ಮತ್ತೆ ಒಂದಾಗಲಿದ್ದಾರೆ ಟಗರು ತ್ರಿವಳಿಯರು

ಟಗರು ಚಿತ್ರದ ನಂತರವೂ ನಟ ಧನಂಜಯ್ ಜೊತೆಗಿನ ಸಂಬಂಧ ಮತ್ತು ಕೆಲಸವನ್ನು ಮುಂದುವರಿಸುವುದಾಗಿ...
ಕೆ.ಪಿ.ಶ್ರೀಕಾಂತ್, ನಿರ್ದೇಶಕ ಸೂರಿ ಮತ್ತು ನಟ ಧನಂಜಯ್
ಕೆ.ಪಿ.ಶ್ರೀಕಾಂತ್, ನಿರ್ದೇಶಕ ಸೂರಿ ಮತ್ತು ನಟ ಧನಂಜಯ್
Updated on: 

ಟಗರು ಚಿತ್ರದ ನಂತರವೂ ನಟ ಧನಂಜಯ್ ಜೊತೆಗಿನ ಸಂಬಂಧ ಮತ್ತು ಕೆಲಸವನ್ನು ಮುಂದುವರಿಸುವುದಾಗಿ ನಿರ್ದೇಶಕ ಸೂರಿ ಹೇಳಿದ್ದರು. ಇದೀಗ ತಮ್ಮ ಮಾತನ್ನು ಉಳಿಸಿಕೊಂಡಿರುವ ಸೂರಿ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ಮತ್ತೆ ಇಬ್ಬರೂ ಜೊತೆಯಾಗಲಿದ್ದಾರೆ. ಚಿತ್ರದ ಕಥೆ, ಸಂಭಾಷಣೆ ಸಿದ್ಧವಾಗುತ್ತಿದೆ.

ಶಿವರಾಜ್ ಕುಮಾರ್ ನಟನೆಯ ಹಿಟ್ ಚಿತ್ರ ಟಗರುವಿನಲ್ಲಿ ಡಾಲಿ ಪಾತ್ರದಲ್ಲಿ ಮಿಂಚಿದ್ದ ಧನಂಜಯ್ ನೆಗೆಟಿವ್ ಪಾತ್ರದ ಮೂಲಕ ಪ್ರೇಕ್ಷಕರಿಗೆ ಇಷ್ಟವಾಗಿದ್ದರು.

ಈಗ ಸಿಕ್ಕಿರುವ ಮಾಹಿತಿ ಪ್ರಕಾರ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಟಗರುವಿನ ನಂತರ ಮತ್ತೊಂದು ಯಶಸ್ವಿ ಚಿತ್ರವನ್ನು ನೀಡಲು ಸಿದ್ಧವಾಗಿದೆ ಈ ಜೋಡಿ. ಚಿತ್ರದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ನಿರ್ದೇಶಕ ಸೂರಿ, ನಿರ್ಮಾಪಕ ಶ್ರೀಕಾಂತ್ ಮತ್ತು ನಟ ಧನಂಜಯ್ ಅವರ ಕಾಂಬಿನೇಷನ್ ಬಗ್ಗೆ ಜನರಲ್ಲಿ ಮತ್ತೊಮ್ಮೆ ಕುತೂಹಲ ಮೂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com