'ದಾರಿ ತಪ್ಪಿದ ಮಗ' ನಾಗಿ ಡಾ.ರಾಜ್ ಮೊಮ್ಮಗ ಧೀರೆನ್ ಸ್ಯಾಂಡಲ್ ವುಡ್ ಎಂಟ್ರಿ

ವರನಟ ಡಾ. ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿವೆ. ಮತ್ಯಾರೂ ಅಲ್ಲ ಪೂರ್ಣಿಮಾ ಮತ್ತು ರಾಮ್ ಕುಮಾರ್...
ಧೀರೆನ್ ರಾಜ್ ಕುಮಾರ್
ಧೀರೆನ್ ರಾಜ್ ಕುಮಾರ್
ಬೆಂಗಳೂರು: ವರನಟ ಡಾ. ರಾಜ್ ಕುಮಾರ್ ಕುಟುಂಬದ ಮತ್ತೊಂದು ಕುಡಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿವೆ. ಮತ್ಯಾರೂ ಅಲ್ಲ ಪೂರ್ಣಿಮಾ ಮತ್ತು ರಾಮ್ ಕುಮಾರ್ ದಂಪತಿ ಪುತ್ರ 'ಧೀರೆನ್' ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ, 
1975 ರಲ್ಲಿ ತನ್ನ ತಾತ ಡಾ.ರಾಜ್ ಕುಮಾರ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದ ದಾರಿ ತಪ್ಪಿದ ಮಗ ಸಿನಿಮಾ ಟೈಟಲ್ ಮೂಲಕ ಧೀರೆನ್ ಎಂಟ್ರಿಯಾಗುತ್ತಿದೆ.  ಜಯಣ್ಣ ಕಂಬೈನ್ಸ್ ಚಿತ್ರವಾಗಿರುವ ಈ ಸಿನಿಮಾವನ್ನು ಅನಿಲ್ ಕುಮಾರ್ ನಿರ್ದೇಶಿಸಲಿದ್ದಾರೆ.
ಡಾ. ರಾಜ್ ಅಭಿನಯದ ದಾರಿ ತಪ್ಪಿದ ಮಗ ಸಿನಿಮಾವನ್ನು ಪೆಕೇಟಿ ಶಿವರಾಜ್ ನಿರ್ದೇಶಿಸಿದ್ದರು. ಧೀರೆನ್ ಅಭಿನಯದ ಸಿನಿಮಾ ಕಥೆ ಸಿದ್ದವಾಗುತ್ತಿದೆ. ನಟನಾಗಿ ಗುರುತಿಸಿಕೊಳ್ಳಲು ಧೀರೆನ್ ತಯಾರಿ ನಡೆಸುತ್ತಿದ್ದಾರೆ. ಮುಂದಿನ ವರ್ಷ ಸಿನಿಮಾ ಶೂಟಿಂಗ್ ಆರಂಭವಾಗುವ ಸಾಧ್ಯತೆಯಿದೆ.
ಅನಿಲ್ ಸದ್ಯ ಯಶ್ ನಟನೆಯ ಮೈ ನೇಮ್ ಇಸ್ ಕಿರಾತಕರ ಚಿತ್ರದ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ, ಅದು ಮುಗಿದ ನಂತರ ದಾರಿ ತಪ್ಪಿದ ಮಗ ಆರಂಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com