ಯಾವ ಸಂದರ್ಭದಲ್ಲೂ ನಾನು ಮತ್ತು ಸುದೀಪ್ ಪರಸ್ಪರ ಪ್ರತಿಸ್ಪರ್ಧಿಗಳಂತೆ ನೋಡಲಿಲ್ಲ: ಶಿವರಾಜ್ ಕುಮಾರ್

ಇದೊಂದು ಕಾಲ್ಪನಿಕ ಚಿತ್ರ, ಹೀಗಾಗಿ ಅದನ್ನು ಕಾದು ನಾವು ನೋಡಬೇಕು, ಇಂದಿನ ಪೀಳಿಗೆ ಹಾಗೂ ಧ್ವನಿ ತಂತ್ರಜ್ಞಾನಕ್ಕೆ ಈ ಸಿನಿಮಾ ಹೊಂದಿಕೊಳ್ಳುತ್ತದೆ ಎಂದು ಹೇಳಿದ್ದಾರೆ....
ವಿಲನ್ ಪೋಸ್ಟರ್
ವಿಲನ್ ಪೋಸ್ಟರ್
ಬೆಂಗಳೂರು: 120 ಸಿನಿಮಾಗಳಲ್ಲಿ ನಟಿಸಿರುವ ಶಿವರಾಜ್ ಕುಮಾರ್ ವಿಲ್ಲನ್ ಸಿನಿಮಾ ಬಗ್ಗೆ ಸೃಷ್ಟಿಯಾಗಿರುವ ಹೈಪ್ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ. 

ಇದು ಭಯಂಕರ, ಆಧರೆ ಭಯ ಕೂಡ ಉತ್ತಮ, ಈ ಸಿನಿಮಾ ವಿಚಾರದಲ್ಲಿ ನಾವು ಉತ್ತಮ ದಾರಿಯಲ್ಲಿದ್ದೇವೆ, ಆದರೆ ಪ್ರೇಕ್ಷಕರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಕಷ್ಟ, ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ನೋಡಬೇಕು ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

ಇದೊಂದು ಕಾಲ್ಪನಿಕ ಚಿತ್ರ, ಹೀಗಾಗಿ ಅದನ್ನು ಕಾದು ನಾವು ನೋಡಬೇಕು, ಇಂದಿನ ಪೀಳಿಗೆ ಹಾಗೂ ಧ್ವನಿ ತಂತ್ರಜ್ಞಾನಕ್ಕೆ   ಈ ಸಿನಿಮಾ ಹೊಂದಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಟಗರು ಮತ್ತು ಮುಫ್ತಿ ಸಿನಿಮಾಗಳು ಪಾತ್ರ ಮತ್ತು ಕಥೆಯ ಮೇಲೆ ಯಶಸ್ವಿ ಕಂಡವು, ವಿಲ್ಲನ್ ನಲ್ಲಿ ಎಲ್ಲಾ ಕಮರ್ಷಿಯಲ್ ವಿಷಯಗಳಿವೆ,  ಸುದೀಪ್-ಶಿವಣ್ಣ ಕೂಡ ಇದರ ಒಂದು ಭಾಗ,  ಹೀಗಾಗಿ ಸಿನಿಮಾ ಹೆಚ್ಚು ಸದ್ದು ಮಾಡುತ್ತಿದೆ.ಹೀಗಾಗಿ ಅದರ ಮೇಲೆ ನಿರೀಕ್ಷೆಗಳು ಹೆಚ್ಚಿವೆ ಎಂದು ಹೇಳಿದ್ದಾರೆ.

ಸುದೀಪ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿರುವ ಬಗ್ಗೆ ಮಾತನಾಡಿದ ಶಿವಣ್ಣಸ ವಿಲ್ಲನ್ ನಲ್ಲಿ ಕೇವಲ 2 ಪಾತ್ರಗಳು ಮಾತ್ರ ಇಲ್ಲ, ಅವರ ಬದ್ಧತೆ ಕೂಡ ಮುಖ್ಯವಾಗಿದೆ. ಯಾವುದೇ ಒಂದು ಅಂಶದಲ್ಲಿ ನಾವಿಬ್ಬರು ಪರಸ್ಪರ ಸ್ಪರ್ಧಿಗಳು ಎಂಬ ಭಾವನೆ ಉಂಟಾಗಿಲ್ಲ,  ನಮ್ಮ ಪಾತ್ರದ ಉದ್ದದ ಬಗ್ಗೆ ಎಂದು ನಾವು ಮಾತನಾಡಿಲ್ಲ, ಕಥೆ ಕೇಳಿದಾಗ ನನ್ನ ಪಾತ್ರಕ್ಕೆ ನಾನು ನ್ಯಾಯ ಒದಗಿಸಬೇಕು ಎಂಬುದಷ್ಟೇ ನನ್ನ ಮನಸಿಗೆ ಬಂತು ಎಂದು ಹೇಳಿದ್ದಾರೆ. 

ಶೆಡ್ಯೂಲ್ ನಿಂದಾಗಿ ಸಿನಿಮಾ ತುಂಬಾ ದಿನ ವಿಳಂಬವಾಯಿತು, ಆದರೆ ಎಂದಿಗೂ ಶಿವಣ್ಣ ಮಾತ್ರ ಅದರಿಂದೆ ಕಿರಿಕಿರಿಗೊಂಡಿಲ್ಲ, ತುಂಬಾ ಧೀರ್ಘಸಮಯದ ಗ್ಯಾಪ್ ಉಂಟಾಯಿತು. ಶಿವಣ್ಣ, ಸುದೀಪ್ ಹಾಗೂ ಆ್ಯಮಿ ಜಾಕ್ಸನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈಗಾಗಲೇ ಶಿವಣ್ಣ ಪ್ರೇಮ್ ಅವರ ಜೋಗಿ ಮತ್ತು ಜೋಗಯ್ಯ ಸಿನಿಮಾಗಳಲ್ಲಿ ನಟಿಸಿದ್ದಾರೆ.ಪ್ರೇಮ್ ಗೆ ಸಿನಿಮಾ ಬಗ್ಗೆ ನಿರ್ದಿಷ್ಟ ಯೋಚನೆಗಳಿರುತ್ತವೆ, ಏವರಿಗೆ ಏನು ಬೇಕೋ ಅದು ಆಗಲೇಬೇಕು.  ಅವರು ಯಾವಾಗಲೂ ಸಿನಿಮಾ ಬಗ್ಗೆ  ಯೋಚಿಸುತ್ತಿರುತ್ತಾರೆ ಎಂದು ಶಿವಣ್ಣ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com