ರವಿ ವರ್ಮ ನಿರ್ದೇಶಿಸುತ್ತಿರುವ ರುಸ್ತುಮ್ ಚಿತ್ರದಲ್ಲಿ ಶಿವರಾಜ್ ಕುಮಾರ್ ಅಭಿನಯಿಸುತ್ತಿದ್ದು, ಶ್ರದ್ಧಾ ಶ್ರೀನಾಥ್, ಮಯೂರಿ ಸಹ ನಟಿಸುತ್ತಿದ್ದ, ಚಿತ್ರದಲ್ಲಿರುವ ತಾರಾಗಣಕ್ಕೆ ರೋಹಿತ್ ಹೊಸ ಸೇರ್ಪಡೆಯಾಗಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿರುವ ರೋಹಿತ್, ಖಾಕಿ ತೊಟ್ಟು ಪೊಲೀಸ್ ಅವತಾರದಲ್ಲಿರುವ ಸೆಲ್ಫಿಯನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.