'ಗಂಡ-ಹೆಂಡತಿ' ನಟಿ ಸಂಜನಾ ವಿರುದ್ಧ ಗುಡುಗಿದ ನಿರ್ದೇಶಕ ರವಿ ಶ್ರೀವತ್ಸ

ಗಂಡ-ಹೆಂಡತಿ ನಟಿ ಸಂಜನಾ ತಮ್ಮ ವಿರುದ್ಧ ಮಾಡಿರುವ ಕಿರುಕುಳದ ಆರೋಪಕ್ಕೆ ತಿರುಗೇಟು ನೀಡಿರುವ ನಿರ್ದೇಶಕ ರವಿ ಶ್ರೀವತ್ಸ ಅವರು ಡೆಡ್ಲಿ ಈಸ್ ಮಿಸ್ಟರ್ ಪರ್ಫೆಕ್ಟ್ ಎಂದು ನಿರೂಪಿಸುತ್ತೇನೆ ಎಂದು ಹೇಳಿದ್ದಾರೆ...
ಸಂಜನಾ-ರವಿ ಶ್ರೀವತ್ಸ
ಸಂಜನಾ-ರವಿ ಶ್ರೀವತ್ಸ
Updated on
ಬೆಂಗಳೂರು: ಗಂಡ-ಹೆಂಡತಿ ನಟಿ ಸಂಜನಾ ತಮ್ಮ ವಿರುದ್ಧ ಮಾಡಿರುವ ಕಿರುಕುಳದ ಆರೋಪಕ್ಕೆ ತಿರುಗೇಟು ನೀಡಿರುವ ನಿರ್ದೇಶಕ ರವಿ ಶ್ರೀವತ್ಸ ಅವರು ಡೆಡ್ಲಿ ಈಸ್ ಮಿಸ್ಟರ್ ಪರ್ಫೆಕ್ಟ್ ಎಂದು ನಿರೂಪಿಸುತ್ತೇನೆ ಎಂದು ಹೇಳಿದ್ದಾರೆ.
ನಿಮ್ಮೆಲ್ಲರ ಆಶೀರ್ವಾದ ಬೆಂಬಲಾನ ನಂಬಿ, ಬೊಂಬೆಯಾಟದ ಮೊದಲನೇ ಷೋ ಈಗ ಶುರು ಮಾಡ್ತಾ ಇದ್ದೇನೆ. ಮುಂದಿದೆ ಮಾರಿಹಬ್ಬ ಎಂದು ತಮ್ಮ ಫೇಸ್ ಬುಕ್ ನಲ್ಲಿ ರವಿ ಶ್ರೀವತ್ಸ ಬರೆದುಕೊಂಡಿದ್ದಾರೆ. 
12 ವರ್ಷಗಳ ಹಳೆಯ ಘಟನೆ ಬಗ್ಗೆ ಈಗ ಆರೋಪ ಮಾಡಲಾಗುತ್ತಿದೆ. ನಾನು ಇಷ್ಟು ದಿನ ಸುಮ್ಮನಿದ್ದೆ ಎಂಬ ಕಾರಣಕ್ಕೆ ನಾನು ತಪ್ಪು ಮಾಡಿದ್ದೇನೆ ಎಂದೆಲ್ಲ. ಕೆಲವೊಂದು ಆಪಾದನೆ, ಆರೋಪ, ನಿಂದನೆಗಳು ಬಂದಾಗ ಅವುಗಳಿಗೆ ಉತ್ತರ ಕೊಡದೇ ಸುಮ್ಮನಿರುವುದೇ ಸರಿ ಅಂದುಕೊಂಡಿದ್ದೆ ಆದರೆ ಅದು ತಪ್ಪು ಎಂದು ನನಗೆ ಈಗ ಅರ್ಥವಾಗಿದ್ದು ಡೆಡ್ಲಿ ಈಸ್ ಮಿಸ್ಟರ್ ಪರ್ಫೆಕ್ಟ್ ಎಂದು ನಿರೂಪಿಸುತ್ತೇನೆ ಎಂದು ಹೇಳಿದ್ದಾರೆ. 
ರವಿ ಶ್ರೀವತ್ಸ ತಮ್ಮ ಫೇಸ್ ಬುಕ್ ನಲ್ಲಿ!
Well, ನಾನಗೆ ಜನುಮ ಕೊಟ್ಟವರು ಒಂದು ಹೆಣ್ಣು. ತಾಯಿ. ನಾನು ಪ್ರತಿಯೊಬ್ಬ ಹೆಣ್ಣುಮಗಳನ್ನು ಗೌರವಿಸುತ್ತೇನೆ. ಅದು ಎಷ್ಟರಮಟ್ಟಿಗೆ ಸರೀ ಎಂಬುದೂ ನನ್ನೊಟ್ಟಿಗೆ ಇರುವವರಿಗೆ ಗೊತ್ತು. ಬಲ್ಲವರಿಗೆ ಗೊತ್ತು. ಇಲ್ಲಿರುವ ನನ್ನ ಅಕ್ಕ ತಂಗಿಯರಿಗೂ ಗೊತ್ತು.
ನಟಿಯೆಂದು ಕರೆಸಿಕೊಳ್ಳುವ ಆ ಹೆಣ್ಣು ಮಗಳ ಮಾತಿನ ಹಿಂದಿರುವ ಉದ್ದೇಶಗಳೇನೂ ನನಗೆ ಗೊತ್ತಿಲ್ಲ. ಸಾಕ್ಷಿ ಪುರಾವೆಗಳಿಲ್ಲದೇ ಏಕಾಏಕಿ ಮಾಧ್ಯಮದ ಮುಂದೇ ಅವರಿವರಲ್ಲಿ, ಈ ಫೇಸ್ ಬುಕ್, ಟ್ವಿಟರ್, ಇನ್ಸ್ತಗ್ರಮ್ ಅಲ್ಲಿ ಇಲ್ಲಿ ಮಾತಾಡುವುದು, ಪ್ರಚಾರಕ್ಜೆ ಸುಖಾಸುಮ್ಮನೆ ಕೂರುವುದು ಸರಿ ಅಲ್ಲಾ, ಕಾರಣ. ನಾನು ನಿರ್ದೇಶಕ ರವಿ ಶ್ರೀವತ್ಸ. ಎಲ್ಲವನ್ನ ಇಟ್ಕೊಂಡೂ ಬೊಂಬೆ ಆಡ್ಸೊನು..
24 ವರುಷದ ನನ್ನ ವೃತ್ತಿ ಜೀವನಕ್ಕೆ ಈಗ ಮತ್ತೊಂದು ತಿರುವು. ಸ್ನೇಹಿತರೇ, ಇಲ್ಲಿಯವರೆಗೆ ನನ್ನ ಜೊತೆಯಾಗಿದ್ದರೀ, ನಡೆಸ್ಕೊಂಡು ಕರ್ಕೊಂಡು ಬಂದ್ರೀ, ನನ್ನ ಹೆಸರಿಗೆ ಒಂದು ಸ್ಥಾನ ಮಾನ ಗೌರವ ಸಿಗುವ ಹಾಗೆ ಮಾಡಿದ್ರೀ. ಇದೆಲ್ಲ ನನ್ನ ತಂದೆ, ತಾಯಿ, ನನ್ನ ಯಜಮಾನ, ನನ್ನ ಗುರು ಹಿರಿಯರು, ಸ್ನೇಹಿತರು ಮತ್ತು ನೀವೆರಲ್ಲರು ಒಟ್ಟಾಗಿ ಒಂದುಗೂಡಿ ಕೊಟ್ಟಿರುವ ಭಿಕ್ಷೆ ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com