ಶುಭಾ ಪೂಂಜಾ
ಸಿನಿಮಾ ಸುದ್ದಿ
MeToo ವಿರುದ್ಧ ಸಿಡಿದ ನಟಿ ಶುಭಾ ಪೂಂಜಾ, ನಟಿ ಸಂಜನಾ ಕುರಿತು ಹೇಳಿದ್ದೇನು?
ಸ್ಯಾಂಡಲ್ವುಡ್ ನಲ್ಲಿ ಮೀಟೂ ಆರೋಪಗಳು ಭಾರೀ ಸದ್ದು ಮಾಡಿದ್ದು ನಟಿ ಶುಭಾ ಪೂಂಜಾ ವಿರುದ್ಧ ವಿರುದ್ಧ ಸಿಡಿದಿದ್ದಾರೆ...
ಸ್ಯಾಂಡಲ್ವುಡ್ ನಲ್ಲಿ ಮೀಟೂ ಆರೋಪಗಳು ಭಾರೀ ಸದ್ದು ಮಾಡಿದ್ದು ನಟಿ ಶುಭಾ ಪೂಂಜಾ ವಿರುದ್ಧ ವಿರುದ್ಧ ಸಿಡಿದಿದ್ದಾರೆ.
ಕನ್ನಡ ಚಿತ್ರರಂಗ ಹೆಣ್ಣು ಮಕ್ಕಳಿಗೆ ಬಹಳ ಗೌರವ ನೀಡುತ್ತೆ. ಈಗ ಮೀಟೂ ಬಂದಿರೋದು ನನಗೆ ಬೇಜಾರಾಗಿದೆ. ಮೀಟೂ ಬಗ್ಗೆ ಇರುವ ಆರೋಪ ಪ್ರತ್ಯಾರೋಪವನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಬಗೆಹರಿಸುತ್ತದೆ. ಕನ್ನಡ ಚಿತ್ರರಂಗದಲ್ಲಿ ನಾನು 10-12 ವರ್ಷಗಳಿಂದ ಇದ್ದೇನೆ. ನನಗೆ ನಿರ್ದೇಶಕರು, ನಿರ್ಮಾಪಕರು ಹಾಗೂ ಅಭಿಮಾನಿಗಳ ಪ್ರೀತಿ ಗೌರವ ಸಿಕ್ಕಿದೆ. ಹೀಗಾಗಿ ಕನ್ನಡ ಚಿತ್ರರಂಗದಲ್ಲಿ ನನಗೆ ಯಾವುದೇ ರೀತಿಯ ಕಹಿ ಅನುಭವಗಳು ಆಗಿಲ್ಲ ಎಂದು ಹೇಳಿದ್ದಾರೆ.
ಸ್ಯಾಂಡಲ್ವುಡ್ ಅಷ್ಟೇ ಅಲ್ಲ ಎಲ್ಲಾ ರಂಗಗಳಲ್ಲೂ ಮೀಟೂ ಅಂತಹ ಕಹಿ ಅನುಭವದ ಪ್ರಕರಣಗಳು ಬೆಳಕಿಗೆ ಬರುತ್ತಿವೆ, ಕಹಿ ಅನುಭವಗಳಿಂದ ನೋವಾಗಿರುವವರು ಧ್ವನಿ ಎತ್ತುತ್ತಿದ್ದಾರೆ. ಸಿನಿ ರಂಗದಲ್ಲಿ ಈ ಪ್ರಕರಣಗಳನ್ನು ನೋಡಿಕೊಳ್ಳಲು ಹಿರಿಯರು ಇದ್ದಾರೆ, ಅವರು ಈ ಪ್ರಕರಣಗಳನ್ನು ಬಗೆಹರಿಸಿ ಅನ್ಯಾಯ ಆದವರಿಗೆ ನ್ಯಾಯ ಕೊಡಿಸುತ್ತಾರೆ ಎಂದು ಹೇಳಿದರು.
ಮೀಟೂ ಆರೋಪ ಮಾಡಿ ನಂತರ ನಟಿ ಸಂಜನಾ ಕ್ಷಮೆ ಕೇಳಿರೋದು ಅವರ ವೈಯಕ್ತಿಕ ವಿಚಾರ, ಅದರ ಬಗ್ಗೆ ಅವರನ್ನೇ ಕೇಳಬೇಕು. ನಾನು ಬೇರೆಯವರ ವೈಯಕ್ತಿಕ ವಿಚಾರವನ್ನು ಮಾಡನಾಡುವುದು ತಪ್ಪಾಗುತ್ತದೆ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ