ಬಿಡುಗಡೆಗೂ ಮುನ್ನ ವಿಜಯ್ ನಟನೆಯ 'ಸರ್ಕಾರ್' ಚಿತ್ರಕ್ಕೆ ಕಂಟಕ?

ಕಾಲಿವುಡ್ ಇಲೈ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ಸರ್ಕಾರ್ ಇಂದು ಬಿಡುಗಡೆಯಾಗುತ್ತಿದ್ದು ಚಿತ್ರ ಬಿಡುಗಡೆಗೂ ಮುನ್ನ ಕಂಟಕ ಎದುರಾಗಿದೆ...
ವಿಜಯ್
ವಿಜಯ್
ಚೆನ್ನೈ: ಕಾಲಿವುಡ್ ಇಲೈ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ಸರ್ಕಾರ್ ಇಂದು ಬಿಡುಗಡೆಯಾಗುತ್ತಿದ್ದು ಚಿತ್ರ ಬಿಡುಗಡೆಗೂ ಮುನ್ನ ಕಂಟಕ ಎದುರಾಗಿದೆ. 
ಖ್ಯಾತ ಪೈರಸಿ ವೆಬ್ ಸೈಟ್ ತಮಿಳ್ ರಾಕರ್ಸ್ ಸರ್ಕಾರ್ ಚಿತ್ರ ನಾಳೆ ಬಿಡುಗಡೆಯಾದ 1 ಗಂಟೆಯೊಳಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ ಡಿ ಪ್ರಿಂಟ್ ಅನ್ನು ಬಿಡುಗಡೆ ಮಾಡುವುದಾಗಿ ಟ್ವೀಟ್ ಮಾಡಿ ಬೆದರಿಕೆ ಹಾಕಿದೆ. 
ತಮಿಳ್ ರಾಕರ್ಸ್ ಟ್ವೀಟ್ ಗೆ ಕೂಡಲೇ ಪ್ರತಿಕ್ರಿಯಿಸಿರುವ ತಮಿಳು ಚಿತ್ರರಂಗ ಹಾಗೂ ತಮಿಳು ವಾಣಿಜ್ಯ ಮಂಡಳಿ ಹೇಳಿಕೆ ಬಿಡುಗಡೆ ಮಾಡಿದ್ದು ಯಾವುದೇ ಕಾರಣಕ್ಕೂ ಚಿತ್ರಮಂದಿರದಲ್ಲಿ ಯಾರೂ ಚಿತ್ರವನ್ನು ವಿಡಿಯೋ ಮಾಡಬಾರದು ಎಂದು ಎಚ್ಚರಿಕೆ ನೀಡಿದೆ.
ಎರ್ ಆರ್ ಮುರುಗದಾಸ್ ನಿರ್ದೇಶನದ ಸರ್ಕಾರ್ ಚಿತ್ರದ ಕುರಿತಂತೆ ದೇಶಾದ್ಯಂತ ನಿರೀಕ್ಷೆಗಳು ಹೆಚ್ಚಾಗಿದೆ. ಇದೇ ವೇಳೆ ಪೈರಸಿ ವೆಬ್ ಸೈಟ್ ಬೆದರಿಕೆ ಹಾಕಿರುವುದು ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com