ನೆರ್ಕೊಂಡ ಪಾರ್ವೈ ಸಿನಿಮಾ ಟಿಕೆಟ್ ಸಿಗದಿದ್ದಕ್ಕೆ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ ಅಜಿತ್ ಅಭಿಮಾನಿ!

ಸೂಪರ್ ಸ್ಟಾರ್ ಗಳ ಸಿನಿಮಾ ಬಿಡುಗಡೆಯಾಗುವ ವೇಳೆ ಪ್ರತಿ ಸಲ ಹಲವು ವಿಚಿತ್ರಗಳು ಬೆಳಕಿಗೆ ಬರುತ್ತವೆ....
ಅಜಿತ್
ಅಜಿತ್
Updated on
ಚೆನ್ನೈ:  ಸೂಪರ್ ಸ್ಟಾರ್ ಗಳ ಸಿನಿಮಾ ಬಿಡುಗಡೆಯಾಗುವ ವೇಳೆ ಪ್ರತಿ ಸಲ ಹಲವು ವಿಚಿತ್ರಗಳು ಬೆಳಕಿಗೆ ಬರುತ್ತವೆ.
ಅಜಿತ್ ನಟನೆಯ ನೆರ್ಕೊಂಡ ಪಾರ್ವೈ ಸಿನಿಮಾ ಇಂದು ರಿಲೀಸ್ ಆಗುತ್ತಿದ್ದು, ಕೆಲವು ದಿನಗಳ ಹಿಂದೆಯ ಸಿನಿಮಾಗಾಗಿ ಬುಕ್ಕಿಂಗ್ ಆರಂಭವಾಗಿದ್ದು, ಭಾರೀ ಡಿಮ್ಯಾಂಡ್ ಹೆಚ್ಚುತ್ತಿದೆ. ಬೆಳಗ್ಗಿನ ಜಾವದ ವಿಶೇಷ ಪ್ರದರ್ಶನಕ್ಕೆ ಟಿಕೆಟ್ ಪಡೆಯುವ ಸಲುವಾಗಿ ಅಭಿಮಾನಿಗಳು ರಾತ್ರಿ 11 ಗಂಟೆಯಿಂದಲೇ ಕ್ಯೂ ನಿಲ್ಲುತ್ತಿದ್ದಾರೆ.
ಟಿಕೆಟ್ ಸಿಕ್ಕದ ಹಿನ್ನೆಲೆಯಲ್ಲಿ ಸತ್ಯಂ ಥಿಯೇಟರ್ ನ ಹೊರಗಡೆ  ಅಭಿಮಾನಿಯೊಬ್ಬ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ, ಈ ವೇಳೆ ಆತನನ್ನು ತಡೆದ ಪೊಲೀಸರು ಅವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ನಟ ಶಂತನು ಭಾಗ್ಯರಾಜ್ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com