ನನಗೆ ನಾನೇ ಸ್ಪೂರ್ತಿ: ರ್ಯಾಂಬೋ 2 ಚಿತ್ರದ ನಿರ್ಮಾಪಕ, ನಟ ಚಿಕ್ಕಣ್ಣ

ತಮ್ಮಲ್ಲಿನ ನೂನ್ಯತೆಗಳನ್ನು ಮೆಟ್ಟಿ ನಿಂತು ಏನನ್ನಾದರೂ ಶೀಘ್ರ ಕಲಿತು ಅದನ್ನು ಅಳವಡಿಸಿಕೊಳ್ಳುವ ಮನಸ್ಥಿತಿ ಇದ್ದರೆ ಜೀವನಲ್ಲಿ ಯಶಸ್ಸು ಶತಸಿದ್ದ. ಅಂತಹ ಸಾಲಿಗೆ ಕನ್ನಡದ ಹಾಸ್ಯ ನಟ ಚಿಕ್ಕಣ್ಣ ಸೇರುತ್ತಾರೆ...
ಚಿಕ್ಕಣ್ಣ
ಚಿಕ್ಕಣ್ಣ
Updated on
ತಮ್ಮಲ್ಲಿನ ನೂನ್ಯತೆಗಳನ್ನು ಮೆಟ್ಟಿ ನಿಂತು ಏನನ್ನಾದರೂ ಶೀಘ್ರ ಕಲಿತು ಅದನ್ನು ಅಳವಡಿಸಿಕೊಳ್ಳುವ ಮನಸ್ಥಿತಿ ಇದ್ದರೆ ಜೀವನಲ್ಲಿ ಯಶಸ್ಸು ಶತಸಿದ್ದ. ಅಂತಹ ಸಾಲಿಗೆ ಕನ್ನಡದ ಹಾಸ್ಯ ನಟ ಚಿಕ್ಕಣ್ಣ ಸೇರುತ್ತಾರೆ. 
ಹೌದು, ಇತ್ತೀಚೆಗಷ್ಟೆ ರ್ಯಾಂಬೋ 2 ಚಿತ್ರದ ಕುರಿತಂತೆ ಮಾತುಕತೆಗಿಳಿದ ಚಿಕ್ಕಣ್ಣ ಸಂಪೂರ್ಣವಾಗಿ ಇಂಗ್ಲೀಷ್ ನಲ್ಲೇ ಮಾತನಾಡಿ ಅಚ್ಚರಿಸಿ ಮೂಡಿಸಿದರು. ಇನ್ನು ಹೊಸ ಭಾಷೆಯನ್ನು ಕಲಿಸುವುದು ನನಗೆ ಇಷ್ಟ. ಜತೆಗೆ ಮತ್ತಷ್ಟು ಉತ್ತಮವಾಗಿ ಸಂವಹನ ನಡೆಸಲು ಬಯಸುತ್ತೇನೆ ಎಂದರು. 
ಕನ್ನಡ ಚಿತ್ರರಂಗದಲ್ಲಿ ಚಿಕ್ಕು ಎಂದೇ ಖ್ಯಾತರಾಗಿರುವ ಚಿಕ್ಕಣ್ಣ ತಾವು ಅಭಿನಯಿಸುತ್ತಿರುವ ಪ್ರತಿಯೊಂದು ಚಿತ್ರದ ಮೂಲಕ ಖ್ಯಾತಿ ಗಳಿಸುತ್ತಿದ್ದಾರೆ. ಇದೇ ವೇಳೆ ಪ್ರೇಕ್ಷಕರಿಗೆ ಅಚ್ಚರಿ ವಿಷಯವೊಂದು ಕಾದಿದೆ. ಚಿತ್ರಗಳಲ್ಲಿ ನಟನೆಯ ಜತೆ ಇದೀಗ ರ್ಯಾಂಬೋ 2 ಚಿತ್ರಕ್ಕೆ ಚಿಕ್ಕಣ್ಣ ನಿರ್ಮಾಪಕರಾಗಿದ್ದಾರೆ. ಜತೆಗೆ ಚಿತ್ರದಲ್ಲಿನ ಒಂದು ಹಾಡಿಗೂ ಧ್ವನಿಯಾಗಿದ್ದಾರೆ. 
ಹಾಸ್ಯ ನಟರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೆ, ನನ್ನಂತರ ನಟನೆಯ ಜತೆಗೆ ಇದೀಗ ದೊಡ್ಡ ಕೆಲಸಕ್ಕೆ ಕೈಹಾಕಿದ್ದೇನೆ. ಹೌದು, ನಾನು ರ್ಯಾಂಬೋ 2 ಚಿತ್ರಕ್ಕೆ ನಿರ್ಮಾಪಕನಾಗಿದ್ದೇನೆ ಎಂದು ಚಿಕ್ಕಣ್ಣ ಹೇಳಿದ್ದಾರೆ. 
ಮುಂದಿನ ಜೀವನದ ಕುರಿತಂತೆ ಏನ್ನನ್ನು ಯೋಚಿಸಿಲ್ಲ. ನನ್ನ ಭವಿಷ್ಯದ ಬಗ್ಗೆ ನನಗೆ ಏನು ತಿಳಿದಿಲ್ಲ. ಮುಂದೆ ನಾನು ಹಾಸ್ಯ ನಟನಾಗಿಯೇ ಮುಂದುವರೆಯುತ್ತೇನೋ ಅಥವಾ ಇಲ್ಲವೋ? ನಾನು ಯಾವತ್ತೂ ನಾಳಿನ ಕುರಿತು ಯೋಚಿಸಿಲ್ಲ. ನನ್ನನ್ನು ನಟನಾಗಿ ಮಾಡಲು ಮತ್ತು ಜನರನ್ನು ನಗುವಂತೆ ಮಾಡುವ ಉದ್ದೇಶದಿಂದ ದೇವರು ನನ್ನನ್ನು ಸೃಷ್ಟಿಸಿರಬಹುದೇನೋ. ಆದರೆ ನನ್ನು ಉದ್ದೇಶ ಬಹುಮುಖವಾಗಿದೆ. ನಾನು ಸ್ವಲ್ಪ ಮಟ್ಟಗೆ ಅದನ್ನು ಸಾಧಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com