ವೆನಿಲ್ಲಾ ಚಿತ್ರದಲ್ಲಿ ಕ್ಯಾಪ್ನೋಫೋಬಿಯಾ ಕಾಯಿಲೆ ಪರಿಶೋಧನೆ: ಜಯತೀರ್ಥ

ಭಾವನಾತ್ಮಕ ಮತ್ತು ಸಾಮಾಜಿಕ ಸಂದೇಶವುಳ್ಳ ಬ್ಯುಟಿಫೂಲ್ ಮನಸುಗಳು ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಜಯತೀರ್ಥ ಅವರು ಇದೀಗ ಕ್ಯಾಪ್ನೋಫೋಬಿಯಾ ಕಾಯಿಲೆ...
ವೆನಿಲ್ಲಾ
ವೆನಿಲ್ಲಾ
ಭಾವನಾತ್ಮಕ ಮತ್ತು ಸಾಮಾಜಿಕ ಸಂದೇಶವುಳ್ಳ ಬ್ಯುಟಿಫೂಲ್ ಮನಸುಗಳು ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಜಯತೀರ್ಥ ಅವರು ಇದೀಗ ಕ್ಯಾಪ್ನೋಫೋಬಿಯಾ ಕಾಯಿಲೆ ಕುರಿತಾದ ಚಿತ್ರಕಥೆ ಒಂದಿರುವ ಮರ್ಡರ್ ಮಿಸ್ಟ್ರಿ ವೆನಿಲ್ಲಾ ಚಿತ್ರವನ್ನು ನಿರ್ದೇಶಿಸಿದ್ದಾರೆ. 
ವೆನಿಲ್ಲಾ ಚಿತ್ರ ಮರ್ಡರ್ ಮಿಸ್ಟ್ರಿ ಚಿತ್ರವಾಗಿದ್ದು ಇಡೀ ಸಿನಿಮಾ ಒಂದು ಕೊಲೆಯ ಸುತ್ತ ನಡೆಯುತ್ತದೆಯಂತೆ. ಜೊತೆಗೆ ಸಿನಿಮಾ ಪ್ರತಿ ಹಂತದಲ್ಲೂ ಕುತೂಹಲ ಹುಟ್ಟಿಸುತ್ತಾ ಸಾಗುತ್ತದೆ ಎಂಬುದನ್ನು ನಿರ್ದೇಶಕ ಜಯತೀರ್ಥ ಹೇಳಿದ್ದಾರೆ. 
ಕ್ಯಾಪ್ನೋಫೋಬಿಯಾ ಇರುವವರಿಗೆ ಹೊಗೆ ನೋಡಿದರೆ ಭಯ ಆಗುತ್ತದೆ. ಈ ಚಿತ್ರಕ್ಕೂ ಆ ಫೋಬಿಯಾಗೂ ಸಂಬಂಧವಿದೆ. ಹೊಸ ಸಂಶೋಧನೆ ಸಂಶೋಧಕನ ಸಾವಿಗೆ ಹೇಗೆ ಕಾರಣವಾಗುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ. 
ಬ್ಯೂಟಿಫೂಲ್ ಮನಸುಗಳು ಚಿತ್ರದಲ್ಲಿ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸ್ವಾತಿ ಕೊಂಡೆ ಅವರು ವೆನಿಲ್ಲಾ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಅವಿನಾಶ್ ನಾಯಕನಾಗಿ ನಟಿಸಿದ್ದು ರವಿಶಂಕರ್ ಗೌಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com