಬೋ ಚಿತ್ರಕ್ಕೆ ಲಾರ್ಡ್ ಗಣೇಶನ ಪಾತ್ರದಲ್ಲಿ ಗೋಲ್ಡನ್ ಸ್ಟಾರ್ ವಾಯ್ಸ್ ಓವರ್ ನೀಡಿದ್ದರು. ಇದೀಗ ರ್ಯಾಂಬೋ 2ನಲ್ಲಿಯೂ ಈ ಪ್ರಯತ್ನ ಮುಂದುವರೆದಿದ್ದು, ಸ್ವಲ್ಪ ಬದಲಾವಣೆಗಳನ್ನು ಮಾಡಲಾಗಿದೆ. ಚಿತ್ರದಲ್ಲಿ ಬಾಲ ಗಣೇಶ, ಛೋಟಾ ಭೀಮ್, ಬಾಲ ಹನುಮಾನ ಮಾದರಿಯಲ್ಲಿ ಗಣೇಶನನ್ನೂ ಕೂಡ ಮಾಡಲಾಗಿದ್ದು, 3ಡಿಯಲ್ಲಿ ಸೃಷ್ಟಿಸಲಾಗಿದೆ. ಅದಕ್ಕೆ ನಟ ಗಣೇಶ್ ಅವರು ಕಂಠದಾನ ಮಾಡಿದ್ದಾರೆ. 
ರ್ಯಾಂಬೋ 2 ಚಿತ್ರ ಅನಿಮೇಟೆಡ್ ಭಾಗವನ್ನು ಹೈದರಾಬಾದ್ ನಲ್ಲಿ ಸಿದ್ಧಪಡಿಸಲಾಗಿತ್ತು. ಈಗ ಚಿತ್ರದಲ್ಲಿ ಕೆಲಸ ಮಾಡಿದ್ದವರು ಚಿತ್ರದ ಅನಿಮೇಟೆಡ್ ದೃಶ್ಯಾವಳಿಗಳನ್ನು ಸಿದ್ಧಪಡಿಸಿದರು. ದೃಶ್ಯಗಳನ್ನು ಸಿದ್ಧಪಡಿಸಲು 4 ತಿಂಗಳು ಕಾಲಾವಕಾಶಗಳು ಬೇಕಾಯಿತು. 10 ನಿಮಿಷಗಳ ಚಿತ್ರ ಈ ಅನಿಮೇಟೆಡ್ ದೃಶ್ಯಾವಳಿಗಳು ಚಿತ್ರದಲ್ಲಿ ಕಂಡು ಬರಲಿವೆ. ಮಕ್ಕಳನ್ನು ಗುರಿಯಾಗಿರಿಸಿಕೊಂಡೇ ದೃಶ್ಯವನ್ನು ಸಿದ್ಧಪಡಿಸಲಾಗಿದೆ. ಆದರೆ, ದೃಶ್ಯಗಳು ಚಿತ್ರ ಕಥೆಯೊಂದಿಗೆ ಹೊಂದಿಕೊಂಡಿದೆ ಎಂದು ನಿರ್ಮಾಪಕ ತರುಣ್ ಸುಧೀರ್ ಅವರು ಹೇಳಿದ್ದಾರೆ. 
ಇತರೆ ಚಿತ್ರಗಳಂತಲ್ಲ, ಚಿತ್ರದಲ್ಲಿ ವಾಯ್ಸ್ ಓವರ್ ಕೊಡುವುದು ಅತ್ಯಂತ ಕಠಿಣವಾಗಿತ್ತು. ಮೊದಲೇ ಸಿದ್ಧಗೊಂಡಿದ್ದ 3ಡಿ ಗಣಪತಿಯ ಎಮೋಷನ್ಸ್'ಗೆ ತಕ್ಕಂತೆ ಧ್ವನಿ ನೀಡುವುದು ಸುಲಭದ ಕೆಲಸವಲ್ಲ. ಆದರೆ, ಗಣೇಶ್ ಅವರು ಅತನ್ನು ಬಹಳ ಚೆನ್ನಾಗಿ ನಿರ್ವಹಿಸಿದರು. ಇದೇ ಮೊದಲ ಬಾರಿಗೆ ಅನಿಮೇಟೆಡ್ ಚಿತ್ರವೊಂದಕ್ಕೆ ಗಣೇಶ್ ಅವರು ಧ್ವನಿ ನೀಡಿದ್ದಾರೆ. ಬಹಳ ಆಸಕ್ತಿಯಿಂದಲೇ ಗಣೇಶ್ ಅವರು ಧ್ವನಿ ನೀಡಿದ್ದರು. ರ್ಯಾಂಬೋ 2 ಚಿತ್ರದಲ್ಲಿ ಇದೇ ಪ್ರಮುಖವಾದ ಭಾಗವಾಗಲಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದರೆ, ಸುಧಾಕರ್ ಕೆ ರಾಜ್ ಅವರು ಛಾಯಾಗ್ರಹಣ ಮಾಡಿದ್ದಾರೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com