'ದಿ ವಿಲನ್ ' ಚಿತ್ರದ 10 ಸೆಕೆಂಡ್ ಗಳ ನಾಲ್ಕು ಟೀಸರ್ ಬಿಡುಗಡೆ!
ಹ್ಯಾಟ್ರಿಕ್ ಹಿರೋ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ' ದಿ ವಿಲನ್ ' ಚಿತ್ರದ 10 ಸೆಕೆಂಡ್ ಗಳ ನಾಲ್ಕು ಟೀಸರ್ ಗಳು ಬಿಡುಗಡೆಯಾಗಿವೆ.
ಬೆಂಗಳೂರು : ಹ್ಯಾಟ್ರಿಕ್ ಹಿರೋ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ' ದಿ ವಿಲನ್ ' ಚಿತ್ರದ 10 ಸೆಕೆಂಡ್ ಗಳ ನಾಲ್ಕು ಟೀಸರ್ ಗಳು ಬಿಡುಗಡೆಯಾಗಿವೆ.
ಇದೇ ತಿಂಗಳ 18 ರಂದು ತೆರೆಗೆ ಅಪ್ಪಳಿಸಲು ಚಿತ್ರ ತಂಡ ಸಿದ್ಧತೆ ನಡೆಸಿದ್ದು, ನಿರ್ದೇಶಕ ಪ್ರೇಮ್ ಮತ್ತೆ ನಾಲ್ಕು ಟೀಸರ್ ಬಿಡುಗಡೆಗೊಳಿಸುವ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಾಗುವಂತೆ ಮಾಡಿದ್ದಾರೆ.
ಜಗತ್ತಿನ ಯಾವುದೇ ಮೂಲೆಲಿದ್ರೂ ಆ ಬೇಟಿ ನಂದು ಎಂದು ಶಿವರಾಜ್ ಕುಮಾರ್ ಅಬ್ಬರಿಸಿದ್ದರೆ ಇದಕ್ಕೆ ಪ್ರತಿಯಾಗಿ ಹೋ ಭ್ರಮೆ ಎಂದು ಕೂಲಾಗಿ ಪ್ರತಿಕ್ರಿಯೆ ನೀಡುತ್ತಾರೆ ಕಿಚ್ಚ ಸುದೀಪ್
ಚಿತ್ರ ಆರಂಭದಿಂದಲೂ ಒಂದಲ್ಲಾ ಒಂದು ಕಾರಣದಿಂದ ದಿ ವಿಲನ್ ಚಿತ್ರ ಕನ್ನಡ ಸಿನಿಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಚಿಹಾಕಿದ್ದು, ನಿರ್ದೇಶಕ ಪ್ರೇಮ್ ಕೂಡಾ ಚಿತ್ರಕ್ಕೆ ಅಷ್ಟೇ ಅಬ್ಬರದ ಪ್ರಚಾರ ನೀಡುತ್ತಿದ್ದಾರೆ.
ಶಿವರಾಜ್ ಕುಮಾರ್ ಹಾಗೂ ಸುದ್ದೀಪ್ ಒಟ್ಟಿಗೆ ಅಭಿನಯಿಸಿರುವುದು ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ..
ಸಿ. ಆರ್. ಮನೋಹರ್ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಬಿಡುಗಡೆ ಮುನ್ನವೇ ಈಗಾಗಲೇ ವಿವಿಧ ರೈಟ್ಸ್ ಗಳಿಂದ 50 ಕೋಟಿ ರೂ. ಬಾಚಿದೆ ಎಂಬಂತಹ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿದೆ.