ಯಶ್
ಸಿನಿಮಾ ಸುದ್ದಿ
ತಂದೆಯಾಗಲಿರುವ ರಾಕಿಂಗ್ ಸ್ಟಾರ್ ಯಶ್ ತಮಗೆ ಯಾವ ಮಗು ಬೇಕು ಅಂದ್ರು ಗೊತ್ತ!
ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಗೆ ಜನಿಸಲಿರುವ ಮಗುವಿನ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆ ಶುರುವಾಗಿದೆ...
ಬೆಂಗಳೂರು: ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಗೆ ಜನಿಸಲಿರುವ ಮಗುವಿನ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆ ಶುರುವಾಗಿದೆ.
ಇನ್ನು ಅಭಿಮಾನಿಗಳು ತಮ್ಮ ನೆಚ್ಚಿನ ನಟ ಯಶ್ ಗೆ ಗಂಡು ಮಗು ಹುಟ್ಟಿದರೆ ಮರಿ ಬಾಸ್ ಎಂದೇ ನಾಮಕರಣ ಮಾಡಿಬಿಡಲು ಮುಂದಾಗಿದ್ದಾರೆ. ಆದರೆ ಯಶ್ ಮಾತ್ರ ತಮಗೆ ಹೆಣ್ಣು ಮಗು ಬೇಕು ಎಂದು ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಯಶ್, ನಮ್ಮ ಮನೆಯಲ್ಲಿ ಎಲ್ಲ ಗಂಡು ಮಕ್ಕಳು ಇರೋದು. ನನ್ನ ತಂಗಿಗೂ ಗಂಡು ಮಗು ಇದೆ. ಆದ್ದರಿಂದ ನನಗೆ ಹೆಣ್ಣು ಮಗು ಬೇಕು ಎಂದು ತಮ್ಮ ಮನದ ಆಸೆಯನ್ನು ಬಿಚ್ಚಿಟ್ಟಿದ್ದಾರೆ.
ಇನ್ನು ಯಶ್ ಕೆಜಿಎಫ್ ಚಿತ್ರದ ನಂತರ ಇದೀಗ ಮೈ ನೇಮ್ ಇಸ್ ಕಿರಾತಕ ಚಿತ್ರದಲ್ಲಿ ಪಾಲ್ಗೊಳ್ಳಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ