ಇವನು ರಾಮಾಚಾರಿ ಅಲ್ಲ, 'ಕಂಟ್ರಿ ಮೇಡ್ ಚಾರಿ' ಹೊಸ ಚಿತ್ರಕ್ಕೆ ರವೀಂದ್ರನಾಥ್ ಸಜ್ಜು!

ನಟ ರಮೇಶ್ ಅರವಿಂದ್ ಮತ್ತು ರಚಿತಾ ರಾಮ್ ಅಭಿನಯದ ಪುಷ್ಪಕ ವಿಮಾನ ಚಿತ್ರದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದ ರವೀಂದ್ರನಾಥ್ ಅವರು ಎರಡು ವರ್ಷಗಳ ಬಳಿಕ ಕಂಟ್ರಿ ಮೇಡ್ ಚಾರಿ ಚಿತ್ರಕ್ಕೆ ಕೈ ಹಾಕಿದ್ದಾರೆ.
ರವೀಂದ್ರನಾಥ್
ರವೀಂದ್ರನಾಥ್
Updated on
ನಟ ರಮೇಶ್ ಅರವಿಂದ್ ಮತ್ತು ರಚಿತಾ ರಾಮ್ ಅಭಿನಯದ ಪುಷ್ಪಕ ವಿಮಾನ ಚಿತ್ರದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದ ರವೀಂದ್ರನಾಥ್ ಅವರು ಎರಡು ವರ್ಷಗಳ ಬಳಿಕ ಕಂಟ್ರಿ ಮೇಡ್ ಚಾರಿ ಚಿತ್ರಕ್ಕೆ ಕೈ ಹಾಕಿದ್ದಾರೆ.
ಪುಷ್ಪಕ ವಿಮಾನ ತಂದೆ ಮತ್ತು ಮಗಳ ಸಂಬಂಧ ಸಾರುವ ಭಾವನಾತ್ಮಕ ಚಿತ್ರವಾಗಿತ್ತು. ಆದರೆ ಕಂಟ್ರಿ ಮೇಡ್ ಚಾರಿ ಇದೊಂದು ಆಕ್ಷನ್-ಥ್ರಿಲ್ಲರ್ ಚಿತ್ರವಾಗಿದ್ದು ಇದರಲ್ಲಿ ತಂದೆ ಮತ್ತು ಮಗ ಸಂಬಂಧ ಕುರಿತಾಗಿದೆ. ಈ ಚಿತ್ರದ ಮೂಲಕ ಹೊಸಬರಿಗೆ ಅವಕಾಶ ನೀಡಲು ನಿರ್ದೇಶಕರು ತೀರ್ಮಾನಿಸಿದ್ದಾರೆ.
ಕಂಟ್ರಿ ಮೇಡ್ ಚಾರಿ ಚಿತ್ರ ಲೋಕಲ್ ಹುಡುಗನ ಜೀವನ ಕುರಿತಾಗಿರಲಿದೆ. ಈ ಚಿತ್ರದಲ್ಲಿ ನಾಯಕನ ಹೆಸರು ರಾಘವಾ ಚಾರಿ. ಆದರೆ ಸ್ನೇಹಿತರಲ್ಲಿ ಚಾರಿ ಎಂದೇ ಗುರುತಿಸಿಕೊಂಡಿರುತ್ತಾನೆ. ಈ ಚಿತ್ರವನ್ನು ಕೆ ನಾಗರಾಜ್ ನಿರ್ಮಿಸುತ್ತಿದ್ದಾರೆ. ಮೇ ಅಂತ್ಯದೊಳಗೆ ಚಿತ್ರದ ತಾರಾಬಳಗವನ್ನು ಆಯ್ಕೆ ಮಾಡಲಾಗುವುದು ಎಂದು ನಿರ್ದೇಶಕ ರವೀಂದ್ರನಾಥ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com