ಭರಾಟೆಗಾಗಿ ಮೇಲುಕೋಟೆಯಲ್ಲಿ ಚೌಡೇಶ್ವರಿ ಹಾಗೂ ಶಿವನ ಅದ್ಧೂರಿ ಸೆಟ್!

ಭರ್ಜರಿ ಚಿತ್ರದಲ್ಲಿ ನರಸಿಂಹ ಮೂರ್ತಿ ಹಾಗೂ ಬಹದ್ದೂರ್ ಚಿತ್ರದಲ್ಲಿ ಪಂಚಮುಖಿ ಆಂಜನೇಯ ಮೂರ್ತಿಯ ಅದ್ಧೂರಿ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದ ನಿರ್ದೇಶಕ ಚೇತನ್...
ಭರಾಟೆ ಚಿತ್ರದ ಸೆಟ್
ಭರಾಟೆ ಚಿತ್ರದ ಸೆಟ್
ಭರ್ಜರಿ ಚಿತ್ರದಲ್ಲಿ ನರಸಿಂಹ ಮೂರ್ತಿ ಹಾಗೂ ಬಹದ್ದೂರ್ ಚಿತ್ರದಲ್ಲಿ ಪಂಚಮುಖಿ ಆಂಜನೇಯ ಮೂರ್ತಿಯ ಅದ್ಧೂರಿ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದ ನಿರ್ದೇಶಕ ಚೇತನ್ ಕುಮಾರ್ ಇದೀಗ ತಮ್ಮ ಭರಾಟೆ ಚಿತ್ರಕ್ಕೂ ಅದ್ಧೂರಿ ದೇವರ ಸೆಟ್ ಅನ್ನು ಹಾಕಿಸಿದ್ದಾರೆ. 
ಶ್ರೀಮುರಳಿ ನಟನೆಯ ಭರಾಟೆ ಚಿತ್ರಕ್ಕಾಗ ಮೇಲುಕೋಟೆಯಲ್ಲಿ ಚೌಡೇಶ್ವರಿ ದೇವಿ ಹಾಗೂ ಶಿವನ ದೊಡ್ಡ ಸೆಟ್ ಅನ್ನು ಹಾಕಲಾಗಿದ್ದು ನವೆಂಬರ್ 9ರಿಂದ ಚಿತ್ರೀಕರಣ ಮಾಡಲಾಗುತ್ತಿದೆ. ಇನ್ನು ಮೋಹನ್ ಬಿ ಕೆರೆ ಅವರು ದೇವಸ್ಥಾನದ ಕಲ್ಯಾಣಿಯಲ್ಲಿ ಅದ್ಧೂರಿ ಸೆಟ್ ಅನ್ನು ನಿರ್ಮಿಸಿದ್ದಾರೆ. 
ಈ ಅದ್ಧೂರಿ ಸೆಟ್ ನಲ್ಲಿ ಸುಮಾರು ನಟ, ನಟಿ ಸೇರಿದಂತೆ 1000ಕ್ಕೂ ಹೆಚ್ಚು ಕಲಾವಿದರು ಭಾಗಿಯಾಗಿದ್ದಾರೆ. ಇನ್ನು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದಾರೆ. 
ಹಿರಿಯ ನಟ ಸುಮನ್, ತಾರಾ, ರಂಗಾಯಣ ರಘು, ಪೆಟ್ರೋಲ್ ಪ್ರಸನ್ನ, ಮೈಕೊ ನಾಗರಾಜ್ ಸೇರಿದಂತೆ ಹಲವು ನಟಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com