ನಂದಿತಾ ಶ್ವೇತಾ
ನಂದಿತಾ ಶ್ವೇತಾ

MeToo ಆಯ್ತು, ಈಗ WeOppose ಹೊಸ ಅಭಿಯಾನ ಪ್ರಾರಂಭಿಸಿದ 'ಜಿಂಕೆಮರಿ' ನಂದಿತಾ ಶ್ವೇತಾ!

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿದ್ದ ಮೀಟೂ ಆರೋಪ ಸ್ಯಾಂಡಲ್ವುಡ್ ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದು ಈ ಮಧ್ಯೆ ನಟಿ ನಂದಿತಾ ಶ್ವೇತಾ WeOppose ಎಂಬ...
Published on
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿದ್ದ ಮೀಟೂ ಆರೋಪ ಸ್ಯಾಂಡಲ್ವುಡ್ ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದು ಈ ಮಧ್ಯೆ ನಟಿ ನಂದಿತಾ ಶ್ವೇತಾ WeOppose ಎಂಬ ಹೊಸ ಅಭಿಯಾನವನ್ನು ಆರಂಭಿಸುತ್ತಿದ್ದಾರೆ. 
ಸಾಮಾಜಿಕ ಜಾಲತಾಣ ಅಭಿಮಾನಿಗಳ ಜತೆ ಸಂಪರ್ಕದಲ್ಲಿರಲು ಒಂದು ಉತ್ತಮ ತಾಣ. ತಮ್ಮ ಜೀವನದಲ್ಲಿ ಏನೆಲ್ಲ ಆಗುತ್ತಿದೆ. ಮುಂದಿನ ಚಿತ್ರಗಳೇನು ಎನ್ನುವುದರ ಬಗ್ಗೆ ಕಲಾವಿದರು ಸಾಮಾಜಿಕ ಜಾಲಾತಣದಲ್ಲಿ ಬರೆದುಕೊಂಡರೆ ನೇರವಾಗಿ ಅದು ಅಭಿಮಾನಿಗಳಿಗೆ ತಲುಪುತ್ತದೆ. ಇದೇ ಸಾಮಾಜಿಕಾ ಜಾಲಾತಣವನ್ನು ಮುಂದಿಟ್ಟುಕೊಂಡು ಕೆಲ ನಟಿಯರಾದ ಶೃತಿ ಹರಿಹರನ್, ಸಂಗೀತಾ ಭಟ್, ಸಂಜನಾ ಗಲ್ರಾನಿ ಮೀಟೂ ಆರೋಪಗಳನ್ನು ಮಾಡಿದ್ದರು. ಇದು ಸಾಕಷ್ಟ ಚರ್ಚೆಗೆ ಗ್ರಾಸವಾಗಿತ್ತು. 
ಕೆಲವೊಮ್ಮೆ ಅಭಿಮಾನಿಗಳು ಪೋಸ್ಟ್ ಗಳಿಗೆ ಕೆಟ್ಟದಾಗಿ ಕಮೆಂಟ್ ಮಾಡುವುದು ಮಾತ್ರವಲ್ಲ. ವೈಯಕ್ತಿಕವಾಗಿಯೂ ಅಶ್ಲೀಲ ಸಂದೇಶ ಕಳುಹಿಸುತ್ತಾರೆ. ಈ ಬಗ್ಗೆ ಯಾರೂ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಇದನ್ನು ವಿರೋಧಿಸಲು ಶ್ವೇತಾ WeOppose ಅಭಿಯಾನವನ್ನು ಆರಂಭಿಸಿದ್ದಾರೆ. 
ಇದಕ್ಕೆ ಪೂರಕವೆಂಬಂತೆ ತಮಗೆ ಅಭಿಮಾನಿಯೊಬ್ಬ ಕಳುಹಿಸಿದ ಅಶ್ಲೀಲ ಸಂದೇಶದ ಸ್ಕ್ರೀನ್ ಶಾಟ್ ತೆಗೆದುಕೊಂಡು ಅದನ್ನು ಇನ್ ಸ್ಟಾಗ್ರಾಂಗೆ ಹಾಕಿ. ಇಂಥವರನ್ನು ಸುಮ್ಮನೆ ಬಿಡಬಾರದು. ನಾವು ಅದನ್ನು ನಿರ್ಲಕ್ಷ್ಯ ಮಾಡಿದಷ್ಟು ಇಂಥ ಮೆಸೇಜುಗಳು ಹೆಚ್ಚಾಗಿ ಬರುತ್ತವೆ ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com