ಕುದುರೆ ಮುಖದಲ್ಲಿ ಗಾಳಿಪಟ ಶೂಟಿಂಗ್: ಹಾಡಿಗಾಗಿ ಗಣೇಶ್, ದಿಗಂತ್, ಪವನ್ ಮಸ್ತ್ ಡ್ಯಾನ್ಸ್

ಗಾಳಿಪಟ-2 ಸಿನಿಮಾವನ್ನುಅತ್ಯುತ್ತಮವಾಗಿ ತರಬೇಕೆಂಬ ಹಿನ್ನೆಲೆಯಲ್ಲಿ ನಿರ್ದೇಶಕ ಯೋಗರಾಜ್ ಭಟ್ ಕೆಲಸ ಮಾಡುತ್ತಿದ್ದಾರೆ. ಕುದುರೆಮುಖದ ರಮ್ಯ ಮನೋಹರವಾದ ಸ್ಥಳಗಳಲ್ಲಿ ಹಾಡು ಮತ್ತು ದೃಶ್ಯಗಳ ಚಿತ್ರೀಕರಣ  ನಡೆಯುತ್ತಿದೆ.
ಗಾಳಿಪಟ-2 ಸ್ಟಿಲ್
ಗಾಳಿಪಟ-2 ಸ್ಟಿಲ್
Updated on: 

ಗಾಳಿಪಟ-2 ಸಿನಿಮಾವನ್ನುಅತ್ಯುತ್ತಮವಾಗಿ ತರಬೇಕೆಂಬ ಹಿನ್ನೆಲೆಯಲ್ಲಿ ನಿರ್ದೇಶಕ ಯೋಗರಾಜ್ ಭಟ್ ಕೆಲಸ ಮಾಡುತ್ತಿದ್ದಾರೆ. ಕುದುರೆಮುಖದ ರಮ್ಯ ಮನೋಹರವಾದ ಸ್ಥಳಗಳಲ್ಲಿ ಹಾಡು ಮತ್ತು ದೃಶ್ಯಗಳ ಚಿತ್ರೀಕರಣ  ನಡೆಯುತ್ತಿದೆ.

ಸಿನಿಮಾದ ಆರಂಭಿಕ ಹಾಡಿನ ಚಿತ್ರೀಕರಣಕ್ಕಾಗಿ ಬೆಂಕಿ ಮತ್ತು ಬೆಳಕಿನ ಸೆಟ್ ಹಾಕಲಾಗಿತ್ತು. ಅರ್ಜನ್ ಜನ್ಯ ಸಂಗೀತ  ಸಂಯೋಜಿಸಿರುವ ಗೀತೆಯೊದಕ್ಕೆ ಗಣೇಶ್, ದಿಗಂತ್ ಮತ್ತು ಪವನ್ ಕುಮಾರ್ ಹೆಜ್ಜೆ ಹಾಕಿದರು. 350 ಜ್ಯೂನಿಯರ್ ಆರ್ಟಿಸ್ಟ್ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

ಈ ಸಿನಿಮಾಗಾಗಿ ಗಣೇಶ್ ಮತ್ತು ದಿಗಂತ್ ಕಠಿಣವಾದ ವರ್ಕೌಟ್ ಮಾಡಿದ್ದಾರೆ. ಪವನ್ ಕುಮಾರ್ ಮೂವಾಯ್ ತೈ ಅಭ್ಯಾಸ ಮಾಡಿದ್ದಾರೆ. ಮೂವರು ಕೂಡ ಅತ್ಯುತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಸೂರಜ್ ಪ್ರೊಜಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾದಲ್ಲಿ ಅನಂತ್ ನಾಗ್, ವೈಭವ ಸಾನಿಧ್ಯಾ, ಶರ್ಮಿಳಾ ಮಾಂಡ್ರೆ ಮುಂತಾದವರು ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com