ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ
ಸಿನಿಮಾ ಸುದ್ದಿ
ರಕ್ಷಿತ್ ನಟನೆಯ ಅವನೇ ಶ್ರೀಮನ್ನಾರಾಯಣ ಚಿತ್ರ ನೋಡಲು ಕಾಯುತ್ತಿರುವುದಾಗಿ ರಶ್ಮಿಕಾ ಟ್ವೀಟ್!
ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸ್ಯಾಂಡಲ್ವುಡ್ ನ ಖ್ಯಾತ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಬ್ರೇಕಪ್ ಮಾಡಿಕೊಂಡಿದ್ದರು...
ಬೆಂಗಳೂರು: ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸ್ಯಾಂಡಲ್ವುಡ್ ನ ಖ್ಯಾತ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಬ್ರೇಕಪ್ ಮಾಡಿಕೊಂಡಿದ್ದರು. ಬಹು ದಿನಗಳ ನಂತರ ರಶ್ಮಿಕಾ ಟ್ವೀಟ್ ಮಾಡಿ ಮಾಜಿ ಬಾಯ್ ಫ್ರೆಂಡ್ ಚಿತ್ರಕ್ಕಾಗಿ ಕಾಯುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ.
ರಕ್ಷಿತ್ ಶೆಟ್ಟಿ ಅಭಿನಯದ ಸಚಿನ್ ರವಿ ನಿರ್ದೇಶನದ ಅವನೇ ಶ್ರೀಮನ್ನಾರಾಯಣ ಚಿತ್ರವನ್ನು ನೋಡಲು ಕಾಯುತ್ತಿರುವುದಾಗಿ ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದಾರೆ.
ರಶ್ಮಿಕಾ ತಮ್ಮ ಟ್ವೀಟ್ ನಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರ ನಿರ್ದೇಶಕ ಸಚಿನ್ ರವಿ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿ ಟ್ವೀಟ್ ಮಾಡಿದ್ದು ಹುಟ್ಟುಹಬ್ಬದ ಶುಭಾಶಯ ಸಚಿನ್. ಅವನೇ ಶ್ರೀಮನ್ನಾರಾಯಣ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದೇನೆ. ಬೆಸ್ಟ್ ಆಫ್ ಲಕ್, ಸಂತೋಷ ನಿಮ್ಮದಾಗಲಿ ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ