MeToo ಆರೋಪ: ಶೃತಿ ಹರಿಹರನ್ ಸುಳ್ಳು ಹೇಳಿರಲು ಸಾಧ್ಯವಿಲ್ಲ: ಹಿರಿಯ ನಟಿ ಶ್ರುತಿ

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರನ್ನು ಹತ್ತಿರದಿಂದ ಬಲ್ಲೆ. ಆದರೆ ಶೃತಿ ಹರಿಹರನ್ ಸುಳ್ಳು ಹೇಳಿರಲು ಸಾಧ್ಯವಿಲ್ಲ ಎಂದು ಸ್ಯಾಂಡಲ್ವುಡ್ ನ ಹಿರಿಯ ನಟಿ ಶ್ರುತಿ ಅಭಿಪ್ರಾಯಪಟ್ಟಿದ್ದಾರೆ...
ಶೃತಿ ಹರಿಹರನ್-ಅರ್ಜುನ್ ಸರ್ಜಾ-ಶ್ರುತಿ
ಶೃತಿ ಹರಿಹರನ್-ಅರ್ಜುನ್ ಸರ್ಜಾ-ಶ್ರುತಿ
Updated on
ಬೆಂಗಳೂರು: ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರನ್ನು ಹತ್ತಿರದಿಂದ ಬಲ್ಲೆ. ಆದರೆ ಶೃತಿ ಹರಿಹರನ್ ಸುಳ್ಳು ಹೇಳಿರಲು ಸಾಧ್ಯವಿಲ್ಲ ಎಂದು ಸ್ಯಾಂಡಲ್ವುಡ್ ನ ಹಿರಿಯ ನಟಿ ಶ್ರುತಿ ಅಭಿಪ್ರಾಯಪಟ್ಟಿದ್ದಾರೆ. 
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಯೋಜಿಸಿದ್ದ ಮಿಷನ್ ಸಾಹಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರುತಿ ಅವರು, ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ಅವರ ಮಧ್ಯೆ ಏನಾಗಿದೆ ಎಂಬುದು ಗೊತ್ತಿಲ್ಲ. ಅವರಿಬ್ಬರ ಮಧ್ಯೆ ಏನೂ ನಡೆದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಯಾರದ್ದೆ ತಪ್ಪಿದ್ದರೂ ಅವರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ. 
ಮೀಟೂ ಅತ್ಯುತ್ತಮ ಆಂದೋಲನ. ಇದನ್ನು ನಾವು ಉಳಿಸಿಕೊಳ್ಳಬೇಕು. ದೌರ್ಜನ್ಯದ ವಿರುದ್ಧ ಮಹಿಳೆಯರು ಹೋರಾಡಬೇಕು. ಆದರೆ ಯಾರೂ ಇದನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದರು. 
ನಟಿ ಶೃತಿ ಅವರು ಅರ್ಜುನ್ ಸರ್ಜಾ ಜೊತೆ ಯಶಸ್ವಿ ಚಿತ್ರ ಅಳೀಮಯ್ಯ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರವನ್ನು ಕಿಶೋರ್ ಸರ್ಜಾ ನಿರ್ದೇಶನ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com