ಸುದೀಪ್ ಗಾಗಿ ಕಥೆ ಸಿದ್ದವಿದೆ, ಅಂತಿಮ ತೀರ್ಮಾನ ಆಗಿಲ್ಲ: ನಿರ್ದೇಶಕ ಸೂರಿ

ನಿರ್ದೇಶಕ ಸೂರಿ ಯಾವಾಗಲೂ ಒಮ್ಮೆಗೆ ಒಂದೇ ಚಿತ್ರದ ಬಗ್ಗೆ ಮಾತ್ರ ಗಮನ ಹರಿಸುತ್ತಾರೆ. ಒಂದೇ ಏಟಿಗೆ ಎರಡು ಮೂರು ಚಿತ್ರಕ್ಕೆ ಅವರೆಂದೂ ಕೈ ಹಚ್ಚುವುದಿಲ್ಲ. ಈಗ ಅವರು "ಸೂರಿಪಾಪ್ ಕಾರ್ನ್ ಮಂಕಿ ಟೈಗರ್" ಚಿತ್ರದ ಶೂಟಿಂಗ್....
ನಿರ್ದೇಶಕ ಸೂರಿ
ನಿರ್ದೇಶಕ ಸೂರಿ
Updated on
ಬೆಂಗಳೂರು: ನಿರ್ದೇಶಕ ಸೂರಿ ಯಾವಾಗಲೂ ಒಮ್ಮೆಗೆ ಒಂದೇ ಚಿತ್ರದ ಬಗ್ಗೆ ಮಾತ್ರ ಗಮನ ಹರಿಸುತ್ತಾರೆ. ಒಂದೇ ಏಟಿಗೆ ಎರಡು ಮೂರು ಚಿತ್ರಕ್ಕೆ ಅವರೆಂದೂ ಕೈ ಹಚ್ಚುವುದಿಲ್ಲ. ಈಗ ಅವರು "ಸೂರಿ ಪಾಪ್ ಕಾರ್ನ್ ಮಂಕಿ ಟೈಗರ್" ಚಿತ್ರದ ಶೂಟಿಂಗ್ ನಲ್ಲಿದ್ದಾರೆ. ಇದರಲ್ಲಿ ಧನಂಜಯ್ ನಾಯಕ ನಟನಾಗಿದ್ದಾರೆ. ಆದರೆ ಈಗ ಸೂರಿ ಮುಂದಿನ ಚಿತ್ರ ಯಾವುದು ಎಂಬ ಬಗ್ಗೆ ಗಾಂಧಿನಗರದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಒಂದು ಮೂಲದ ಪ್ರಕಾರ ಸೂರಿ ಮುಂದಿನ ಚಿತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸಲಿದ್ದಾರೆ. ಅಲ್ಲದೆ ಕೆಪಿ ಶ್ರೀಕಾಂತ್ ಈ ಚಿತ್ರದ ನಿರ್ಮಾಪಕರಾಗಲಿದ್ದಾರೆ.
"ನಾನು ಸುದೀಪ್ ಗಾಗಿ ಒಂದು ಚಿತ್ರ ಮಾಡಬೇಕೆಂದು ಬಯಸುತ್ತಿರುವುದು ನಿಜ, ಅದಕ್ಕಾಗಿ ಯೋಜನೆ ಇನ್ನೂ ತಯಾರಿ ಹಂತದಲ್ಲಿದೆ.ಈಗಾಗಲೇ ಒಂದು ಕಥೆ ಹಾಗೂ ಚಿತ್ರದ ಶೀರ್ಷಿಕೆ ನನ್ನ ತಲೆಯಲ್ಲಿದೆ. ಆದರೆ ಯಾವುದೂ ಅಂತಿಮವಾಗಿಲ್ಲ" ಸೂರಿ ಹೇಳಿದ್ದಾರೆ. ಸಧ್ಯ ಸುರಿ ಹಾಗೂ ಸುದೀಪ್ ಅವರ ಬೇರೆ ಬೇರೆ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದು ಬೇರೆಲ್ಲಾ ಕೆಲಸಗಳನ್ನು ಮುಗಿಸಿದ ನಂತರ ಈ  ಚಿತ್ರ ತಯಾರಿಯ ಕುರಿತು ಯೋಚಿಸಬಹುದು ಎಂದು ಸೂರಿ ಹೇಳುತ್ತಾರೆ.
ಇನ್ನು ಸೂರಿ ತಾವು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗಾಗಿ ಸಹ ಒಂದು ಕಥೆ ತಯಾರಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಸೂರಿ ನಿರ್ದೇಶನದಲ್ಲಿ ದರ್ಶನ್ ನಾಯಕನಾಗಿರುವ ಚಿತ್ರ ಶೀಘ್ರವೇ ಸೆಟ್ತೇರಬಹುದು. ಅಲ್ಲದೆ ಪುನೀತ್ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಇಬ್ಬರನ್ನೂ ಒಟ್ಟಾಗಿ ತೆರೆ ಮೇಲೆ ತರಲು ಸಹ ಸೂರಿ ಚಿಂತಿಸಿದ್ದು ಇದಕ್ಕಾಗಿ ಇಬ್ಬರೂ ನಾಯಕರಿಗೆ ನ್ಯಾಯ ಒದಗಿಸಬಲ್ಲ ಚಿತ್ರಕಥೆ ಸಿಕ್ಕರೆ ನಿರ್ದೇಶಕ್ಕೆ ನಾನು ಸಿದ್ದನಿದ್ದದ್ದಾಗಿ ಅವರು ಹೇಳೀದ್ದಾರೆ.
""ಇಬ್ಬರು ಒಳ್ಳೆಯ ನಟರನ್ನು ಏಕಕಾಲಕ್ಕೆ ತೆರೆ ಮೇಲೆ ತರುವ ಮುನ್ನ ಅತ್ಯುತ್ತಮ ಕಥೆ ಬೇಕಿದೆ.ಅದಕ್ಕಾಗಿ ಕೆಲಸಗಳು ನಡೆದಿದೆ. ಆದರೆ ಅದು ಟಗರು 2 ಆಗುವುದಿಲ್ಲ, ಇದಕ್ಕಾಗಿ ಬೇರೆಯೇ ಯೋಜನೆಗಳು ನನ್ನ ಮನಸ್ಸಿನಲ್ಲಿದೆ.ಆದರೆ ನಾನು ಇದರ ಬಗ್ಗೆ ಅವರೊಡನೆ ಇನ್ನೂ ಚರ್ಚಿಸಿಲ್ಲ"
ಸೂರಿ ಪಾಪ್ ಕಾರ್ನ್ ಬಳಿಕ ಕಾಗೆ ಬಂಗಾರ
ಒಂದು ಕಾಲಘಟ್ಟದಲ್ಲಿ "ಕೆಂಡಸಂಪಿಗೆ" ಚಿತ್ರದ ಮುಂದಿನ ಬಾಗ "ಕಾಗೆ ಬಂಗಾರ"ವನ್ನು ಕೈಬಿಡಲು ಸೂರಿ ತೀರ್ಮಾನಿಸಿದ್ದರು. ಆದರೆ ಪ್ರೇಕ್ಷಕರ ಒತ್ತಾಯದಿಂದಾಗಿ ಮತ್ತೆ ಆ ಕೆಲಸವನ್ನು ಕೈಗೆ ತೆಗೆದುಕೊಂಡಿದ್ದಾರೆ."ನನ್ನ ಎಲ್ಲಾ ಚಿತ್ರಗ್ಳೂ ಎರಡನೇ ಭಾಗವನ್ನು ತಯಾರಿಸಬಹುದಾದ ಸಾಕಷ್ಟು ವಿಷಯಗಳನ್ನು ಹೊಂದಿದೆ.ಜನರು ಕೆಂಡಸಂಪಿಗೆಯನ್ನು ಮೆಚ್ಚಿದ್ದಾರೆ, ಕಾಗೆ ಬಂಗಾರಕ್ಕಾಗಿ ಎದುರು ನೋಡುತ್ತಿದ್ದಾರೆ. ಇದೀಗ ಅದುವೇ ನನ್ನ ಮುಂದಿನ ಯೋಜನೆಯಾಗಿದೆ.ಇದಕ್ಕಾಗಿ ಚಿತ್ರಕಥೆ ಸಿದ್ದವಿದ್ದು ಅಂತಿಮ ಕ್ಷಣದ ತಯಾರಿ ನಡೆಯಬೇಕಿದೆ., ಸೂರಿ ಪಾಪ್ ಕಾರ್ನ್.... ಚಿತ್ರದ 50 ಶೇ. ಚಿತ್ರೀಕರಣ ಮುಗಿದಿದೆ" 
"ನಾನು ಮುಂದಿನ ದಿನಗಳಲ್ಲಿ ನನ್ನ ಕಿರುಚಿತ್ರ ನಿರ್ಮಾಣವನ್ನೂ ನಡೆಸಲಿದ್ದು ಇದನ್ನು ಡಿಜಿಟಲ್ ವೇದಿಕೆ (ಪ್ಲಾಟ್ ಫಾರಂ) ನಲ್ಲಿ ಬಿಡುಗಡೆಗೊಳಿಸ;ಲು ತೀರ್ಮಾನಿಸಿದ್ದೇನೆ. ಆದರೆ ನಾನೊಂದು ಬಾರಿ ಅದನ್ನು ಬಿಡುಗಡೆಗೊಳಿಸಲು ಸಿದ್ದವಾದ ಬಳಿಕ ಆ ಬಗ್ಗೆ ಮಾತನಾಡುತ್ತೇನೆ.ನನ್ನ ವರ್ಣಚಿತ್ರಗಳ ಬಗೆಗೆ ಸಹ ಜನರು ಕುತೂಹಲ ಹೊಂದಿದ್ದು ಅವನ್ನೂ ನಾನು ಸಾಮಾಜಿಕ ತಾಣದ ಮೂಲಕವೇ ಬಿಡುಗಡೆ ಮಾಡಲಿದ್ದೇನೆ " ಸುರಿ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com