ದರ್ಶನ್ ಅಭಿನಯದ 50ನೇ ಚಿತ್ರ 'ಕುರಕ್ಷೇತ್ರ' 2ಡಿ ಆವೃತಿ ಸೆನ್ಸಾರ್‌ಗೆ ಸಿದ್ಧ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುಕೋಟಿ ವೆಚ್ಚದ ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ಮುನಿರತ್ನ ಕುರಕ್ಷೇತ್ರ ಚಿತ್ರ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಅದಾಗಲೇ...
ಅರ್ಜುನ್ ಸರ್ಜಾ-ದರ್ಶನ್
ಅರ್ಜುನ್ ಸರ್ಜಾ-ದರ್ಶನ್
Updated on
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುಕೋಟಿ ವೆಚ್ಚದ ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ಮುನಿರತ್ನ ಕುರಕ್ಷೇತ್ರ ಚಿತ್ರ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಅದಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಪೋಸ್ಟ್ ಪ್ರೊಡೆಕ್ಷನ್ ಕೆಲಸಗಳು ಇನ್ನು ಬಾಕಿ ಇರುವುದರಿಂದ ಚಿತ್ರದ ಬಿಡುಗಡೆ ಲೇಟಾಗಿದೆ. 
ಇನ್ನು ಮುನಿರತ್ನ ಕುರುಕ್ಷೇತ್ರ ಚಿತ್ರ 2ಡಿ ಮತ್ತು 3ಡಿ ಆವೃತ್ತಿಯಲ್ಲಿ ಬರುತ್ತಿದೆ. ಸದ್ಯ 2ಡಿ ಕೆಲಸಗಳು ಮುಗಿದಿರುವುದರಿಂದ ಸೆನ್ಸಾರ್ ಗೆ ಕಳುಹಿಸಲು ಚಿತ್ರತಂಡ ರೆಡಿಯಾಗಿದ್ದು 3ಡಿ ಆವೃತ್ತಿ ಶೇಕಡ 70ರಷ್ಟು ಕೆಲಸಗಳು ಆಗಿವೆ. ಇನ್ನು ಚಿತ್ರದ ಕುರಿತಂತೆ ನಿರ್ಮಾಪಕರು ಮುಂದಿನ ದಿನಗಳಲ್ಲಿ ತಿಳಿಸಲಿದ್ದಾರೆ. 
ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್ ದುರ್ಯೋದನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳನ್ನು ಲಹರಿ ಖರೀದಿಸಿದ್ದು ಬೃಹತ್ ಕಾರ್ಯಕ್ರಮದ ಮೂಲಕ ಆಡಿಯೋ ಬಿಡುಗಡೆ ಮಾಡಲಿದ್ದಾರೆ. 
ಚಿತ್ರದಲ್ಲಿ ದೊಡ್ಡ ತಾರಾಗಣವಿದ್ದು ಅಂಬರೀಶ್, ಅರ್ಜುನ್ ಸರ್ಜಾ, ವಿ ರವಿಚಂದ್ರನ್, ನಿಖಿಲ್ ಕುಮಾರ್, ಭಾರತಿ ವಿಷ್ಣುವರ್ಧನ್, ಸ್ನೇಹ, ಹರಿಪ್ರಿಯಾ, ಮೇಘನಾ ರಾಜ್ ಮತ್ತು ರವಿ ಶಂಕರ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. 
ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ಚಿತ್ರಕ್ಕೆ ಜಯಂತ್ ವಿನ್ಸೆಂಟ್ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com