ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ-ನಟ ದ್ವಾರಕೀಶ್ ಅವರು ಆತ್ಮೀಯ ಸ್ನೇಹಿತನನ್ನು ನೆನಪಿಸಿಕೊಂಡು ಸಾರ್ವಜನಿಕವಾಗಿ ಕಣ್ಣೀರಿಟ್ಟಿದ್ದಾರೆ.
ನಿನ್ನೆ ನಡೆದ ಪಡ್ಡೆಹುಲಿ ಚಿತ್ರದ ಸಾಂಗ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದ್ವಾರಕೀಶ್ ಅವರು ದಿವಂಗತ ಡಾ. ವಿಷ್ಣುವರ್ಧನ್ ಅವರನ್ನು ನೆನೆದು ಕಣ್ಣೀರಿಟ್ಟಿದ್ದಾರೆ.
ವಿಷ್ಣುವರ್ಧನ್ ಜೊತೆ ನಾನು ಸುಮಾರು 19 ಚಿತ್ರಗಳನ್ನು ಮಾಡಿದ್ದೇನೆ. ಅವನನ್ನು ಮರೆಯಲು ಸಾಧ್ಯವೇ ಇಲ್ಲ. ವಿಷ್ಣುವರ್ಧನ್ ಬಗ್ಗೆ ಮಾತನಾಡುವುದು ಎಂದರೆ ನನಗೆ ಬಹಳ ದುಃಖವಾಗುತ್ತದೆ. ನಾನು ವಿಷ್ಣು ಇಲ್ಲ ಅಂತ ತಿಳಿದುಕೊಂಡಿಲ್ಲ. ಇಲ್ಲೇ ನನ್ನ ಜೊತೆಯಲ್ಲೇ ಇದ್ದಾನೆ ಎಂದರು.
ಇನ್ನು ಪಡ್ಡೆಹುಲಿ ಚಿತ್ರದಲ್ಲಿ ವಿಷ್ಣುವರ್ಧನ್ ಬಗ್ಗೆ ಕೊಂಡಾಡಿ, ಅವರ ಬಗ್ಗೆ ಹೇಳಿ, ಸೊಗಸಾಗಿ ಹಾಡನ್ನು ಪಡ್ಡೆಹುಲಿ ಚಿತ್ರತಂಡ ಮಾಡಿದೆ ಎಂದರು.