ಸುದೀಪ್
ಸುದೀಪ್

ಕನ್ನಡ ನಿರ್ದೇಶಕರಿಗೆ ಮತ್ತೆ ಸ್ಪೂರ್ತಿಯಾದ ಮದಕರಿ ನಾಯಕ!

ಕನ್ನಡದಲ್ಲಿ ಇದುವರೆಗೆ ಚಿತ್ರದುರ್ಗದ ವೀರ ಮದಕರಿ ನಾಯಕನ ಕಥೆಯಾಧರಿಸಿ ಸಾಕಷ್ಟು ಚಿತ್ರಗಳು ಬಂದಿದೆ. ಇತ್ತೀಚೆಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ತಮ್ಮ ನಿರ್ಮಾಣ ಸಂಸ್ಥೆ....
Published on
ಬೆಂಗಳೂರು: ಕನ್ನಡದಲ್ಲಿ ಇದುವರೆಗೆ ಚಿತ್ರದುರ್ಗದ ವೀರ ಮದಕರಿ ನಾಯಕನ ಕಥೆಯಾಧರಿಸಿ ಸಾಕಷ್ಟು ಚಿತ್ರಗಳು ಬಂದಿದೆ. ಇತ್ತೀಚೆಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ತಮ್ಮ ನಿರ್ಮಾಣ ಸಂಸ್ಥೆ ಆಶ್ರಯದಲ್ಲಿ "ಗಂಡುಗಲಿ ಮದಕರಿ ನಾಯಕ" ಚಿತ್ರ ನಿರ್ಮಾಣ ಮಾಡುವುದಾಗಿ ಘೋಷ್ಸಿದ್ದಾರೆ. ದರ್ಶನ್ ನಾಯಕನಾಗಿ ಕಾಣಿಸಿಕೊಳ್ಳಲಿರುವ ಈ ಚಿತ್ರ ಬಿ.ಎಲ್.ವೇಣು ಕಥೆಯನ್ನಾಧರಿಸಿ ಬರಲಿದೆ. ಚಿತ್ರಕ್ಕೆ ಕನ್ನಡದ ಹಿರಿಯ ನಿರ್ದೇಶಕಾಲ್ಲಿ ಒಬ್ಬರಾದ ರಾಜೇಂದ್ರ ಸಿಂಗ್ ಬಾಬು ಆಕ್ಷನ್ ಕಟ್ ಹೇಳಲಿದ್ದಾರೆ.
ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್ ಅವರಿಗಾಗಿ ಹಂಸಲೇಖಾ ತಾವು ಒಂದು ಚಿತ್ರವನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ ಎನ್ನುವ ವರದಿಗಳು ಹರಿದಾಡುತ್ತಿದ್ದು ಆ ಚಿತ್ರ ಸಹ ವೇಣು ಕಥೆಯನ್ನೇ ಆಧರಿಸಿರಲಿದೆ.ಸುದೀಪ್ ಹಾಗೂ ಅವರ ಪತ್ನಿ ಪ್ರಿಯಾ ರಾಧಾಕೃಷ್ಣನ್ ಈ ಚಿತ್ರಕ್ಕಾಗಿ . 100 ]ಕೋಟಿ ಬಂಡವಾಳ ಹೂಡಲಿದ್ದಾರೆ, ಈ ಚಿತ್ರ ವಿವಿಧ ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗಲಿದೆ ಎನ್ನುವ ಮಾತುಗಳು ಗಾಂಧಿ ನಗರದಲ್ಲಿ ಹರಿದಾಡುತ್ತಿದೆ.
ವಿಷಯವೆಂದರೆ 2009ರಲ್ಲಿ ಸುದೀಪ್ ಅಭಿನಯದ "ವೀರ ಮದಕರಿ" ಎನ್ನುವ ಪಕ್ಕಾ ಕಮರ್ಷಿಯಲ್ ಚಿತ್ರ ಬಿಡುಗಡೆಯಾದಾಗ ವಾಲ್ಮೀಲಿ ಟ್ರಸ್ಟ್ ಗೆ ಸೇರಿದ್ದ ಸ್ವಾಮಿಯೊಬ್ಬರು ಸುದೀಪ್ ಗೆ ಚಿತ್ರದುರ್ಗದ ಪಾಳೇಗಾರನ ಬದುಕನ್ನು ಆಧರಿಸಿ ಚಿತ್ರ ನಿರ್ಮಿಸುವಂತೆ ಸೂಚಿಸಿದ್ದರು. ಇದಕ್ಕೆ ಸಮ್ಮತಿಸಿರುವ ಕಿಚ್ಚ ಸುದೀಪ್ ಇದೀಗ "ರಾಜ ವೀರ ಮದಕರಿ ನಾಯಕ" ಹೆಸರಿನ ಚಿತ್ರ ಮಾಡಲು ನಿರ್ಧರಿಸಿದ್ದಾರೆ.
ಆದರೆ ಚಿತ್ರದ ಶೂಟಿಂಗ್ ಇನ್ನೂ ಪ್ರಾರಂಭವಾಗಿಲ್ಲ, ಚಿತ್ರದ ಸಂಬಂಧ ಬಹಳಷ್ಟು ಕೆಲಸಗಳಾಗುತ್ತಿದ್ದು ಸ್ಕ್ರಿಪ್ಟ್ ಇದೀಗ ತಯಾರಾಗುತ್ತಿದೆ. ಐತಿಹಾಸಿಕ ಚಿತ್ರವೊಂದರ ನಿಒರ್ಮಾಣಕ್ಕೆ ಮುನ್ನ ಸಾಕಷ್ತು ಪೂರ್ವ ತಯಾರಿ ನಡೆಸುವುದು ಅಗತ್ಯವಾಗಲಿದೆ. ಅಲ್ಲದೆ ಇದು ದೊಡ್ಡ ಬಜೆಟ್ ಚಿತ್ರ, ಬಹುಭಾಷೆಗಳಲ್ಲಿ ತಯಾರಾಗುವ ಕಾರಣ ಸುದೀಪ್ ಇದನ್ನು ಬೇರೆಯವರೊಡನೆ ಹಂಚಿಕೊಳ್ಳಲು ಬಯಸುವುದಿಲ್ಲ. ಎಲ್ಲಾ ತಯಾರಿಯನ್ನೂ ಅವರೊಬ್ಬರೇ ಮಾಡುತ್ತಿದ್ದು ಇದಕ್ಕಾಗಿ ಹೆಚು ಸಮಯ ತೆಗೆದುಕೊಳ್ಳಲು ಅವರು ಸಮ್ಮತಿಸುತ್ತಾರೆ. ಇನ್ನು ನಮಗೆ ಸಿಕ್ಕ ಮಾಹಿತಿಯಂತೆ ವಾಲ್ಮೀಕಿ ಮಠದ ಸ್ವಾಮಿಗಳು ತಾವು ಸ್ವತಃಅ ಚಿತ್ರಕಥೆ ರಚನೆಗೆ ತೊಡಗಿದ್ದಾರೆ.
ಇದಲ್ಲದೆ ಹಿರಿಯ ನಿರ್ದೇಶಕ ಟಿ.ಎಸ್. ನಾಗಾಭರನ ಸಹ ಅವ್ರ ದೃಷ್ಟಿಕೋನದಲ್ಲಿ ಮದಕರಿ ನಾಯಕನ ಚಿತ್ರಕಥೆಯೊಂದರ ತಯಾರಿಯಲ್ಲಿದ್ದಾರೆ. "ಅಂಬಿ ನಿಂಗ್ ವಯಸ್ಸಾಯ್ತೋ" ಚಿತ್ರದ ನಿರ್ದೇಶಕ ಗುರುದತ್ತ ಗಾಣಿಗ ಮತ್ತು ಸಚಿನ್ (ಸುದೀಪ್ ಸೋದರ ಸಂಬಂಧಿ) ಸಹ ಈ ಯೋಜನೆಯ ಪಾಲುದಾರರಾಗಿದ್ದಾರೆ. 
ಸಧ್ಯ ಸುದೀಪ್ "ದಿ ವಿಲನ್" ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೆ "ಪೈಲ್ವಾನ್" ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಬಹುನಿರೀಕ್ಷೆಯ ಮದಕರಿ ನಾಯಕನ ಶೂಟಿಂಗ್ ಮುಂದಿನ ವರ್ಷ ಪ್ರಾರಂಬಗೊಳ್ಳುವ ಸೂಚನೆ ಇದೆ.
ಇಷ್ಟಲ್ಲದೆ ತೆಲುಗಿನ ಸೈ ರಾ ಹಾಗೂ ಹಾಲಿವುಡ್ ಚಿತ್ರಗಳಲ್ಲಿ ತೊಡಗಿಸಿಕೊಂಡಿರುವ ಸುದೀಪ್ ಸೂರಪ್ಪ ಬಾಬು ಅವರ "ಕೋಟಿಗೊಬ್ಬ  3" ಬಳಿಕ ಈ ಚಿತ್ರದತ್ತ ಗಮನ ನೀಡಲಿದ್ದಾರೆ ಎನ್ನಲಾಗಿದೆ.ಎರಡು ಮೂರು ಕಮರ್ಷಿಯಲ್ ಚಿತ್ರಗಳ ಬಿಡುಗಡೆ ಬಳಿಕ ಸುದೀಪ್ ಈ ಚಿತರ್ಕ್ಕೆ ಕೈಹಚ್ಚಲಿದ್ದಾರೆಯಾದರೂ ಚಿತ್ರದ ಪೂರ್ವ ತಯಾರಿ ಮಾತ್ರ ಇದಾಗಲೇ ಪ್ರಾರಂಭವಾಗಿದೆ ಎಂದು ಬಲ್ಲ ಮೂಲಗಲಿಂದ ಮಾಹಿತಿ ಲಭಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com