ಅಭಿಷೇಕ್ ಚೊಚ್ಚಲ 'ಅಮರ್' ಚಿತ್ರದಲ್ಲಿ ನಿರುಪ್ ಭಂಡಾರಿ ಅತಿಥಿ ಪಾತ್ರ
ರಂಗಿತರಂಗ, ರಾಜರತ್ನ ಖ್ಯಾತಿಯ ನಟ ನಿರೂಪ್ ಭಂಡಾರಿ, ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಭಿನಯದ ಚೊಚ್ಚಲ ಅಮರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಳೆಯಿಂದ ಅವರು ಚಿತ್ರತಂಡ ಸೇರಲಿದ್ದಾರೆ.
ಆ ಪಾತ್ರಕ್ಕೆ ನಾನು ಹೊಂದಿಕೊಳ್ಳುತ್ತಿದ್ದರಿಂದ ನಿರ್ದೇಶಕ ನಾಗೇಶೇಖರ್ ಒತ್ತಾಸೆ ಮೇರೆಗೆ ಅತಿಥಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಪಾತ್ರ ಚಿತ್ರದಲ್ಲಿನ ಒಂದು ಅವಿಭಾಜ್ಯ ಅಂಗವಾಗಿದ್ದು, ಪ್ರಭಾವಶಾಲಿಯಾಗಿದೆ, ಅದಕ್ಕಾಗಿಯೇ ನಾನು ಇದನ್ನು ತೆಗೆದುಕೊಳ್ಳಲು ಒಪ್ಪಿದ್ದೇನೆ "ಎಂದು ನಿರುಪ್ ಹೇಳಿದ್ದಾರೆ.
ಅಭಿಷೇಕ್ ತಂದೆ ತಾಯಿ ಅಂಬರೀಷ್ ಹಾಗೂ ಸುಮಾಲತಾ ಕನ್ನಡ ಚಿತ್ರರಂಗದ ದೊಡ್ಡ ನಟರಾಗಿದ್ದು, ಅವರಿಗೆ ಗೌರವ ನೀಡುತ್ತಾ ಚಿತ್ರದಲ್ಲಿ ಬಣ್ಣ ಹಚ್ಚುತ್ತಿರುವುದಾಗಿ ತಿಳಿಸಿದರು.
ಸಂದೇಶ್ ಪ್ರೋಡಕ್ಷನ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ತಾನ್ಯ ನಾಯಕಿ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಹಾಸ್ಯ ನಟ ಚಿಕ್ಕಣ್ಣ, ದೀಪಕ್ ಶೆಟ್ಟಿ ಮತ್ತು ಸುಧಾರಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದು, ಸತ್ಯ ಹೆಗಡೆ ಅವರ ಛಾಯಾಗ್ರಾಹಣವಿರಲಿದೆ.
ಈ ಮಧ್ಯೆ ಇನ್ನೂ ಹೆಸರಿಡದ ಚಿತ್ರವೊಂದರ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ರಾಧಿಕಾ ಪಂಡಿತ್ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದು ನಿರುಪ್ ಬಂಡಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ