ಸಿನಿಮಾ ರಂಗಕ್ಕೆ ಬಂದು 33 ವರ್ಷ: 125ನೇ ಚಿತ್ರ ಘೋಷಿಸಿದ ನಟ ಶಿವರಾಜ್ ಕುಮಾರ್!

1986 ರಿಂದ 2019ರ ವರೆಗೂ ಸುಮಾರು 33 ವರ್ಷಗಳ ಕನ್ನಡ ಚಿತ್ರರಂಗದಲ್ಲಿ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್, ಯಶಸ್ವಿ ಪ್ರಯಾಣ ನಡೆಸಿಕೊಂಡು ಬಂದಿದ್ದಾರೆ.
ಶಿವರಾಜ್ ಕುಮಾರ್
ಶಿವರಾಜ್ ಕುಮಾರ್
1986 ರಿಂದ 2019ರ ವರೆಗೂ ಸುಮಾರು 33 ವರ್ಷಗಳ ಕನ್ನಡ ಚಿತ್ರರಂಗದಲ್ಲಿ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್, ಯಶಸ್ವಿ ಪ್ರಯಾಣ ನಡೆಸಿಕೊಂಡು ಬಂದಿದ್ದಾರೆ.
ಸದ್ಯ ಪಿ. ವಾಸು ಅವರ ಸಿನಿಮಾಗಾಗಿ ಕೇರಳದಲ್ಲಿ ಶೂಟಿಂಗ್ ನಲ್ಲಿದ್ದಾರೆ, 33 ವರ್ಷಗಳ ಕಾಲದ ನನ್ನ ಪ್ರಯಾಣವನ್ನು ಹೇಗೆ ವಿವರಿಸುವುದು ನನಗೆ ತಿಳಿಯುತ್ತಿಲ್ಲ,
ನಾನು ಅದೃಷ್ಟ ಮಾಡಿದ್ದೇನೆ, ವಿಶೇಷವಾಗಿ ಕನ್ನಡ ಇಂಡಸ್ಟ್ರಿ, ಅಭಿಮಾನಿಗಳು ಮತ್ತು ಸಹೋದ್ಯೋಗಿಗಳನ್ನು ಪಡೆಯಲು ನಾನು ಅದೃಷ್ಟ ಮಾಡಿದ್ದೇನೆ, ಪ್ರತಿ ವರ್ಷವೂ ನನಗೆ ಹೊಸತು, ಅದನ್ನು ಊಹಿಸಲು ಸಾಧ್ಯವಿಲ್ಲ, ಜನಗಳೇ ನನ್ನ ಶಕ್ತಿ ಎಂದು ಶಿವಣ್ಣ ಹೇಳಿದ್ದಾರೆ.
ವಿಮರ್ಶೆಗಳು ನನ್ನನ್ನು ಮತ್ತಷ್ಟು ಉತ್ತಮವಾಗಿಸಿವೆ, 56ನೇ ವಯಸ್ಸಿನಲ್ಲೂ ಶಿವರಾಜ್ ಕುಮಾರ್ ಬ್ಯುಸಿಯಾಗಿರುವ ನಟರಾಗಿದ್ದಾರೆ, ಅವರಿಗೆ ಹಲವು ಪ್ರಾಜೆಕ್ಟ್ ಗಳು ಕೈಯ್ಯಲ್ಲಿವೆ, ಅವರ ಜೊತೆಗೆ ಯುವ ನಟರು ಸ್ಪರ್ಧಿಸಲು ಸಾದ್ಯವಿಲ್ಲ, ಇನ್ನೂ ಇಂಡಸ್ಟ್ರಿಯಲ್ಲಿರುವ ಅಪ್ಪು, ದರ್ಶನ್, ಯಶ್, ಸುದೀಪ್, ಗಣೇಶ್, ಮತ್ತು ಧ್ರುವ ತುಂಬಾ ಒಳ್ಳೆಯ ನಟರಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಚಿತ್ರರಂಗಕ್ಕೆ ಹೊಸಬರು ಆಗಮಿಸುತ್ತಿದ್ದಾರೆ, ಅವರ ಜೊತೆ ಕೆಲಸ ಮಾಡಲು ನಾನು ಬಯಸುತ್ತೇನೆ, ನಿರ್ಮಾಪಕರು, ನಿರ್ದೇಶಕರು, ಕಥೆ ನನಗೆ ಪ್ರತಿಯೊಂದು ನನ್ನಲ್ಲಿ ಹೊಸ ಆಸಕ್ತಿ ಮೂಡಿಸುತ್ತದೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ. 
ನನಗೀಗ 56 ವರ್ಷ. ಆದರೆ ನಾನು 30 ವರ್ಷದ ಯುವಕನಂತೆ ವರ್ತಿಸಲು ಸಾಧ್ಯವಿಲ್ಲ, ಅದನ್ನು ಪರದೆಯ ಮೇಲೆ ನಾನು ತೋರಿಸಬಹುದು, ಆದರೆ ನೈಜವಾಗಿ ಅದು ಸಾಧ್ಯವಿಲ್ಲ,  ನನಗೆ ಆರೋಗ್ಯಯುತ ಸ್ಪರ್ಧೆಯಲ್ಲಿ ನನಗೆ ನಂಬಿಕೆ ಎಂದು ಹೇಳಿದ್ದಾರೆ.
ಈ ವರ್ಷ ಶಿವಣ್ಣ ಅವರಿಗೆ ಬಹಳ ವಿಶೇಷವಾದದ್ದು, ತಮ್ಮದೇ ಆದ ಶ್ರೀಮುತ್ತಿ ಪ್ರೊಡಕ್ಷನ್  ಆರಂಭಿಸುತ್ತಿದ್ದಾರೆ, ನನ್ನ ತಾಯಿ ಹಾಗೂ ನನ್ನ ಪತ್ನಿ ಗೀತಾ ಕೂಡ ನಿರ್ಮಾಪಕರಾಗಿದ್ದಾರೆ,  ನನ್ನ ಮಗಳು ನಿವೇದಿತಾ ಕೂಡ ವೆಬ್ ಸಿರೀಸ್ ಆರಂಭಿಸಿದ್ದಾಳೆ, ಗೀತ್ ನಿರ್ಮಾಪಕಿಯಾಗಿದ್ದು ನನಗೆ ತುಂಬಾ ಸಂತೋಷ ತಂದಿದೆ, ನನಗೆ 33 ವರ್ಷಗಳ ನಟನಾ ಅನುಭವವಿದ್ದರೂ ಆಕೆಯ ಮುಂದೆ ನನಗೆ ನಾನು ಇನ್ನೂ ಹೊಸಬನಂತೆ ಅನಿಸುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನೂ ಚಿತ್ರರಂಗಕ್ಕೆ ಬಂದು 33 ವರ್ಷ ಆದ ಹಿನ್ನೆಲೆಯಲ್ಲಿ ತಮ್ಮ 125ನೇ ಸಿನಿಮಾವನ್ನು ಶಿವಣ್ಣ ಘೋಷಿಸಿದ್ದಾರೆ, ನರ್ತನ್ ನಿರ್ದೇಶನದ ಭೈರತಿ ರಣಗಲ್ 125ನೇ ಚಿತ್ರವಾಗಿದ್ದು, ತಮ್ಮದೇ ಪ್ರೊಡಕ್ಷನ್ ಅಡಿಯಲ್ಲಿ ಮೂಡಿ ಬರುತ್ತಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com