ರಜನಿಯ 2.0 ಗೆ ಮತ್ತೆ ವಿಘ್ನ: ಸೆಲ್ಯುಲಾರ್ ಆಪರೇಟರ್ ಗಳಿಂದ ಚಿತ್ರ ನಿರ್ಮಾಪಕರ ವಿರುದ್ಧ ದೂರು!

ಮೊಬೈಲ್ ದೂರವಾಣಿ ಹಾಗೂ ಮೊಬೈಲ್ ನೆಟ್ ವರ್ಕ್ ಗಳ ಬಗ್ಗೆ ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ಭಾರತದ ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ರಜನಿ- ಅಕ್ಷಯ್ ಕುಮಾರ್....
ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್
ಚೆನ್ನೈ: ಮೊಬೈಲ್ ದೂರವಾಣಿ ಹಾಗೂ ಮೊಬೈಲ್ ನೆಟ್ ವರ್ಕ್ ಗಳ ಬಗ್ಗೆ ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ಭಾರತದ ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ರಜನಿ- ಅಕ್ಷಯ್ ಕುಮಾರ್ ಅಭಿನಯದ 2.0 ಚಿತ್ರ ನಿರ್ಮಾಪಕರ ವಿರುದ್ಧ ದೂರು ದಾಖಲಿಸಿದೆ.
ಭಾರತ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಹಾಗೂ ಕೇಂದ್ರ ಸೆನ್ಸಾರ್ ಮಂಡಳಿಗೆ ಅಸೋಸಿಯೇಷನ್ ದೂರು ಸಲ್ಲಿಸಿದ್ದು  ​​"2.0 ಚಿತ್ರದ ಟ್ರೇಲರ್ ನಲ್ಲಿ ಮೊಬೈಲ್ ದೂರವಾಣಿಗಳು ಮತ್ತು ಮೊಬೈಲ್ ನೆಟ್ ವರ್ಕ್ ಟವರ್ ಗಳು ಮಾನವರು, ಪಕ್ಷಿಗಳು ಸೇರಿದಂತೆ ಜೀವಿಗಳಿಗೆ ಹಾನಿಕಾರಕ ಎನ್ನುವುದಾಗಿ ತಪ್ಪಾಗಿ ಬಿಂಬಿಸಲಾಗಿದೆ." ಎಂದು ಆರೋಪಿಸಿದೆ.
2.0 ರಲ್ಲಿ, ಅಕ್ಷಯ್ ಕುಮಾರ್ ವಿಚಿತ್ರ ಪಕ್ಷಿಶಾಸ್ತ್ರಜ್ಞನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.ವರು ಇಂತಹ ಸಾಧನಗಳಿಂದ ವಿದ್ಯುತ್ಕಾಂತೀಯ ಕಿರಣಗಳು ಹೊರಸೂಸುವುದರಿಂದ ಪ್ರಾಣಿಗಳು ಮತ್ತು ಪಕ್ಷಿಗಳ ಸಾವು ಸಂಭವಿಸುತ್ತದೆ ಎಂದು ತೋರಿಸುತ್ತಾರೆ. ಆ ವೇಳೆ ಮೊಬೈಲ್ ಫೋನ್ ಹಾಗೂ ನೆಟ್ ವರ್ಕ್ ಟವರ್ ಗಳು ಮಾನವನಿಗೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಹಾನಿಕಾರಕ ಎಂದು ತೋರಿಸಲಾಗುತದೆ. ಇದೀಗ ಇದೇ ದೃಶ್ಯವನ್ನು ಉದಾಹರಿಸಿ ಸಿಓಎಐ ಮೊಬೈಲ್ ಸೇವೆಗಳು ಮತ್ತು ಮೊಬೈಲ್ ಟವರ್ ಗಳು ಹೊರಸೂಸುವ ಕಿರಣ್ಭಗಳು ಹಾನಿಕಾರಕ ಎನ್ನಲು ಯಾವುದೇ "ಸಾಕ್ಷ್ಯಗಳಿಲ್ಲ" ಎಂದು ದೂರಿದೆ. ಅಲ್ಲದೆ ಚಿತ್ರದ ಕಥೆಯಿಂದಾಗಿ ಮೊಬೈಲ್ ನೆಟ್ ವರ್ಕ್ ಮೇಲೆ ಜನರಿಗೆ ತಪ್ಪು ಭಾವನೆ ಮೂಡುವಂತಾಗುತ್ತದೆ ಎನ್ನಲಾಗಿದೆ.
ಚಿತ್ರ ತಯಾರಕರು  ಭಾರತೀಯ ಸಿನೆಮಾಟೊಗ್ರಾಫ್ ಆಕ್ಟ್ (1952) ರ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವ ಅಸೋಸಿಯೇಷನ್ಸಚಿವಾಲಯ ಹಾಗೂ ಸೆನ್ಸಾರ್ ಮಂಡಳಿಈ ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿದೆ.
ಶಂಕರ್ ನಿರ್ದೇಶನದ, 2.0 2010ರಲ್ಲಿ ತೆರೆಕಂಡ ":ಎಂದಿರನ್" ಯಶಸ್ವಿ ಚಿತ್ರದ ಮುಂದಿನ ಭಾಗವಾಗಿದೆ.ಎಲ್ ವೈಸಿಎ ಪ್ರೊಡಕ್ಷನ್ಸ್ ನಿರ್ಮಾಣದ  2.0 ರೂ. 510 ಕೋಟಿ ರೂ ಬಂಡವಾಳದಲ್ಲಿ ತಯಾರಾಗುತ್ತಿದೆ.ಚಿತ್ರವು ನವೆಂಬರ್ 29, 2018 ರಂದು 14 ಭಾಷೆಗಳಲ್ಲಿ ಬಿಡುಗಡೆಯಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com