ಯಶ್ ನಟನೆಯ ಕೆಜಿಎಫ್ ಚಿತ್ರದ ಬಗ್ಗೆ ಚರ್ಚೆಗಳು ಆರಂಭವಾಗಿವೆ, ಸಿನಿಮಾ ನಿರ್ಮಾಣದ ಗುಣಮಟ್ಟ ಹಾಗೂ ನಿರ್ದೇಶನದ ಬಗ್ಗೆ ಎಲ್ಲೆಡೆ ಮಾತನಾಡುತ್ತಿದ್ದಾರೆ, ಚಿತ್ರದ ಛಾಯಾಗ್ರಹಣ ಸಂಬಂಧ ಛಾಯಾಗ್ರಾಹಕ ಭುವನ್ ಗೌಡ ಬಗ್ಗೆ ಎಲ್ಲೆಡೆ ಹೊಗಳಿಕೆ ಮಾತುಗಳು ಕೇಳಿ ಬರುತ್ತಿವೆ, ದಕ್ಷಿಣ ಭಾರತ ಹಾಗೂ ಬಾಲಿವುಡ್ ಸಿನಿಮಾ ನಿರ್ಮಾಪಕರುಗಳಿಂದ ಭುವನ್ ಗೆ ನಿರಂತರ ಕರೆ ಬರುತ್ತಿವೆ, ಆದರೆ ಕೆಜಿಎಫ್ ಸಿನಿಮಾ ಬಿಡುಗಡೆ ಆಗುವವರೆಗೂ ಕಾಯಲು ಭುವನ್ ನಿರ್ಧರಿಸಿದ್ದು ಸದ್ಯಕ್ಕೆ ಯಾವುದೇ ಪ್ರಾಜೆಕ್ಟ್ ಕೈಗೆತ್ತಿಕೊಂಡಿಲ್ಲ,