

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಶೃತಿ ಕಾರು ಚಾಲಕನಾಗಿದ್ದ ಮಂಜುನಾಥ್ ಸಿಂಗ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರನಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾಚೋನಹಳ್ಳಿ ಗ್ರಾಮದ ಬಳಿ ನಡೆದಿದೆ.
ಮಾಗಡಿ ರಸ್ತೆ ಫಾರೆಸ್ಟ್ ಗೇಟ್ಸಮೀಪ ಮರವೊಂದಕ್ಕೆ ನೇಣು ಹಾಕಿಕೊಂಡಿರುವ ಮಂಜುನಾಥ್ ಸಿಂಗ್ (25) ಕೆಲವು ವರ್ಷಗಳಿಂದ ನಟಿ ಶೃತಿ ಮತ್ತು ಶರಣ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಮೂಲತಃಅ ಚಿಕ್ಕಮಗಳೂರಿನ ಬೆಳವಾಡಿಯವರಾದ ಮಂಜುನಾಥ್ ಸುಮಾರು ಹದಿನೈದು ವರ್ಷಗಳಿಂದ ಮಾಚೋಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಮಂಜುನಾಥ್ ನಿನ್ನೆ ಕಡಬಗೆರೆಯಲ್ಲಿ ನಡೆಇದ್ದ ಪಾರ್ಟಿಗೆ ಹೋಗಿದ್ದನೆನ್ನಲಾಗಿದ್ದು ಆ ನಂತರ ಟವೆಲ್ ನಿಂದ ಕತ್ತಿಗೆ ಸುತ್ತಿಕೊಂಡು ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತನ ಸಾವಿನ ಕುರಿತು ಹಲವು ಅನುಮಾನಗಳಿದ್ದು ಸೂಕ್ತ ತನಿಖೆಯಾಗಬೇಕೆಂದು ಮೃತನ ಕುಟುಂಬ ಆಗ್ರಹಿಸಿದೆ.
ಘಟನೆ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
Advertisement