'ಪೈಲ್ವಾನ್' ಸಿನಿಮಾ ಟೈಟಲ್ ಸಾಂಗ್ ಚಿತ್ರೀಕರಣಕ್ಕೆ ಎರಡೂವರೆ ಕೋಟಿ ರು. ವೆಚ್ಚ!

ಎಸ್ ಕೃಷ್ಣ ನಿರ್ದೇಶನ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಶೂಟಿಂಗ್ ಬಹುತೇಕ ಮುಗಿದಿದ್ದು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.
ಸುದೀಪ್
ಸುದೀಪ್
Updated on
ಎಸ್ ಕೃಷ್ಣ ನಿರ್ದೇಶನ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಶೂಟಿಂಗ್ ಬಹುತೇಕ ಮುಗಿದಿದ್ದು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.
ಸದ್ಯ ಹಾಡೊಂದರ ಶೂಟಿಂಗ್ ಆರಂಭವಾಗಿದೆ, ಸುಮಾರು ಎರಡೂವರೆ ಕೋಟಿ ರು ವೆಚ್ಚದಲ್ಲಿ ಈ ಸಿನಿಮಾದ ಟೈಟಲ್ ಸಾಂಗ್ ಚಿತ್ರೀಕರಣ ನಡೆಯಲಿದೆ. ಆರ್ ಆರ್ ಆರ್ ಮೋಷನ್ ಪಿಕ್ಟರ್ ಅಡಿಯಲ್ಲಿ ಎಸ್ .,ಕೃಷ್ಣ ಸಿನಿಮಾ ನಿರ್ಮಿಸುತ್ತಿದ್ದಾರೆ. ಬಾಲಿವುಡ್ ಕೊರಿಯೊಗ್ರಾಪರ್ ಗಣೇಶ್ ಆಚಾರ್ಯ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.
ಸುದೀಪ್ ಗಾಗಿ ಇಂಡ್ರುಡಕ್ಟರಿ ಸಾಂಗ್  ಮಾಡತ್ತಿದ್ದಾರೆ. ಹೈ ಬಜೆಟ್ ಹಾಡಿನ ಚಿತ್ರೀಕರಣಕ್ಕಾಗಿ ಮುಂಬಯಿಯಿಂದ ಸುಮಾರು 250 ಮಂದಿ ಡ್ಯಾನ್ಸರ್ ಬರಲಿದ್ದಾರೆ, ಬಾರೋ ಪೈಲ್ವಾನ್ ಎಂಬ ಹಾಡಿಗೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ, ಅರ್ಜುನ್ಯ ಜನ್ಯ ಸಂಗೀತ ನೀಡಿದ್ದಾರೆ, ಮುಂದಿನ 5 ದಿನಗಳಲ್ಲಿ ಹಾಡಿಗಾಗಿ ಶೂಟಿಂಗ್ ನಡೆಯಲಿದೆ.
ಸುದೀಪ್ ಮತ್ತು ನಟಿ ಆಕಾಂಕ್ಷಾ ಸಿಂಗ್ ಅವರಿಗಾಗಿ ಡ್ಯುಯೆಟ್ ಹಾಡೊಂದು ಬಾಕಿಯಿದೆ.ರಾಜು ಸುಂದರಮ್ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com