ರೇಸ್ ಕೋರ್ಸ್ ರಸ್ತೆಗೆ ನಟ ಅಂಬರೀಷ್ ಹೆಸರಿಡುವಂತೆ ಕೆಎಫ್ ಸಿಸಿ ಒತ್ತಾಯ!

ಬೆಂಗಳೂರಿನಲ್ಲಿರುವ ರೇಸ್​ಕೋರ್ಸ್ ರಸ್ತೆಗೆ ಇಡಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಭಿಪ್ರಾಯ ಒತ್ತಾಯಿಸಿದೆ.
ಅಂಬರೀಷ್
ಅಂಬರೀಷ್
Updated on
ಬೆಂಗಳೂರು: ಬೆಂಗಳೂರಿನಲ್ಲಿರುವ ರೇಸ್​ಕೋರ್ಸ್ ರಸ್ತೆಗೆ ಇಡಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಭಿಪ್ರಾಯ ಒತ್ತಾಯಿಸಿದೆ.
ಈಗಾಗಲೇ ಮಂಡಳಿಯ ಪ್ರಮುಖರೆಲ್ಲ ಸಭೆ ಸೇರಿ ರಸ್ತೆ ಹೆಸರು ಬದಲಾವಣೆ ಬಗ್ಗೆ ಚರ್ಚೆ ನಡೆಸಿದ್ದು, ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಹಾಗೂ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಬಾ.ಮಾ. ಹರೀಶ್ ಹೇಳಿದ್ದಾರೆ.
ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅಂಬರೀಷ್ ಸಲ್ಲಿಸಿರುವ ಸೇವೆ ಅಪಾರ. ಹಾಗಾಗಿ ಆನಂದ್​ರಾವ್ ವೃತ್ತದಿಂದ ಚಾಲುಕ್ಯ ವೃತ್ತದ ವರೆಗಿನ ರಸ್ತೆಗೆ ಅಂಬರೀಷ್ ರಸ್ತೆ ಎಂದು ಹೆಸರಿಡಬೇಕು. ಇದು ಬರೀ ವಾಣಿಜ್ಯ ಮಂಡಳಿಯ ಅಭಿಪ್ರಾಯವಲ್ಲ, ಅಭಿಮಾನಿಗಳು ಮತ್ತು ಚಿತ್ರೋದ್ಯಮದ ಒತ್ತಾಯವಾಗಿದೆ ಎಂದು ಹೇಳಿದ್ದಾರೆ. ಅಂಬರೀಷ್ ಅವರಿಗೆ ರೇಸ್ ಮೇಲೆ ಅಪಾರ ವ್ಯಾಮೋಹ ಎಂಬುದು ಎಲ್ಲರಿಗೂ ತಿಳಿದಿದೆ. ಅವರಿಗೆ ಹೈಗ್ರೌಂಡ್ಸ್ ಎಂದರೇ ಭಾರಿ ಅಚ್ಚು ಮೆಚ್ಚು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com