
ನಿರ್ದೇಶಕ ಆರ್ ಚಂದ್ರು ಅವರಿಗೆ ಪ್ರತಿಭಾವಂತರ ತಂಡ ಸಿಕ್ಕಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ಪ್ರವೃತ್ತಿಯಲ್ಲಿ ಸಂಗೀತ ನಿರ್ದೇಶಕರಾಗಿರುವ ಕಿರಣ್ ತೋಟಂಬೈಲು ಚಂದ್ರು ಜೊತೆಗೆ ಸೇರಿದ್ದಾರೆ. ಉಪೇಂದ್ರ ನಟನೆಯ ಐ ಲವ್ ಯೂ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ತಮ್ಮ ಚಿತ್ರದ ಸಂಗೀತ ನಿರ್ದೇಶನಕ್ಕೆ ಉತ್ತಮ ತಂತ್ರಜ್ಞರನ್ನು ಹುಡುಕುತ್ತಿದ್ದ ನಿರ್ದೇಶಕರು ಕಿರಣ್ ಅವರನ್ನು ಕರೆತಂದಿದ್ದಾರೆ. ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕನಾಗಬೇಕೆಂಬ ಕಿರಣ್ ಅವರ ಬಾಲ್ಯದ ಕನಸು ಈಡೇರಿದೆ. ಎರಡೆರಡು ಪದವಿಗಳು ಮತ್ತು ಚಿನ್ನದ ಪದಕ ಗಳಿಸಿರುವ ಕಿರಣ್ ಗೆ ಸಂಗೀತ ನಿರ್ದೇಶನದಲ್ಲಿಯೂ ಆಸಕ್ತಿಯಿದೆ. ನಿರ್ದೇಶಕ ಚಂದ್ರು ನನ್ನ ಸ್ಟುಡಿಯೊಗೆ ಬಂದಿದ್ದಾಗ ನನ್ನ ಕೆಲಸಗಳನ್ನು ನೋಡಿ ಇಷ್ಟಪಟ್ಟರು. ನನ್ನ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತೀಯಾ ಎಂದು ಕೇಳಿದರು. ಐ ಲವ್ ಯೂ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗುತ್ತಿದೆ, ನಾನಂತೂ ಬಹಳ ಕಾತರನಾಗಿದ್ದೇನೆ ಎನ್ನುತ್ತಾರೆ ಕಿರಣ್. ಚಿತ್ರಕ್ಕೆ ಐದು ಟ್ಯೂನ್ ಗಳೊಂದಿಗೆ ಅವರು ಸಜ್ಜಾಗಿದ್ದಾರೆ.
ಐ ಲವ್ ಯು ಚಿತ್ರದ ಮುಹೂರ್ತ ಮೇ 21ರಂದು ನಡೆಯಲಿದೆ.
Advertisement