'ಸ್ಯಾಂಡಲ್ವುಡ್' ಬದಲಿಗೆ 'ಕಾಲಿವುಡ್' ಎಂದು ಟ್ವೀಟಿಸಿ ಕನ್ನಡಿಗರಿಂದ ಮಂಗಳಾರತಿ ಮಾಡಿಸಿಕೊಂಡ ಆ್ಯಮಿ ಜಾಕ್ಸನ್!

ಜೋಗಿ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರ ನಿನ್ನೆಯಷ್ಟೇ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದ್ದು ಇದೀಗ ಚಿತ್ರದ ನಾಯಕಿ ಆ್ಯಮಿ ಜಾಕ್ಸನ್ ಸ್ಯಾಂಡಲ್ವುಡ್ ಬದಲಿಗೆ ಕಾಲಿವುಡ್...
ಆ್ಯಮಿ ಜಾಕ್ಸನ್
ಆ್ಯಮಿ ಜಾಕ್ಸನ್
Updated on
ಜೋಗಿ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರ ನಿನ್ನೆಯಷ್ಟೇ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದ್ದು ಇದೀಗ ಚಿತ್ರದ ನಾಯಕಿ ಆ್ಯಮಿ ಜಾಕ್ಸನ್ ಸ್ಯಾಂಡಲ್ವುಡ್ ಬದಲಿಗೆ ಕಾಲಿವುಡ್ ಎಂದು ಟ್ವೀಟಿಸಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. 
ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಆ್ಯಮಿ ಜಾಕ್ಸನ್ ಟ್ವೀಟ್ ವೊಂದನ್ನು ಮಾಡಿದ್ದರು. ಅದರಲ್ಲಿ ದಿ ವಿಲನ್ ಚಿತ್ರ ಭರ್ಜರಿ ಆರಂಭ ಪಡೆದಿದ್ದು ಕಾಲಿವುಡ್ ನಲ್ಲಿ ನಟಿಸಲು ನನಗೆ ಅವಕಾಶ ನೀಡಿದ ಪ್ರೇಮ್ ಜೀ ನಿಮಗೆ ದೊಡ್ಡ ಧನ್ಯವಾದಗಳು ಎಂದು ಟ್ವೀಟರಿಸಿದ್ದರು. 
ಇದು ಟ್ವೀಟರಿಗರ ಆಕ್ರೋಶಕ್ಕೆ ಕಾರಣವಾಗಿದೆ. ನಾಯಕಿ ಆ್ಯಮಿ ಜಾಕ್ಸನ್ ಗೆ ತಾನು ಯಾವ ಭಾಷೆಯಲ್ಲಿ ನಟಿಸಿದ್ದೇನೆ, ಆ ಚಿತ್ರರಂಗವನ್ನು ಯಾವ ಹೆಸರಿನಲ್ಲಿ ಕರೆಯುತ್ತಾರೆ ಎಂಬ ಕಿಂಚಿತ್ತು ಜ್ಞಾನವು ಇಲ್ಲದೆ ನಮ್ಮ ಚಿತ್ರರಂಗವನ್ನು ತಮಿಳು ಚಿತ್ರರಂಗ ಎಂದು ಕರೆದಿರುವುದು ಕನ್ನಡ ಸಿನಿ ಪ್ರೇಕ್ಷಕರ ಕೋಪಕ್ಕೆ ಕಾರಣವಾಗಿದೆ. 
ಆ್ಯಮಿ ಜಾಕ್ಸನ್ ರನ್ನು ದಿ ವಿಲನ್ ಚಿತ್ರಕ್ಕಾಗಿ ಕರೆತಂದಿರುವುದಕ್ಕೆ ಪ್ರೇಮ್ ಅವರಿಗೆ ಅಭಿಮಾನಿಗಳು ಬುದ್ಧಿವಾದವನ್ನೂ ಹೇಳಿದ್ದಾರೆ. ನಿಮಗೆ ಕನ್ನಡದಲ್ಲಿ ನಾಯಕಿಯರೇ ಸಿಗಲಿಲ್ಲವಾ? ಎಂದು ಪ್ರಶ್ನಿಸಿದ್ದಾರೆ. ಇನ್ನು ಆ್ಯಮಿ ಜಾಕ್ಸನ್ ಗೆ ನಮ್ಮ ಸ್ಯಾಂಡಲ್ವುಡ್ ಅನ್ನು ಕಾಲಿವುಡ್ ಎಂದು ಕರೆಯುವ ಮೂಲಕ ಕನ್ನಡಿಗರಿಗೆ ಅವಮಾನ ಮಾಡಿದ್ದೀರಿ ಎಂದು ಟ್ವೀಟರಿಗರು ಪ್ರಶ್ನೆ ಮಾಡಿದ್ದಾರೆ.
ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ಕಿಚ್ಚಾ ಸುದೀಪ್ ನಟಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com