ಸ್ಯಾಂಡಲ್‍ವುಡ್ ನಟಿಯನ್ನು ವರಿಸಿದ ಕ್ರಿಕೆಟಿಗ, ಬಿಗ್ಬಾಸ್ ಖ್ಯಾತಿಯ ಅಯ್ಯಪ್ಪ!

ಬಿಗ್ ಬಾಸ್ ಮಾಜಿ ಸ್ಪರ್ಧಿ, ಕ್ರಿಕೆಟಿಗ ಎನ್ ಸಿ ಅಯ್ಯಪ್ಪ ಅವರು ಸ್ಯಾಂಡಲ್‍ವುಡ್ ನಟಿ ಅನುಷಾ ಪೂವಮ್ಮ ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅಯ್ಯಪ್ಪ ಮದುವೆ ಚಿತ್ರ
ಅಯ್ಯಪ್ಪ ಮದುವೆ ಚಿತ್ರ
ವಿರಾಜಪೇಟೆ: ಬಿಗ್ ಬಾಸ್ ಮಾಜಿ ಸ್ಪರ್ಧಿ, ಕ್ರಿಕೆಟಿಗ ಎನ್ ಸಿ ಅಯ್ಯಪ್ಪ ಅವರು ಸ್ಯಾಂಡಲ್‍ವುಡ್ ನಟಿ ಅನುಷಾ ಪೂವಮ್ಮ ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 
ಕೊಡವ ಸಂಪ್ರದಾಯದಂತೆ ಎನ್ ಸಿ ಅಯ್ಯಪ್ಪ ಹಾಗೂ ಅನುಷಾ ಅವರ ವಿವಾಹ ನೆರವೇರಿದ್ದು ಮದುವೆಗೆ ಎರಡು ಕುಟುಂಬದವರು, ಆಪ್ತರು ಹಾಗೂ ಸ್ನೇಹಿತರು ಭಾಗಿಯಾಗಿದ್ದರು. 
ಅನುಷಾ ಅವರು ಕರ್ವ, ಕಥಾ ವಿಚಿತ್ರ, ಲೈಫ್ ಸೂಪರ್, ಪಾನಿಪೂರಿ ಚಿತ್ರಗಳಲ್ಲಿ ಅಭಿನಯಿಸಿದ್ದರು. ಕಳೆದ ವರ್ಷ ಅಯ್ಯಪ್ಪ ಮತ್ತು ಅನುಷಾ ಅವರ ನಿಶ್ಚಿತಾರ್ಥ ಬೆಂಗಳೂರಿನಲ್ಲಿ ನಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com