ಕೋಣ ಚಿತ್ರ
ಸಿನಿಮಾ ಸುದ್ದಿ
'ದಿ ವಿಲನ್ ' ಪೋಸ್ಟರ್ ಮುಂದೆ ಕೋಣ ಬಲಿಕೊಟ್ಟು ಅಂದಾಭಿಮಾನ ಮೆರೆದ ಅಭಿಮಾನಿಗಳು !
ಇತ್ತೀಚಿಗೆ ತೆರೆಕಂಡ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಹಾಗೂ ಸುದೀಪ್ ಅಭಿಯನದ 'ದಿ ವಿಲನ್ ' ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಈ ನಾಯಕರ ಅಭಿಮಾನಿಗಳು ಪೋಸ್ಟರ್ ಮುಂಭಾಗ ಕೋಣ ಬಲಿಕೊಟ್ಟು ಅಂದಾಭಿಮಾನ ಪ್ರದರ್ಶಿಸಿದ್ದಾರೆ.
ಬೆಂಗಳೂರು: ಇತ್ತೀಚಿಗೆ ತೆರೆಕಂಡ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಹಾಗೂ ಸುದೀಪ್ ಅಭಿಯನದ 'ದಿ ವಿಲನ್ ' ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಈ ನಾಯಕರ ಅಭಿಮಾನಿಗಳು ಪೋಸ್ಟರ್ ಮುಂಭಾಗ ಕೋಣ ಬಲಿಕೊಟ್ಟು ಅಂದಾಭಿಮಾನ ಪ್ರದರ್ಶಿಸಿದ್ದಾರೆ.
ಈ ವಿಡಿಯೋ ಹಾಗೂ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಏಲ್ಲಿ ಈ ಘಟನೆ ನಡೆದಿದೆ ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ನಡೆದಿದೆ ಎನ್ನಲಾಗುತ್ತಿದೆ.
ಕನ್ನಡದಲ್ಲಿ ಸಂಭಾಷಣೆ ಮಾಡುವ ಯುವಕರ ತಂಡ ಕೋಣನ ರಕ್ತವನ್ನು ಪೋಸ್ಟರ್ ಗೆ ಎರಚುವುದು ಕಂಡುಬಂದಿದೆ. ಈ ಯುವಕರು ಬಳಸಿದ ವಾಹನದ ನೋಂದಣಿ ಸಂಖ್ಯೆಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಕಿಡಿಗೇಡಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ