ದ್ವಾರಕೀಶ್ ಚಿತ್ರ ಲಾಂಛನದಲ್ಲಿ ಬಿ.ಎಸ್.ದ್ವಾರಕೀಶ್ ಹಾಗೂ ಯೋಗಿ ದ್ವಾರಕೀಶ್ ಬಂಗಳೆ ಅವರು ನಿರ್ಮಿಸುತ್ತಿರುವ `ಪ್ರೊಡಕ್ಷನ್ ನಂ 52` ಚಿತ್ರದ ಮುಹೂರ್ತ ಸಮಾರಂಭ ನವಂಬರ್ 9ರ ಶುಕ್ರವಾರ ಹೆಚ್.ಎಸ್.ಆರ್ ಬಡಾವಣೆಯ ಶ್ರೀಬಸವೇಶ್ವರ ಗಾಯತ್ರಿ ದೇವಿ ದೇವಾಲಯದಲ್ಲಿ ನೆರವೇರಿತು. ನಿರ್ಮಾಪಕ(ಮುಂಬೈ) ಹಾಗೂ ಉದ್ಯಮಿ ಕೊಲಂಬಸ್ ಜೇವಿಯರ್ ಚಿತ್ರದ ಪ್ರಥಮ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಉದ್ಯಮಿ ಸತ್ಯಮೂರ್ತಿ ಕ್ಯಾಮೆರಾ ಚಾಲನೆ ಮಾಡಿದರು. ಡಿಸಂಬರ್ ಎರಡನೇ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ.
ಪಿ.ವಾಸು ಅವರ ನಿರ್ದೇಶನದ ಈ ಚಿತ್ರದ ನಾಯಕರಾಗಿ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅಭಿನಯಿಸುತ್ತಿದ್ದಾರೆ. ಅನಂತನಾಗ್, ರಚಿತರಾಮ್, ಸಾಧುಕೋಕಿಲ, ರಂಗಾಯಣ ರಘು ಮುಂತಾದ ಪ್ರಮುಖರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಗುರುಕಿರಣ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಪಿ.ಕೆ.ಎಚ್ ದಾಸ್ ಅವರ ಛಾಯಾಗ್ರಹಣವಿದೆ. ವಿ.ನಾಗೇಂದ್ರ ಪ್ರಸಾದ್ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ.
Advertisement