ಶಾಕಿಂಗ್ ಸುದ್ದಿ: ಶನಿ ಧಾರಾವಾಹಿಯಿಂದ ಸೂರ್ಯದೇವ ಪಾತ್ರಧಾರಿ ರಂಜಿತ್ ಔಟ್?

ಇತ್ತೀಚೆಗೆ ಪೌರಾಣಿಕ ಕಥೆಯನ್ನಾಧರಿಸಿದ ಧಾರಾವಾಹಿಗಳ ಪ್ರಸಾರ ಜಾಸ್ತಿಯಾಗುತ್ತಿದ್ದು ಖಾಸಗಿ ವಾಹಿನಿಯಲ್ಲಿ ಪ್ರವಾರವಾಗುತ್ತಿದ್ದ ಶನಿ ಧಾರಾವಾಹಿಯಿಂದ...
ರಂಜಿತ್ ಕುಮಾರ್
ರಂಜಿತ್ ಕುಮಾರ್
ಬೆಂಗಳೂರು: ಇತ್ತೀಚೆಗೆ ಪೌರಾಣಿಕ ಕಥೆಯನ್ನಾಧರಿಸಿದ ಧಾರಾವಾಹಿಗಳ ಪ್ರಸಾರ ಜಾಸ್ತಿಯಾಗುತ್ತಿದ್ದು ಖಾಸಗಿ ವಾಹಿನಿಯಲ್ಲಿ ಪ್ರವಾರವಾಗುತ್ತಿದ್ದ ಶನಿ ಧಾರಾವಾಹಿಯಿಂದ ಸೂರ್ಯದೇವ ಪಾತ್ರಧಾರಿ ರಂಜಿತ್ ಹೊರ ಬಂದಿದ್ದಾರೆ. 
ರಂಜಿತ್ ಕುಮಾರ್ ಸೂರ್ಯದೇವನ ಪಾತ್ರದಲ್ಲಿ ಮಿಂಚಿದ್ದು ಅವರ ಅಭಿನಯನ್ನು ಕರುನಾಡ ಜನತೆ ಮೆಚ್ಚಿಕೊಂಡಿದ್ದರು. ಅಲ್ಲದೆ ಧಾರಾವಾಹಿಯಲ್ಲಿ ಸೂರ್ಯದೇವನ ಪಾತ್ರವೂ ಬಹುಮುಖ್ಯವಾಗಿದೆ. 
ಇನ್ನು ರಂಜಿತ್ ಅವರು ಧಾರಾವಾಹಿಯಿಂದ ಹೊರ ಬರಲು ಮೂಲಕ ಕಾರಣ ಸಂಭಾವನೆ ಎಂದು ಹೇಳಲಾಗಿದೆ. ಕಳೆದ ಮೂರು ತಿಂಗಳಿನಿಂದ ಸೂರ್ಯ ದೇವನಿಗೆ ಸಂಭಾವನೆ ಕೊಟ್ಟಿಲ್ಲ. ಒಪ್ಪಂದ ಪ್ರಕಾರ ರಂಜಿತ್ ಗೆ ಬರೋಬ್ಬರಿ 3,60,000 ರುಪಾಯಿ ಸಂಭಾವನೆ ಬರಬೇಕಾಗಿದೆ. 
ಜುಲೈ 28ಕ್ಕೆ ಶೂಟಿಂಗ್ ಮುಗಿಸಿಕೊಟ್ಟು ರಜೆ ಇರುವ ಕಾರಣಕ್ಕೆ ರಂಜಿತ್ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಸೂರ್ಯದೇವನ ಪಾತ್ರಕ್ಕೆ ಬೇರೊಬ್ಬರನ್ನು ತಂದು ಕೂರಿಸಲಾಗಿದೆ. ಈಗ ರಂಜಿತ್ ಅವರ ಪಾತ್ರದಲ್ಲಿ ಮಧುಸಾಗರ್ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com