'ಲಂಬೋದರ' ಚಿತ್ರದ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆ ಮಾಡಿದ ಪುನೀತ್‍ ರಾಜಕುಮಾರ್

ವೃಷಾಂಕ್ ಮೂವೀ ಮೇಕರ್ಸ್ ಲಾಂಛನದಲ್ಲಿ ವಿಶ್ವೇಶ್ವರ್ ಪಿ ಹಾಗೂ ರಾಘವೇಂದ್ರ ಭಟ್ ಅವರು ನಿರ್ಮಿಸಿರುವ, ಯೋಗಿ ನಾಯಕರಾಗಿ ನಟಿಸಿರುವ `ಲಂಬೋದರ` ಚಿತ್ರಕ್ಕಾಗಿ...
`ಲಂಬೋದರ' ಚಿತ್ರದ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆ
`ಲಂಬೋದರ' ಚಿತ್ರದ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆ
Updated on

ವೃಷಾಂಕ್ ಮೂವೀ ಮೇಕರ್ಸ್ ಲಾಂಛನದಲ್ಲಿ ವಿಶ್ವೇಶ್ವರ್ ಪಿ ಹಾಗೂ ರಾಘವೇಂದ್ರ ಭಟ್ ಅವರು ನಿರ್ಮಿಸಿರುವ, ಯೋಗಿ ನಾಯಕರಾಗಿ ನಟಿಸಿರುವ `ಲಂಬೋದರ` ಚಿತ್ರಕ್ಕಾಗಿ ನಾಗಾರ್ಜುನ ಶರ್ಮ, ಅನಿರುದ್ದ ಶಾಸ್ತ್ರಿ ಬರೆದಿರುವ, ಸಂಚಿತ್ ಹೆಗಡೆ ಹಾಡಿರುವ  `ಲಂಬೋದರ ಲೂಸಾದ` ಹಾಡಿನ ಲಿರಿಕಲ್ ವೀಡಿಯೋ ಅನ್ನು ಇತ್ತೀಚೆಗೆ ಪವರ್‍ಸ್ಟಾರ್ ಪುನೀತ್‍ ರಾಜಕುಮಾರ್ ಬಿಡುಗಡೆ ಮಾಡಿದರು. ಮುಂದಿನ ವಾರ ಚಿತ್ರದ ಮತ್ತೊಂದು ಹಾಡನ್ನು ಚಿತ್ರರಂಗದ ಗಣ್ಯರೊಬ್ಬರು ಬಿಡುಗಡೆ ಮಾಡಲಿದ್ದಾರೆ. ಡಿಸಂಬರ್‍ನಲ್ಲಿ ಚಿತ್ರದ ಆಡಿಯೋ ರಿಲೀಸ್ ಆಗಲಿದೆ.

ರಘುಶಾಸ್ತ್ರಿ(ರನ್ ಆಂಟೋನಿ), ಪ್ರಶಾಂತ್(ರಂಗನ ಸ್ಟೈಲ್) ಹಾಗೂ ಕೋಲಾರ ಸೀನ(ಜಸ್ಟ್ ಮದ್ವೇಲಿ) ನಿರ್ದೇಶಕರ ಬಳಿ ಕೆಲಸ ಮಾಡಿ ಅನುಭವವಿರುವ ಕೃಷ್ಣರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೆಶಿಸಿರುವ ಈ ಚಿತ್ರಕ್ಕೆ ಬಸವನಗುಡಿ ಬೆಂಗಳೂರು ಎಂಬ ಅಡಿಬರಹವಿದೆ.

ಕಾರ್ತಿಕ್ ಶರ್ಮ ಸಂಗೀತ ನಿರ್ದೇಶನ, ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ, ವಿಕ್ರಂ ಮೋರ್ ಸಾಹಸ ನಿರ್ದೇಶನ ಹಾಗೂ ಹರೀಶ್ ಗಿರಿಗೌಡ ಸಂಕಲನವಿರುವ ಈ ಚಿತ್ರಕ್ಕೆ ಕೆ.ಕೃಷ್ಣರಾಜ್ ಹಾಗೂ ಶೈಲೇಶ್ ರಾಜ್ ಸಂಭಾಷಣೆ ಬರೆದಿದ್ದಾರೆ.

ಲೂಸ್ ಮಾದ ಯೋಗಿ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಆಕಾಂಕ್ಷ. ಧರ್ಮಣ್ಣ, ಅಚ್ಯುತಕುಮಾರ್, ಅರುಣಾ ಬಾಲರಾಜ್, ಮಂಜುನಾಥ್ ಹೆಗ್ಡೆ, ಸಿದ್ದು ಮೂಲಿಮನಿ, ಭೂಮಿಕಾ ಶೆಟ್ಟಿ  ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com